ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!

ಗಂಡ ಹೆಂಡ್ತಿ ಅಂದ್ಮೇಲೆ ಸಣ್ಣ, ಪುಟ್ಟ ಜಗಳ ಇದ್ದದ್ದೇ. ಹಾಗಂತ ಏನೂ ಅರಿಯದ ಪುಟ್ಟ ಕಂದಮ್ಮಗಳ ಮೇಲೆ ಕೋಪ ತೋರಿಸ್ತಾರೆ ಅಂದರೆ ಇದು ಪಾಪಿ ದುನಿಯಾನೇ.

ಮೈಸೂರಲ್ಲಿ ಮಗುವನ್ನ ಮೋರಿಗೆಸೆದ ಹೆಮ್ಮಾರಿ: ಕೋಲಾರದಲ್ಲಿ ಹೆತ್ತವರಿಂದ್ಲೇ ಕೊಲೆ ಶಂಕೆ!
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Nov 22, 2023 | 10:36 AM

ಕೋಲಾರ: ಮಕ್ಕಳಿಲ್ಲ ಅಂತಾ ಕಂಡಕಂಡ ದೇವರಿಗೆ ಮೊರೆ ಹೋಗ್ತಾರೆ, ಆಸ್ಪತ್ರೆಗಳಿಗೆ ಅಲೆದಾಡ್ತಾರೆ. ಆದ್ರೆ ಈ ನೀಚರು ಮಾತ್ರ ಯಾವ ತಂದೆ-ತಾಯಿಯೂ ಮಾಡದ ನೀಚಕೃತ್ಯ ಮಾಡಿದ್ದಾರೆ. ಕೂಸು ಹುಟ್ಟಿ 6 ತಿಂಗಳು ತುಂಬೋ ಮುನ್ನವೇ ಮಾಡಬಾರದ್ದನ್ನ ಮಾಡಿದ್ದಾರೆ.

ಒಂದೂವರೆ ತಿಂಗಳ ಹಸುಗೂಸನ್ನೇ ಕೊಂದರಾ ಹೆತ್ತವರು? ನಿಜ.. ಕೇಳೋಕೆ ನಮಗೆ ಹಿಂಸೆ ಅನ್ನಿಸುತ್ತೆ. ಆದ್ರೆ ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಇಂಥಾದ್ದೇ ಮಾತು ಕೇಳಿ ಬಂದಿದೆ. ರಘುಪತಿ ಹಾಗೂ ಹರ್ಷಿತ ದಂಪತಿ ಒಂದೂವರೆ ತಿಂಗಳ ತಮ್ಮ ಹೆಣ್ಣು ಮಗು ಬೆಳಗ್ಗೆ ನಾಪತ್ತೆಯಾಗಿದೆ ಅಂತಾ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಕೂಡ್ಲೇ ಸ್ಪಾಟ್​ಗೆ ಬಂದ ಖಾಕಿ ಟೀಮ್ ಪರಿಶೀಲನೆ ನಡೆಸ್ತಿತ್ತು.

ಈ ವೇಳೆ ಪೊಲೀಸರ ಶ್ವಾನ ಮನೆ ಬಳಿಯೇ ಇದ್ದ ಸಂಪ್ ಬಳಿ ಓಡಾಡಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಸಂಪ್​ನಲ್ಲಿ ಮಗು ಶವ ಪತ್ತೆಯಾಗಿದೆ. ಇನ್ನು ಹೆತ್ತವರೇ ಹೆಣ್ಣು ಮಗು ಅಂತಾ ಕೊಂದಿದ್ದಾರೆಂದು ಸಂಬಂಧಿಕರು ಆರೋಪಿಸ್ತಿದ್ದಾರೆ. ಸದ್ಯ ಪೊಲೀಸರು ಪೋಷಕರನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಪತಿ ಜೊತೆ ಜಗಳಕ್ಕೆ ಮಗುವನ್ನೇ ಮೋರಿಗೆ ಎಸೆದ ಹೆಮ್ಮಾರಿ ಕೋಲಾರದಲ್ಲಿ ಆ ಕಥೆಯಾದ್ರೆ ಮೈಸೂರಲ್ಲಿ 6 ತಿಂಗಳ ಕೂಸನ್ನೇ ಹೆಮ್ಮಾರಿ ತಾಯಿ ಚರಂಡಿಗೆ ಎಸೆದಿದ್ದಾಳೆ. ಮೈಸೂರಿನ‌ ವಿದ್ಯಾರಣ್ಯಪುರಂ ನಿವಾಸಿ ರೇಣುಕಾರಾಧ್ಯ ಹಾಗೂ ರಾಣಿ ದಂಪತಿ ನಡುವೆ ಜಗಳವಾಗಿದೆ. ಆದ್ರೆ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನೇ ಮೋರಿಗೆ ಬಿಸಾಡಿದ್ದಾಳೆ‌.

ಮೋರಿಗೆ ಬಿದ್ದ ವೇಳೆ ಕಾಲಿಗೆ ಗಾಯವಾಗಿ, ಮಗು ಚಿರಾಡಿದೆ. ಕೂಡ್ಲೇ ಸ್ಥಳೀಯರು ಮಗುವನ್ನ ಮೇಲೆತ್ತಿ ಸ್ನಾನ ಮಾಡಿಸಿದ್ದಾರೆ. ಅಷ್ಟ್ರಲ್ಲಿ ಪಾಪಿ ತಂದೆ ಸ್ಥಳಕ್ಕೆ ಬಂದು ಅಸಲಿ ವಿಷ್ಯ ಹೇಳಿದ್ದು, ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ರು. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಹೆತ್ತವರಿಗೆ ಕೌನ್ಸಿಲಿಂಗ್ ನಡೆಸಲಾಗಿದೆ.

ಗಂಡ ಹೆಂಡ್ತಿ ಅಂದ್ಮೇಲೆ ಸಣ್ಣ, ಪುಟ್ಟ ಜಗಳ ಇದ್ದದ್ದೇ. ಹಾಗಂತ ಏನೂ ಅರಿಯದ ಪುಟ್ಟ ಕಂದಮ್ಮಗಳ ಮೇಲೆ ಕೋಪ ತೋರಿಸ್ತಾರೆ ಅಂದರೆ ಇದು ಪಾಪಿ ದುನಿಯಾನೇ.

Published On - 8:02 pm, Tue, 18 February 20

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು