ಚೀನಾಗೆ ಹೊಸ ವರ್ಷ: ಆದ್ರೆ ಸಂಭ್ರಮ ಇಲ್ಲ, ಕೊರೊನಾವೈರಸ್ ಸೂತಕ ಎಲ್ಲ ಕಡೆ!

ಬೀಜಿಂಗ್​: ಕೊರೊನಾ ಅನ್ನೋ ಮಹಾಮಾರಿ ಇಡೀ ಪ್ರಪಂಚವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಅದ್ರಲ್ಲೂ ನೆರೆಯ ಚೀನಾದಲ್ಲಿ ರೋಗ ತುಂಬಾ ವೇಗವಾಗಿ ಹರಡುತ್ತಿದ್ದು, ನೂರಾರು ಮಂದಿ ರೋಗದಿಂದ ಬಳಲುತ್ತಿದ್ದಾರೆ. ಈಗಾಗಲೇ 25 ಜನರನ್ನ ಬಲಿ ಪಡೆದು 830ಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾದ ಕೊರೊನಾ ವೈರಸ್ ಭೀಕರ ರೂಪ ತಾಳಿದೆ. ನಾಳೆಯಿಂದ ಚೀನಾದಲ್ಲಿ ಚಂದ್ರಮಾನ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಈ ಭಯಾನಕ ವೈರಸ್​ನಿಂದ ಜನ ಮುಖಕ್ಕೆ ಹಾಕಿರುವ ಮಾಸ್ಕ್ ತೆಗೆಯಲು ಸಹ ಚಿಂತಿಸುವಂತಾಗಿದೆ. ಅಲ್ಲದೆ ಹೊಸ ವರ್ಷದ […]

ಚೀನಾಗೆ ಹೊಸ ವರ್ಷ: ಆದ್ರೆ ಸಂಭ್ರಮ ಇಲ್ಲ, ಕೊರೊನಾವೈರಸ್ ಸೂತಕ ಎಲ್ಲ ಕಡೆ!
Follow us
ಸಾಧು ಶ್ರೀನಾಥ್​
|

Updated on:Dec 07, 2020 | 11:19 AM

ಬೀಜಿಂಗ್​: ಕೊರೊನಾ ಅನ್ನೋ ಮಹಾಮಾರಿ ಇಡೀ ಪ್ರಪಂಚವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಅದ್ರಲ್ಲೂ ನೆರೆಯ ಚೀನಾದಲ್ಲಿ ರೋಗ ತುಂಬಾ ವೇಗವಾಗಿ ಹರಡುತ್ತಿದ್ದು, ನೂರಾರು ಮಂದಿ ರೋಗದಿಂದ ಬಳಲುತ್ತಿದ್ದಾರೆ. ಈಗಾಗಲೇ 25 ಜನರನ್ನ ಬಲಿ ಪಡೆದು 830ಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾದ ಕೊರೊನಾ ವೈರಸ್ ಭೀಕರ ರೂಪ ತಾಳಿದೆ.

ನಾಳೆಯಿಂದ ಚೀನಾದಲ್ಲಿ ಚಂದ್ರಮಾನ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಈ ಭಯಾನಕ ವೈರಸ್​ನಿಂದ ಜನ ಮುಖಕ್ಕೆ ಹಾಕಿರುವ ಮಾಸ್ಕ್ ತೆಗೆಯಲು ಸಹ ಚಿಂತಿಸುವಂತಾಗಿದೆ. ಅಲ್ಲದೆ ಹೊಸ ವರ್ಷದ ಸಂಭ್ರಮಾಚರಣೆಗೆ ಲಕ್ಷಾಂತರ ಜನರು ಪ್ರಯಾಣ ಕೈಗೊಳ್ಳುವಂತಹ ಸಾಧ್ಯತೆ ಹೆಚ್ಚಿದ್ದು, ವೈರಸ್ ಹರಡುವ ಭೀತಿ ಹೆಚ್ಚಾಗಿದೆ. ಮತ್ತೊಂದೆಡೆ ಚೀನಾದ ನೆರೆ ರಾಷ್ಟ್ರಗಳಾದ ವಿಯೇಟ್ನಾಂ, ಜಪಾನ್, ಹಾಂಕಾಂಗ್, ತೈವಾನ್​ನಲ್ಲಿ ಕೊರೊನಾ ಹಾವಳಿ ಹಬ್ಬಿದ್ದು ಭಾರತದಲ್ಲೂ ಭಯ ಶುರುವಾಗಿದೆ. ಹೀಗೆ ಎಲ್ಲೆಲ್ಲೂ ಆತಂಕ ಮನೆಮಾಡಿರುವಾಗ ಚೀನಾ ಅಮಾನವೀಯ ನಿರ್ಧಾರ ಕೈಗೊಂಡಿದೆ.

