ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್: ಕಲ್ಯಾಣ ಕರ್ನಾಟಕ ರೈತರ ಮೊಗದಲ್ಲಿ ಮಂದಹಾಸ
ರಾಯಚೂರು: ಕೆಂಪು ತೊಗರಿ.. ಕರುನಾಡ ಜನರ ಪಂಚಪ್ರಾಣ. ಇದರ ಸಾಂಬಾರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಇಂಥ ಕೆಂಪು ತೊಗರಿಯನ್ನ ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತೆ. ಇಂಥ ತೊಗರಿಗೆ ಈಗಾಗಲೇ ದೇಶಾದ್ಯಂತ ಭಾರಿ ಡಿಮ್ಯಾಂಡ್ ಇದೆ. ಪ್ರತಿವರ್ಷ ಸಾವಿರಾರು ಟನ್ನಷ್ಟು ತೊಗರಿ ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ನಡುವೆಯೇ ಕೆಂಪು ತೊಗರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ವಿದೇಶಕ್ಕೆ ರಫ್ತು ಮಾಡಲು ಪ್ಲ್ಯಾನ್: ಈ ಹಿನ್ನೆಲೆಯಲ್ಲಿ ತೊಗರಿಯನ್ನ ವಿದೇಶಕ್ಕೆ ರಫ್ತು ಮಾಡಲು […]
ರಾಯಚೂರು: ಕೆಂಪು ತೊಗರಿ.. ಕರುನಾಡ ಜನರ ಪಂಚಪ್ರಾಣ. ಇದರ ಸಾಂಬಾರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಇಂಥ ಕೆಂಪು ತೊಗರಿಯನ್ನ ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತೆ. ಇಂಥ ತೊಗರಿಗೆ ಈಗಾಗಲೇ ದೇಶಾದ್ಯಂತ ಭಾರಿ ಡಿಮ್ಯಾಂಡ್ ಇದೆ. ಪ್ರತಿವರ್ಷ ಸಾವಿರಾರು ಟನ್ನಷ್ಟು ತೊಗರಿ ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ನಡುವೆಯೇ ಕೆಂಪು ತೊಗರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ.
ವಿದೇಶಕ್ಕೆ ರಫ್ತು ಮಾಡಲು ಪ್ಲ್ಯಾನ್: ಈ ಹಿನ್ನೆಲೆಯಲ್ಲಿ ತೊಗರಿಯನ್ನ ವಿದೇಶಕ್ಕೆ ರಫ್ತು ಮಾಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ಲ್ಯಾನ್ ಮಾಡ್ತಿದೆ. ಮೊದಲ ಹಂತದಲ್ಲಿ 100 ಟನ್ ತೊಗರಿಯನ್ನ ವಿದೇಶಕ್ಕೆ ಪೂರೈಸಲು ಭರದ ಸಿದ್ಧತೆ ನಡೀತಿದೆ. ಕಲ್ಯಾಣ ಕರ್ನಾಟಕದಲ್ಲಿ ಬೆಳೆಯೋ ತೊಗರಿಯನ್ನ ಆರು ಜಿಲ್ಲೆಗಳ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ಖರೀದಿಸುತ್ತಿವೆ. ಪ್ರಸಕ್ತ ವರ್ಷವೂ ಪ್ರತಿ ಕ್ವಿಂಟಾಲ್ಗೆ 6,100 ರೂಪಾಯಿಯಂತೆ ಖರೀದಿಸಲಾಗುತ್ತಿದೆ.
ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್: ಇದೀಗ ಅಂತಾರಾಷ್ಟ್ರೀಯ ಮಾನ್ಯತೆ ಕೂಡ ಸಿಕ್ಕಿರೋದ್ರಿಂದ ಕೆಂಪು ತೊಗರಿಗೆ ಇನ್ಮುಂದೆ ವಿದೇಶದಲ್ಲೂ ಡಿಮ್ಯಾಂಡ್ ಸೃಷ್ಟಿಯಾಗಲಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಟ್ನಲ್ಲಿ, ಪ್ರತಿ ವರ್ಷ ಕೇವಲ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡ್ತಿದ್ದ ರೈತರೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೊಗರಿ ಮಾರಾಟ ಆಗೋದ್ರಿಂದ ಹೆಚ್ಚಿನ ಲಾಭ ನಿರೀಕ್ಷಿಸುವಂತಾಗಿದೆ. ಕೃಷಿ ವಿವಿಯ ಈ ಪ್ರಯತ್ನ ಸಕ್ಸಸ್ ಆದ್ರೆ ಕಲ್ಯಾಣ ಕರ್ನಾಟಕ ಭಾಗದ ತೊಗರಿಗೆ ಭಾರಿ ಬೇಡಿಕೆ ಬಂದು ಬೆಳೆಗಾರರಿಗೆ ಬಂಪರ್ ಬೆಲೆ ಸಿಗೋದ್ರಲ್ಲಿ ನೋ ಡೌಟ್.
Published On - 12:56 pm, Fri, 24 January 20