ಕೌಟುಂಬಿಕ ಕಲಹ: ನಾಲೆಗೆ ಹಾರಿ ತಾಯಿ, ಮಕ್ಕಳು ಆತ್ಮಹತ್ಯೆ

|

Updated on: Jan 24, 2020 | 5:36 PM

ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳ್ಳೇನಹಳ್ಳಿಯ ವಿಸಿ ನಾಲೆ ಬಳಿ ನಡೆದಿದೆ. ತಾಯಿ ಜ್ಯೋತಿ(33), 4 ವರ್ಷದ ಪವನ್ ಮತ್ತು 7 ವರ್ಷದ ನಿಸರ್ಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೆಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ನಾಲೆಗೆ ತಾಯಿ ಹಾಗು ಮಕ್ಕಳು ಹಾರುತ್ತಿದ್ದಂತೆ ಘಟನಾ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿ ರಕ್ಷಿಸಲು ಯತ್ನಿಸಿದ್ರೂ ಜ್ಯೋತಿ ಬದುಕುಳಿಯಲಿಲ್ಲ. ನಾಲೆಯಲ್ಲಿ ಕೊಚ್ಚಿ […]

ಕೌಟುಂಬಿಕ ಕಲಹ: ನಾಲೆಗೆ ಹಾರಿ ತಾಯಿ, ಮಕ್ಕಳು ಆತ್ಮಹತ್ಯೆ
Follow us on

ಮಂಡ್ಯ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳ್ಳೇನಹಳ್ಳಿಯ ವಿಸಿ ನಾಲೆ ಬಳಿ ನಡೆದಿದೆ. ತಾಯಿ ಜ್ಯೋತಿ(33), 4 ವರ್ಷದ ಪವನ್ ಮತ್ತು 7 ವರ್ಷದ ನಿಸರ್ಗ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೆಗೆ ಬಿದ್ದು ತಾಯಿ ಮತ್ತು ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ನಾಲೆಗೆ ತಾಯಿ ಹಾಗು ಮಕ್ಕಳು ಹಾರುತ್ತಿದ್ದಂತೆ ಘಟನಾ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿ ರಕ್ಷಿಸಲು ಯತ್ನಿಸಿದ್ರೂ ಜ್ಯೋತಿ ಬದುಕುಳಿಯಲಿಲ್ಲ. ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಕ್ಕಳಿಗಾಗಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.

Published On - 5:36 pm, Fri, 24 January 20