ಕೊರೊನಾವೈರಸ್‌ ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನಾವೈರಸ್‌ಗಳು ವೈರಸ್‌ಗಳ ಕುಟುಂಬವಾಗಿದ್ದು, ಇದು ನೆಗಡಿ, ಜ್ವರ ಬರುವಂತೆ ಮಾಡುತ್ತದೆ. ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (MERS) ಮತ್ತು ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ನಂತಹ ತೀವ್ರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ವೈರಸ್‌ಗಳು ಪ್ರಾಣಿಗಳು ಮತ್ತು ಜನರ ನಡುವೆ ಹರಡುತ್ತವೆ.

ಉದಾಹರಣೆಗೆ, ಬೆಕ್ಕುಗಳ ಜೊತೆ ಇರುವುದರಿಂದ ಮನುಷ್ಯರಿಗೆ ಹರಡುತ್ತದೆ ಎಂದು ನಂಬಲಾಗಿದೆ. ಆದರೆ MERS ಒಂದು ರೀತಿಯ ಒಂಟೆ ಮೇಲೆ ಕೂತು ಮನುಷ್ಯರು ಪ್ರಯಾಣಿಸಿದ್ರು ಒಂಟೆಗಳ ಮೂಲಕ ಹರಡುತ್ತದೆ. ಇನ್ನು ಹಲವು ಪ್ರಾಣಿಗಳಲ್ಲಿ ಸೋಂಕು ಇದ್ದರೂ ಮಾನವರಿಗೆ ಹರಡುವುದಿಲ್ಲ.

ಜನವರಿ 7 ರಂದು ಚೀನಾದ ಅಧಿಕಾರಿಗಳು ಗುರುತಿಸಿದ ಮತ್ತು ಪ್ರಸ್ತುತ ಪಡಿಸಿದ ಈಗಿನ2019-nCoV ಎಂದು ಹೆಸರಿಸಲಾದ ಒಂದು ಕಾದಂಬರಿ ಕೊರೊನಾ ವೈರಸ್, ಈ ಹಿಂದೆ ಮಾನವರಲ್ಲಿ ಇಂತಹ ವೈರೆಸ್ ಗುರುತಿಸಲಾಗದ ಹೊಸ ತಳಿ ಎಂದಿದೆ. ಆದರೆ ಈಗ ಅದು ತಿಳಿದ ಮಟ್ಟಿಗೆ ಜನರಿಂದ ಜನರಿಗೆ ಹರಡುತ್ತದೆ ಎಂದು ಸಾಬೀತಾಗಿದೆ.

ಈ ವೈರಸ್ ಎಷ್ಟು ಮಾರಕ? ಕೆಲವು ತಜ್ಞರು ಹೇಳುವಂತೆ ಈಗ ಹರಡಿರುವ ಕೊರೊನಾವೈರಸ್‌ ಬೇರೆ ವಿಧದ ಕರೋನ ವೈರಸ್​ನಷ್ಟು ಮಾರಕವಲ್ಲ. 2002-2003ರಲ್ಲಿ ಚೀನಾದಿಂದ ಹುಟ್ಟಿದ SARS ನಂತಹ ಭಯಾನಕ ವೈರಸ್ ವಿಶ್ವದಾದ್ಯಂತ ಸುಮಾರು 800 ಜನರನ್ನು ಬಲಿ ಪಡೆದಿತ್ತು. ಜೊತೆಗೆ ವ್ಯಾಪಕವಾಗಿ ಹರಡದ ಮರ್ಸ್ ಹೆಚ್ಚು ಮಾರಕವಾಗಿದ್ದು, ಸೋಂಕಿಗೆ ಒಳಗಾದವರಲ್ಲಿ ಮೂರನೇ ಒಂದು ಭಾಗವನ್ನು ಕೊಂದಿತ್ತು.

