ಪರಾರಿಯಾಗಿದ್ದಾನೆ: Covid ಆಸ್ಪತ್ರೆಯಿಂದ ಅತ್ಯಾಚಾರಿ, ಕೊಲೆ ಆರೋಪಿ!

ಮಂಡ್ಯ: ಜಿಲ್ಲೆಯ ಕೊವಿಡ್ ಆಸ್ಪತ್ರೆಯಿಂದ ಕೊಲೆ ಆರೋಪಿಯೊಬ್ಬ ಪರಾರಿಯಾದ್ದಾನೆ ಎಂದು ತಿಳಿದುಬಂದಿದೆ. MIMS ಆಸ್ಪತ್ರೆಯ ಜೈಲ್ ವಾರ್ಡ್​ನಿಂದ ಕೊಲೆ ಆರೋಪಿ ಕುಮಾರ್ ಎಸ್ಕೇಪ್ ಆಗಿದ್ದಾನೆ. ಭಿಕ್ಷುಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಆರೋಪಿ ಕುಮಾರ್​ ಜಿಲ್ಲೆಯ ಕೀಲಾರ ಗ್ರಾಮದ ನಿವಾಸಿ. ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಕುಮಾರ್​ನನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗೆ ಕೊರೊನಾ ಪಾಸಿಟಿವ್​ ವರದಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಕುಮಾರ್​ ಗುಣಮುಖನಾಗಿ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ‌, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. […]

ಪರಾರಿಯಾಗಿದ್ದಾನೆ: Covid ಆಸ್ಪತ್ರೆಯಿಂದ ಅತ್ಯಾಚಾರಿ, ಕೊಲೆ ಆರೋಪಿ!

Updated on: Aug 25, 2020 | 2:48 PM

ಮಂಡ್ಯ: ಜಿಲ್ಲೆಯ ಕೊವಿಡ್ ಆಸ್ಪತ್ರೆಯಿಂದ ಕೊಲೆ ಆರೋಪಿಯೊಬ್ಬ ಪರಾರಿಯಾದ್ದಾನೆ ಎಂದು ತಿಳಿದುಬಂದಿದೆ.

MIMS ಆಸ್ಪತ್ರೆಯ ಜೈಲ್ ವಾರ್ಡ್​ನಿಂದ ಕೊಲೆ ಆರೋಪಿ ಕುಮಾರ್ ಎಸ್ಕೇಪ್ ಆಗಿದ್ದಾನೆ. ಭಿಕ್ಷುಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಆರೋಪಿ ಕುಮಾರ್​ ಜಿಲ್ಲೆಯ ಕೀಲಾರ ಗ್ರಾಮದ ನಿವಾಸಿ.

ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಕುಮಾರ್​ನನ್ನು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗೆ ಕೊರೊನಾ ಪಾಸಿಟಿವ್​ ವರದಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು.

ಕುಮಾರ್​ ಗುಣಮುಖನಾಗಿ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ‌, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇದೀಗ, ಮಂಡ್ಯ ಪೂರ್ವ ಠಾಣಾ ಪೊಲೀಸರಿಂದ ಆರೋಪಿಗಾಗಿ ಶೋಧಕಾರ್ಯ ನಡೆಯುತ್ತಿದೆ.

Published On - 2:45 pm, Tue, 25 August 20