ರಿಂಗ್ ರಸ್ತೆಯಲ್ಲಿ ಅಪಘಾತ: ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು

|

Updated on: Sep 23, 2020 | 10:39 AM

ಮೈಸೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ನಡೆದಿದೆ. ವೇಣುಗೋಪಾಲ್(53) ಮೃತ ದುರ್ದೈವಿ. ರಮಾಬಾಯಿ ನಗರ ಕಡೆಯಿಂದ ಶ್ರೀರಾಂಪುರ ಕಡೆಗೆ ತೆರಳುವಾಗ ಹಿಂದಿನಿಂದ ಬಂದ ಲಾರಿ, ಬೈಕ್​ಗೆ ಡಿಕ್ಕಿಯಾಗಿದೆ. ಈ ಪರಿಣಾಮ ಬೈಕ್​ ಸವಾರ ಕೆಳಕ್ಕೆ ಬಿದ್ದಿದ್ದಾನೆ. ಆಗ ಲಾರಿ ಚಕ್ರ ವಾಹನ ಸವಾರನ ಮೇಲೆ ಹರಿದಿದೆ. ಘಟನೆಯಲ್ಲಿ ವಿದ್ಯಾರಣ್ಯಪುರಂ ನಿವಾಸಿ ವೇಣುಗೋಪಾಲ್ ಸಾವನ್ನಪ್ಪಿದ್ದಾನೆ. ಕೆ.ಆರ್.ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಿಂಗ್ ರಸ್ತೆಯಲ್ಲಿ ಅಪಘಾತ: ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು
Follow us on

ಮೈಸೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಹೊರವಲಯದ ರಿಂಗ್ ರಸ್ತೆ ಬಳಿ ನಡೆದಿದೆ. ವೇಣುಗೋಪಾಲ್(53) ಮೃತ ದುರ್ದೈವಿ.

ರಮಾಬಾಯಿ ನಗರ ಕಡೆಯಿಂದ ಶ್ರೀರಾಂಪುರ ಕಡೆಗೆ ತೆರಳುವಾಗ ಹಿಂದಿನಿಂದ ಬಂದ ಲಾರಿ, ಬೈಕ್​ಗೆ ಡಿಕ್ಕಿಯಾಗಿದೆ. ಈ ಪರಿಣಾಮ ಬೈಕ್​ ಸವಾರ ಕೆಳಕ್ಕೆ ಬಿದ್ದಿದ್ದಾನೆ. ಆಗ ಲಾರಿ ಚಕ್ರ ವಾಹನ ಸವಾರನ ಮೇಲೆ ಹರಿದಿದೆ. ಘಟನೆಯಲ್ಲಿ ವಿದ್ಯಾರಣ್ಯಪುರಂ ನಿವಾಸಿ ವೇಣುಗೋಪಾಲ್ ಸಾವನ್ನಪ್ಪಿದ್ದಾನೆ. ಕೆ.ಆರ್.ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.