ಪ್ರಕರಣಗಳು ಎಲ್ಲೆಲ್ಲಿ ವರದಿಯಾಗಿವೆ? ಹೆಚ್ಚಾಗಿ ಚೀನಾದಲ್ಲೇ ಈ ಮಾರಕ ವೈರೆಸ್ ವರದಿಯಾಗಿರುವುದು. ಜನವರಿ 24 ಅಂದರೆ ಇಲ್ಲಿಯ ವರೆಗೆ ಕನಿಷ್ಠ 25 ಮಂದಿ ಈ ಭಯಾನಕ ವೈರೆಸ್​ಗೆ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ವುಹಾನ್ ಸೇರಿದಂತೆ ಚೀನಾದಲ್ಲಿ ಸುಮಾರು 830ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನಾವನ್ನು ಬಿಟ್ಟು, ಥೈಲ್ಯಾಂಡ್​ನಲ್ಲಿ 4 ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕೊರಿಯಾ, ತೈವಾನ್, ಜಪಾನ್ ಮತ್ತು ಅಮೆರಿಕದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಎಲ್ಲಾ ಪ್ರಕರಣಗಳು ವುಹಾನ್‌ನಿಂದ ಬಂದ ಅಥವಾ ಇತ್ತೀಚೆಗೆ ಅಲ್ಲಿಗೆ ಹೋಗಿದ್ದ ಜನರಲ್ಲಿ ಕಾಣಿಸಿಕೊಂಡಿದೆ.

ಬಸ್ ಹೋಗೋದಿಲ್ಲ.. ವಿಮಾನ ಹಾರೋದಿಲ್ಲ! ಎಲ್ಲೆಲ್ಲೂ ಆತಂಕ, ಒಂದು ಕ್ಷಣ ಮಾಸ್ಕ್ ಬಿಚ್ಚಲು ಕೂಡ ಬೆಚ್ಚಿಬೀಳುತ್ತಿರುವ ಜನ. ಅಂದಹಾಗೆ ಚೀನಾದಲ್ಲೀಗ ಎಲ್ಲರ ಮುಖದಲ್ಲೂ ಮಾಸ್ಕ್​ಗಳು ರಾರಾಜಿಸುತ್ತಿವೆ. ಅದು ಮಾಲಿನ್ಯದ ಕಾರಣಕ್ಕಂತೂ ಅಲ್ಲ. ಯಾಕಂದ್ರೆ ಈ ಹಿಂದೆ ಪಲ್ಯೂಷನ್ ಕಾರಣಕ್ಕೆ ಮಾಸ್ಕ್​ಗಳನ್ನ ಕಡ್ಡಾಯವಾಗಿ ಬಳಸ್ತಿದ್ದ ಡ್ರ್ಯಾಗನ್ ನಾಡಿನ ಜನ, ಈಗ ‘ಕೊರೋನಾ’ ಎಂಬ ಮಹಾಮಾರಿಗೆ ಬೆದರಿ ಮಾಸ್ಕ್ ತೊಡುತ್ತಿದ್ದಾರೆ. 25 ಜನರನ್ನ ಬಲಿಪಡೆದು 830ಕ್ಕೂ ಹೆಚ್ಚು ಜನರಲ್ಲಿ ಪತ್ತೆಯಾದ ಕರೋನಾ ವೈರಸ್ ಭೀಕರ ರೂಪ ತಾಳಿದೆ. ಆದ್ರೆ ರೋಗ ನಿಯಂತ್ರಿಸುವ ನೆಪದಲ್ಲಿ ಚೀನಾ ಸರ್ಕಾರ ಅಮಾನವೀಯ ನಿರ್ಧಾರವೊಂದನ್ನ ಕೈಗೊಂಡಿದ್ದು, ಇದರಿಂದ ವುಹಾನ್ ಪ್ರಾಂತ್ಯದ ಜನ ನಲುಗಿ ಹೋಗಿದ್ದಾರೆ.

ರೋಗ ತಡೆಯಲು ಜನರನ್ನ ಕೂಡಿಹಾಕಿದ ಡ್ರ್ಯಾಗನ್! ಚೀನಾದಲ್ಲಿ ಮೊದಲಿಗೆ ಕೊರೋನಾ ಪತ್ತೆಯಾದ ವುಹಾನ್ ಪ್ರಾಂತ್ಯ ಈಗ ಅಕ್ಷರಶಃ ಜೈಲಾಗಿ ಬದಲಾಗಿದೆ. ಈ ಭಾಗದಲ್ಲಿ ಯಾವುದೇ ಬಸ್, ವಿಮಾನ ಅಥವಾ ವಾಹನಗಳ ಚಲಾಯಿಸದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಹೊರಗೆ ಹೋಗುವ ಹಾಗೂ ಒಳಗೆ ಬರುವ ವಾಹನಗಳಿಗೆ ನಿರ್ಬಂಧ ಹೇರಿ ಇಡೀ ವುಹಾನ್ ಪ್ರಾಂತ್ಯವನ್ನ ಜೈಲಿನಂತೆ ಬಂದ್ ಮಾಡಲಾಗಿದೆ. ಹೀಗಾಗಿ ಕೋಟ್ಯಂತರ ಮಂದಿ ತಮ್ಮ ಪ್ರಾಂತ್ಯದಲ್ಲೇ ಬಂಧಿತರಾಗಿದ್ದಾರೆ. ವುಹಾನ್ ರಾಜಧಾನಿ ಹುಬೈ ಸ್ತಬ್ಧವಾಗಿದ್ದು, ದಿನಬಳಕೆ ವಸ್ತುಗಳು ಸಿಗದಾಗಿವೆ. ಗಮನಾರ್ಹ ಸಂಗತಿಯೆಂದರೆ ಕೊರೋನಾ ರೋಗದಿಂದ ಬಚಾವ್ ಆಗಲು ಕಡ್ಡಾಯವಾಗಿ ಬೇಕಿರುವ ಮಾಸ್ಕ್​ಗಳಿಗೂ ತೀವ್ರ ಕೊರತೆ ಎದುರಾಗಿದ್ದು, ಜನ ನರಳಾಡುತ್ತಿದ್ದಾರೆ.

