ಸಾಲದ ಶೂಲಕ್ಕೆ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ, ಎಲ್ಲಿ?

| Updated By: KUSHAL V

Updated on: Aug 12, 2020 | 10:54 AM

ಬಳ್ಳಾರಿ: ಸಾಲಕ್ಕೆ ಹೆದರಿ ಪೋಷಕರಿಬ್ಬರು ಮಕ್ಕಳನ್ನ ಕೆರೆಗೆ ತಳ್ಳಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ನಡೆದಿದೆ. ಖುಷಿ(3) ಮತ್ತು ಚಿರು(1) ಮೃತ ಮಕ್ಕಳು. ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಚಿರಂಜೀವಿ ಹಾಗೂ ಆತನ ಪತ್ನಿ ನಂದಿನಿಯಿಂದ ಈ ಕೃತ್ಯ ನಡೆದಿದೆ. ಸಾಲ ಮಾಡಿಕೊಂಡಿದ್ದ ಚಿರಂಜೀವಿ ಕಳೆದ ಐದು ತಿಂಗಳಿಂದ ಚಂದ್ರಶೇಖರಪುರದಲ್ಲಿರುವ ಪತ್ನಿ ಮನೆಯಲ್ಲಿ ವಾಸವಾಗಿದ್ದನು. ಸಾಲಬಾಧೆ ತಾಳಲಾಗದೆ ಇಂದು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ರು. ಆರಂಭದಲ್ಲಿ ಮಕ್ಕಳಾದ ಖುಷಿ, ಚಿರು […]

ಸಾಲದ ಶೂಲಕ್ಕೆ ಹೆತ್ತ ಮಕ್ಕಳನ್ನೇ ಬಲಿಕೊಟ್ಟ ದಂಪತಿ, ಎಲ್ಲಿ?
Follow us on

ಬಳ್ಳಾರಿ: ಸಾಲಕ್ಕೆ ಹೆದರಿ ಪೋಷಕರಿಬ್ಬರು ಮಕ್ಕಳನ್ನ ಕೆರೆಗೆ ತಳ್ಳಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ನಡೆದಿದೆ. ಖುಷಿ(3) ಮತ್ತು ಚಿರು(1) ಮೃತ ಮಕ್ಕಳು.

ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಚಿರಂಜೀವಿ ಹಾಗೂ ಆತನ ಪತ್ನಿ ನಂದಿನಿಯಿಂದ ಈ ಕೃತ್ಯ ನಡೆದಿದೆ. ಸಾಲ ಮಾಡಿಕೊಂಡಿದ್ದ ಚಿರಂಜೀವಿ ಕಳೆದ ಐದು ತಿಂಗಳಿಂದ ಚಂದ್ರಶೇಖರಪುರದಲ್ಲಿರುವ ಪತ್ನಿ ಮನೆಯಲ್ಲಿ ವಾಸವಾಗಿದ್ದನು.
ಸಾಲಬಾಧೆ ತಾಳಲಾಗದೆ ಇಂದು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ರು.

ಆರಂಭದಲ್ಲಿ ಮಕ್ಕಳಾದ ಖುಷಿ, ಚಿರು ಇಬ್ಬರನ್ನು ಕೆರೆಗೆ ದೂಡಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ನೀರಿಗೆ ಬೀಳಲು ಹೆದರಿ ಹಿಂದೇಟು ಹಾಕಿದ್ದಾರೆ. ಪತ್ನಿಯನ್ನ ಕೆರೆ ಬಳಿ ಬಿಟ್ಟು ಪತಿ ಚಿರಂಜೀವಿ ಎಸ್ಕೇಪ್ ಆಗಿದ್ದಾನೆ.

ಸ್ಥಳಕ್ಕೆ ಗುಡೇಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲಕ್ಕೆ ಹೆದರಿ ಪೋಷಕರು ತಾವು ಸಾಯದೆ ಮಕ್ಕಳನ್ನ ಕೊಂದಿರುವುದು ನಿಜಕ್ಕೂ ಅಮಾನವೀಯ.