ಕಾರು ಬಾಡಿಗೆ ಪಡೆದು ವಂಚಿಸುತ್ತಿದ್ದ ನಟೋರಿಯಸ್ ಗ್ಯಾಂಗ್ ಅಂದರ್!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಬಾಡಿಗೆಗೆ ಪಡೆದು ವಂಚನೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಖಲೀಲ್ ಉಲ್ಲಾ ಹಾಗೂ ಅಕ್ಷಯ್ ಬಂಧಿತ ಆರೋಪಿಗಳು. ಮೊದಲಿಗೆ ಆರೋಪಿಗಳು ಕಾರು ಮಾಲೀಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ಪರಿಚಯಸ್ಥರಿಗೆ ಕಾರ್ ಬಾಡಿಗೆ ಬೇಕು ಹೆಚ್ಚು ಹಣ ನೀಡ್ತಾರೆ ಅಂತ ಕಥೆ ಹೇಳುತ್ತಿದ್ರು. ಮಧ್ಯವರ್ತಿಯಾಗಿ ಕೆಲಸ ಮಾಡುತಿದ್ದ ಅಕ್ಷಯ್ ಬಣ್ಣ ಬಣ್ಣದ ಕಥೆ ಹೇಳುತ್ತಿದ್ದ. ಅದೇ ರೀತಿ ಕೆಲ ದಾಖಲೆಗಳನ್ನು ಪಡೆದು ಮಾಲೀಕರು ಕಾರುಗಳನ್ನು ಬಾಡಿಗೆಗೆ […]
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಬಾಡಿಗೆಗೆ ಪಡೆದು ವಂಚನೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಖಲೀಲ್ ಉಲ್ಲಾ ಹಾಗೂ ಅಕ್ಷಯ್ ಬಂಧಿತ ಆರೋಪಿಗಳು.
ಮೊದಲಿಗೆ ಆರೋಪಿಗಳು ಕಾರು ಮಾಲೀಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ಪರಿಚಯಸ್ಥರಿಗೆ ಕಾರ್ ಬಾಡಿಗೆ ಬೇಕು ಹೆಚ್ಚು ಹಣ ನೀಡ್ತಾರೆ ಅಂತ ಕಥೆ ಹೇಳುತ್ತಿದ್ರು. ಮಧ್ಯವರ್ತಿಯಾಗಿ ಕೆಲಸ ಮಾಡುತಿದ್ದ ಅಕ್ಷಯ್ ಬಣ್ಣ ಬಣ್ಣದ ಕಥೆ ಹೇಳುತ್ತಿದ್ದ. ಅದೇ ರೀತಿ ಕೆಲ ದಾಖಲೆಗಳನ್ನು ಪಡೆದು ಮಾಲೀಕರು ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಬಾಡಿಗೆ ಪಡೆದ ಕಾರ್ಗೆ ತಿಂಗಳಿಗೆ ಇಂತಿಷ್ಟು ಎಂದು ಮಾಲೀಕರಿಗೆ ಆರೋಪಿಗಳು ಹಣ ಕೊಡುತ್ತಿದ್ದರು.
ಸಿನಿಮೀಯ ರೀತಿಯಲ್ಲಿ ವಂಚಿಸುತ್ತಿದ್ದ ಗ್ಯಾಂಗ್: ಎರಡು ತಿಂಗಳಲ್ಲಿ ಹಲವು ಬಾರಿ ಕಾರ್ ಪಡೆದು ಸರಿಯಾದ ಸಮಯಕ್ಕೆ ಹಣ ನೀಡಿ ಕಾರ್ ಮಾಲೀಕನಿಗೆ ವಂಚಕರು ಹತ್ತಿರವಾಗುತ್ತಿದ್ದರು. ಮಾಲೀಕರಿಗೆ ಹತ್ತಿರವಾದ ಬಳಿಕ ಯಾವುದೇ ದಾಖಲೆ ನೀಡದೆ ಕಾರ್ ಬಾಡಿಗೆಗೆ ಪಡೆಯುತ್ತಿದ್ದರು. ನಂತರ ಆ ಕಾರುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಆ ಬಳಿಕ ಕದ್ದ ಕಾರನ್ನು ಬೇರೊಬ್ಬರಿಗೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು.
8 ಕಾರುಗಳು ಜಪ್ತಿ: ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ವಿಜಯ್ ಗೌಡ ಎಂಬುವರು ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಖತರ್ನಾಕ್ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಇದೇ ಮಾದರಿಯಾಗಿ 10 ಕಾರುಗಳನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ವಿವಿಧ ಮಾದರಿಯ 8 ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಪರಾರಿಯಾದ ಪ್ರಮುಖ ಆರೋಪಿ ನಿರಂಜನ್ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
Published On - 10:48 am, Wed, 19 February 20