ಹೊರ ದೇಶದಿಂದ ಬರುವ ಪ್ರತಿಯೊಬ್ಬರಿಗೂ ಸ್ಕ್ಯಾನಿಂಗ್ ಕಡ್ಡಾಯ! ಕೊರೊನಾ ಭಾರಿ ಹಾವಳಿ ಎಬ್ಬಿಸಿರುವ ವುಹಾನ್ ಪ್ರಾಂತ್ಯ ಭಾರತದ ಅರುಣಾಚಲ ಪ್ರದೇಶಕ್ಕೆ ಹತ್ತಿರ ಇರುವ ಜಾಗ. ಹೀಗಾಗಿ ಹೈಅಲರ್ಟ್ ಘೋಷಿಸಲಾಗಿದ್ದು, ದೇಶದ ಪ್ರತಿ ವಿಮಾನ ನಿಲ್ದಾಣಗಳಲ್ಲೂ ವಿದೇಶಿ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಗ್ತಿದೆ. ವಿಶೇಷ ಸ್ಕ್ಯಾನಿಂಗ್ ಯಂತ್ರ ಅಳವಡಿಸಿರುವ ವಿಮಾನ ನಿಲ್ದಾಣ ಸಿಬ್ಬಂದಿ. ವಿದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ತಪಾಸಣೆ ಮಾಡಿಯೇ ಒಳಗೆ ಬಿಡುತ್ತಿದ್ದಾರೆ. ಅದರಲ್ಲೂ ಚೀನಾ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈಗಾಗಲೇ 12 ಸಾವಿರಕ್ಕೂ ಹೆಚ್ಚು ಜನರನ್ನ ತಪಾಸಣೆ ನಡೆಸಲಾಗಿದೆ. ಆದರೆ ಇದುವರೆಗೂ ಭಾರತದಲ್ಲಿ ಈ ವೈರಾಣುವಿನಿಂದ ತೊಂದರೆಗೆ ಸಿಲುಕಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಒಟ್ನಲ್ಲಿ ವಿಶ್ವಮಟ್ಟದಲ್ಲಿ ತನ್ನ ಮಾನ ಕಾಪಾಡಿಕೊಳ್ಳಲು ಚೀನಾ ತೀರಾ ಅಮಾನವೀಯ ಕ್ರಮವನ್ನ ಕೈಗೊಂಡಿದೆ. ಈ ಬಗ್ಗೆ ವಿಶ್ವದಾದ್ಯಂತ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದು, ವುಹಾನ್ ಪ್ರಾಂತ್ಯದಲ್ಲಿ ಸಿಲುಕಿರುವ ಪ್ರವಾಸಿಗರು ತಮ್ಮ ತಾಯ್ನಾಡು ತಲುಪಲು ಪರದಾಡ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ವಿಶ್ವ ಆರೋಗ್ಯಸಂಸ್ಥೆ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಪಂಚದ ಪ್ರತಿಯೊಂದು ದೇಶಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಗಣರಾಜ್ಯೋತ್ಸವ ಆಚರಣೆ ರದ್ದು: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಜನವರಿ 26ರಂದು ಬೀಜಿಂಗ್​ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಆಚರಣೆ ರದ್ದು ಮಾಡಲಾಗಿದೆ. ಭಾರತದ ರಾಯಭಾರ ಕಚೇರಿಯಲ್ಲಿ ನಡೆಯಬೇಕಿದ್ದ ರಿಪಬ್ಲಿಕ್ ಡೇ ಆಚರಣೆ ರದ್ದು ಮಾಡಿರುವ ಬಗ್ಗೆ ಚೀನಾ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Published On - 12:05 pm, Fri, 24 January 20

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್