ಅರ್ಚಕ ನಾರಾಯಣ ಆಚಾರ್ ಆಸ್ತಿಪಾಸ್ತಿ ಬಗ್ಗೆ ಅವರ ಚಾಲಕ ನೀಡಿದ ಇಂಚಿಂಚೂ ಮಾಹಿತಿ ಇಲ್ಲಿದೆ!
ಕೊಡಗು: ಬ್ರಹ್ಮಗಿರಿ ಗುಡ್ಡಕುಸಿತ ಪ್ರಕರಣ ಸಂಬಂಧಿಸಿ ಮೃತ ನಾರಾಯಣ ಆಚಾರ್ ಆಸ್ತಿಪಾಸ್ತಿ ಬಗ್ಗೆ ಅವರ ಚಾಲಕ ಇಂಚಿಂಚೂ ಮಾಹಿತಿ ನೀಡಿದ್ದಾರೆ. ನಾರಾಯಣ ಆಚಾರ್ ಕೇವಲ ಅರ್ಚಕರಲ್ಲ ಅವರು ಕೊಟ್ಯಾಧಿಪತಿ. ಆಚಾರ್ ಬಳಿ ಕೋಟಿಗಟ್ಟಲೆ ಆಸ್ತಿ ಇತ್ತು ಎಂದಿದ್ದಾರೆ. ನಾರಾಯಣ ಆಚಾರ್ ಆಸ್ತಿಪಾಸ್ತಿ ನಾರಾಯಣ ಆಚಾರ್ ಬಳಿ 10 ಎಕರೆ ಕಾಫಿ ತೋಟ, 35 ಎಕರೆ ಕಾಡು ತೋಟ ಅದರಲ್ಲಿ ಎರಡು ಎಕರೆ ಏಲಕ್ಕಿ ಬೆಳೆ ಇತ್ತು. ಕೇರಳ ರಸ್ತೆಯಲ್ಲಿ ಆಚರ್ 75 ಎಕರೆ ಭೂಮಿ ಹೊಂದಿದ್ದರು. ಬೆಂಗಳೂರಿನಲ್ಲಿ […]
ಕೊಡಗು: ಬ್ರಹ್ಮಗಿರಿ ಗುಡ್ಡಕುಸಿತ ಪ್ರಕರಣ ಸಂಬಂಧಿಸಿ ಮೃತ ನಾರಾಯಣ ಆಚಾರ್ ಆಸ್ತಿಪಾಸ್ತಿ ಬಗ್ಗೆ ಅವರ ಚಾಲಕ ಇಂಚಿಂಚೂ ಮಾಹಿತಿ ನೀಡಿದ್ದಾರೆ. ನಾರಾಯಣ ಆಚಾರ್ ಕೇವಲ ಅರ್ಚಕರಲ್ಲ ಅವರು ಕೊಟ್ಯಾಧಿಪತಿ. ಆಚಾರ್ ಬಳಿ ಕೋಟಿಗಟ್ಟಲೆ ಆಸ್ತಿ ಇತ್ತು ಎಂದಿದ್ದಾರೆ.
ನಾರಾಯಣ ಆಚಾರ್ ಆಸ್ತಿಪಾಸ್ತಿ ನಾರಾಯಣ ಆಚಾರ್ ಬಳಿ 10 ಎಕರೆ ಕಾಫಿ ತೋಟ, 35 ಎಕರೆ ಕಾಡು ತೋಟ ಅದರಲ್ಲಿ ಎರಡು ಎಕರೆ ಏಲಕ್ಕಿ ಬೆಳೆ ಇತ್ತು. ಕೇರಳ ರಸ್ತೆಯಲ್ಲಿ ಆಚರ್ 75 ಎಕರೆ ಭೂಮಿ ಹೊಂದಿದ್ದರು. ಬೆಂಗಳೂರಿನಲ್ಲಿ ಒಂದು ಬಂಗಲೆ. ತಲಕಾವೇರಿಯಲ್ಲಿ, ಬ್ರಹ್ಮಗಿರಿಯಲ್ಲಿ 40×40 ಅಳತೆಯ ಮನೆ ಇದೆ. ಮನೆಯಲ್ಲಿ ಕ್ವಿಂಟಲ್‌ಗಟ್ಟಲೆ ಮೇಣಸು, ಏಲಕ್ಕಿ ಇತ್ತು ಎಂದು ಸ್ವತಹ ಆಚಾರ್ ಕಾರು ಚಾಲಕ ಜಯಂತ್ ಟಿವಿ9 ಗೆ ಮಾಹಿತಿ ಕೊಟ್ಟಿದ್ದಾರೆ.
ಚಾಲಕ ಜಯಂತ್ ಕೊನೆಯ ಬಾರಿ ಆಚಾರ್ ಭೇಟಿ ಮಾಡಿದ್ದು ಘಟನೆ ಹಿಂದಿನ ದಿನ. ಘಟನೆ ಹಿಂದಿನ ದಿನ 7 ಗಂಟೆಗೆ ಮನೆಗೆ ತೆರಳಿದಾಗ ಮನೆ ಮೇಲೆ ಗುಡ್ಡ ಕುಸಿದಿತ್ತು. ತಕ್ಷಣ ಪಿಡಿಓಗೆ ಕರೆ ಮಾಡಿ ಮಕ್ಕಳಿಗೆ ಮಾಹಿತಿ ನೀಡಿದ್ದರು. ಆಚಾರ್ ಅವರು ನನ್ನನ್ನ ಮಗನಂತೆ ನೋಡಿಕೊಳ್ಳುತ್ತಿದ್ದರು. ಎಲ್ಲಿ ಹೋದರೂ ನಮ್ಮ ಹುಡುಗಾ ಅಂತಾನೆ ಪರಿಚಯ ಮಾಡ್ತಿದ್ರು. ಅವರು ನನಗೆ ಗುರುಗಳ ಸಮಾನ.
ಅವರ ಬಗ್ಗೆ ಸುಳ್ಳು ಅಪಪ್ರಚಾರ ಬೇಡ. ಅವರ ಮನೆಯಲ್ಲಿ ಅಪಾರ ಚಿನ್ನ ಇಲ್ಲ. ಮೆಣಸು ಏಲಕ್ಕಿ ಇದ್ದದ್ದು ನಿಜ. ಮೂರು ಕಡೆ ಒಟ್ಟು 120 ಎಕರೆ ಭೂಮಿ ಇದೆ. ಒಂದು ಮನೆ ಇದೆ. ಎರಡು ಕಾರು ಒಂದು ಜೀಪ್ ಹಾಗೂ ಸ್ಕೂಟರ್ ಇತ್ತು. ಚಿನ್ನ ಇದ್ದೀರಬಹುದು ಆದ್ರೆ ಜನರು ಮಾತನಾಡುವಷ್ಟು ಇಲ್ಲ. ಸುಮ್ಮನೆ ಅವರ ಬಗ್ಗೆ ಅಪಪ್ರಚಾರ ಬೇಡ. ಅವರ ಮಕ್ಕಳು ಯಾವಾಗಲೂ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಘಟನೆ ದಿನವು ಮಾಹಿತಿ ಪಡೆದುಕೊಂಡರು. ಈಗ ಅವರು ನಮ್ಮೊಂದಿಗೆ ಇಲ್ಲ ಅವರ ಪತ್ನಿ ದೇಹ ಬೇಗ ಸಿಗಲಿ ಎಂದು ದುಃಖವನ್ನು ತೋಡಿಕೊಂಡಿದ್ದಾರೆ.