KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮೊದಲ ಸವಾಲ್ ಎದುರಾಗಿದೆ, ಯಾವುದದು?
ಬೆಂಗಳೂರು: KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದ್ಯ ಕೊರೊನಾದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಈ ನಡುವೆ ಅಧ್ಯಕ್ಷರಾದ ಬಳಿಕ ಶಿವಕುಮಾರ್ರಿಗೆ ಮೊದಲನೇ ಚುನಾವಣೆಯ ಸವಾಲ್ ಎದುರಾಗಿದೆ. ಹೌದು, ಬಿಬಿಎಂಪಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು ಈ ಬಾರಿ ಬೆಂಗಳೂರನ್ನು ಬಿಜೆಪಿಯ ತೆಕ್ಕೆಯಿಂದ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸವಾಲ್ ಡಿ.ಕೆ.ಶಿವಕುಮಾರ್ರಿಗೆ ಎದುರಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿರುವ ಹಿನ್ನೆಲೆಯಲ್ಲಿ ಇದು ಶಿವಕುಮಾರ್ಗೆ ಚಾಲೆಂಜ್ ಆಗಿ ಪರಿಣಮಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ, […]

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದ್ಯ ಕೊರೊನಾದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಈ ನಡುವೆ ಅಧ್ಯಕ್ಷರಾದ ಬಳಿಕ ಶಿವಕುಮಾರ್ರಿಗೆ ಮೊದಲನೇ ಚುನಾವಣೆಯ ಸವಾಲ್ ಎದುರಾಗಿದೆ.
ಹೌದು, ಬಿಬಿಎಂಪಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು ಈ ಬಾರಿ ಬೆಂಗಳೂರನ್ನು ಬಿಜೆಪಿಯ ತೆಕ್ಕೆಯಿಂದ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಸವಾಲ್ ಡಿ.ಕೆ.ಶಿವಕುಮಾರ್ರಿಗೆ ಎದುರಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿರುವ ಹಿನ್ನೆಲೆಯಲ್ಲಿ ಇದು ಶಿವಕುಮಾರ್ಗೆ ಚಾಲೆಂಜ್ ಆಗಿ ಪರಿಣಮಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಜೊತೆಗೆ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳಲ್ಲಿ ನಡೆದ ಗಲಭೆಯ ಪ್ರಕರಣವೂ ಸಹ ನೇರ ಪರಿಣಾಮ ಬೀರಲಿದೆ. ಗಲಭೆ ಪ್ರಕರಣವನ್ನೇ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಜೊತೆಗೆ, ಗಲಭೆ ಕೇಸ್ನಲ್ಲಿ ‘ಕೈ’ ಕಾರ್ಪೊರೇಟರ್ಗಳ ಹೆಸರು ತಳುಕು ಹಾಕಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ಹೊತ್ತಿಗೆ ಮತ್ತಷ್ಟು ಜಿದ್ದಾಜಿದ್ದಿ ಏರ್ಪಡಾಗುವ ಸಾಧ್ಯತೆಯಿದೆ.
ಇದಲ್ಲದೆ, ವಾರ್ಡ್ಗಳ ಮರುವಿಂಗಡನೆ ಕೂಡ ಕಾಂಗ್ರೆಸ್ಗೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ, ಕೇವಲ ಕಾಂಗ್ರೆಸ್ಗೆ ಮಾತ್ರವಲ್ಲ, ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೂ ಇದೇ ಚಾಲೆಂಜ್ ಆಗಿದೆ. ಆದ್ದರಿಂದ, ಬಿಬಿಎಂಪಿ ಸವಾಲನ್ನು ಡಿಕೆ ಶಿವಕುಮಾರ್ ಹೇಗೆ ಬಗೆಹರಿಸ್ತಾರೆ ಎನ್ನೋದೇ ಕುತೂಹಲ ಕೆರಳಿಸಿದೆ.