ರೌಡಿಗಳಂತೆ ವರ್ತಿಸುವುದನ್ನು ನಿಲ್ಲಿಸುವಂತೆ ಮುಸ್ಲಿಂ ಮುಖಂಡರು ಸಮುದಾಯದ ಯುವಕರಿಗೆ ಹೇಳಬೇಕು: ಕೆಎಸ್ ಈಶ್ವರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 25, 2022 | 2:55 PM

ಮುಸಲ್ಮಾನರ ಹಾಗೆ ಹಿಂದೂಗಳು ಸಹ ಅಸ್ತ್ರಗಳನ್ನು ಕೈಗೆತ್ತಿಕೊಂಡರೆ ಶಿವಮೊಗ್ಗದಲ್ಲಿ ಒಬ್ಬೇಒಬ್ಬ ಮುಸಲ್ಮಾನ ಉಳಿಯುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗೋಷ್ಟಿಯೊಂದನ್ನು ನಡೆಸಿದ ಬಿಜೆಪಿ ಶಾಸಕ ಜೆಎಸ್ ಈಶ್ವರಪ್ಪನವರು (KS Eshwarappa), ಕೆಲ ಮುಸ್ಲಿಂ ರೌಡಿ ಎಲಿಮೆಂಟ್ ಗಳು ಹರ್ಷ (Harsha) ಅವರ ಮನೆಯ ಬಳಿ ಹೋಗಿ ಅಶ್ವಿನಿ (Ashwini) ವಿರುದ್ದ ಕೂಗಾಡೋದು, ಜನ ಯಾರಾದರೂ ಬಂದ ತಕ್ಷಣ ಅಲ್ಲಿಂದ ಓಡಿಹೋಗೋದು ಹೇಡಿತನದ ಕೆಲಸ ಎಂದು ಹೇಳಿದರು. ಮುಸ್ಲಿಂ ಮುಖಂಡರು ಇಂಥ ದಾರಿ ತಪ್ಪಿದ ಯುವಕರಿಗೆ ಬುದ್ಧಿ ಹೇಳಬೇಕಾದ ಅವಶ್ಯಕತೆಯಿದೆ ಎಂದು ಹೇಳಿದ ಅವರು ಅವರ ಹಾಗೆ ಹಿಂದೂಗಳು ಸಹ ಅಸ್ತ್ರಗಳನ್ನು ಕೈಗೆತ್ತಿಕೊಂಡರೆ ಶಿವಮೊಗ್ಗದಲ್ಲಿ ಒಬ್ಬೇಒಬ್ಬ ಮುಸಲ್ಮಾನ ಉಳಿಯುವುದಿಲ್ಲ ಎಂದು ಹೇಳಿದರು.