ಸಾಲ ಕೊಡಲ್ಲ ಅಂದಿದ್ದಕ್ಕೆ ಬ್ಯಾಂಕ್ ಸಿಬ್ಬಂದಿಗೆ ಹೀಗಾ ಮಾಡೋದು!
ಬೆಳಗಾವಿ: ಸಾಲ ನೀಡದ ಕಾರಣ ಬ್ಯಾಂಕ್ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ. ಕೊಡಲಿ ಹಿಡಿದು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಸಿಬ್ಬಂದಿಗೆ ಕೊಲೆ ಆರೋಪಿ ಶಂಕರ ಕರಗುಪ್ಪಿ ಬೆದರಿಕೆ ಹಾಕಿದ್ದಾನೆ. ಆರೋಪಿ ಶಂಕರ ಕರಗುಪ್ಪಿ, ಸ್ವಂತ ಸಹೋದರನನ್ನು ಕೊಂದು ಜೈಲಿಗೆ ಹೋಗಿ ಬೇಲ್ ಮೇಲೆ ಹೊರ ಬಂದಿದ್ದ. ಕೊಡಲಿ ಹಿಡಿದು ಬಂದ ಆರೋಪಿಯನ್ನ ನೋಡಿ ಸಿಬ್ಬಂದಿ ಬ್ಯಾಂಕ್ನಿಂದ ಪರಾರಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಹುಕ್ಕೇರಿ ಪೊಲೀಸರು ವಶಕ್ಕೆ ಪಡೆದು […]
Follow us on
ಬೆಳಗಾವಿ: ಸಾಲ ನೀಡದ ಕಾರಣ ಬ್ಯಾಂಕ್ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿರುವ ಘಟನೆ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ನಡೆದಿದೆ. ಕೊಡಲಿ ಹಿಡಿದು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಸಿಬ್ಬಂದಿಗೆ ಕೊಲೆ ಆರೋಪಿ ಶಂಕರ ಕರಗುಪ್ಪಿ ಬೆದರಿಕೆ ಹಾಕಿದ್ದಾನೆ.
ಆರೋಪಿ ಶಂಕರ ಕರಗುಪ್ಪಿ, ಸ್ವಂತ ಸಹೋದರನನ್ನು ಕೊಂದು ಜೈಲಿಗೆ ಹೋಗಿ ಬೇಲ್ ಮೇಲೆ ಹೊರ ಬಂದಿದ್ದ. ಕೊಡಲಿ ಹಿಡಿದು ಬಂದ ಆರೋಪಿಯನ್ನ ನೋಡಿ ಸಿಬ್ಬಂದಿ ಬ್ಯಾಂಕ್ನಿಂದ ಪರಾರಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಹುಕ್ಕೇರಿ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.