ತಿರುಮಲದಲ್ಲಿ ಬ್ರಹ್ಮೋತ್ಸವ ಕಾರ್ಯಕ್ರಮಗಳು: ಇಂದು ಪಟ್ಟೆವಸ್ತ್ರ ಸಮರ್ಪಿಸಲಿರುವ ಯಡಿಯೂರಪ್ಪ
ಹೈದರಾಬಾದ್: ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಂಡ ನಂತರ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದೆ. ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ. ವಿಶೇಷ ಅಂದ್ರೆ ಇಂದು ಇಬ್ಬರು ಸಿಎಂಗಳು ಸಮಾರಂಭಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಸಂಜೆ ಕರ್ನಾಟಕ ಸಿಎಂ. ಯಡಿಯೂರಪ್ಪ ಹಾಗೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಬಾಲಾಜಿಗೆ ರಾಜ್ಯಗಳ ಪರ ಪಟ್ಟೆವಸ್ತ್ರ ಸಮರ್ಪಣೆ ಮಾಡಲಿದ್ದಾರೆ. ಇಂದು ಮೋಹಿನಿ ಅವತಾರದಲ್ಲಿ ಶ್ರೀನಿವಾಸ ಭಕ್ತರಿಗೆ ಅಭಯ ನೀಡ್ತಾನೆ. ರಾತ್ರಿ 8ಗಂಟೆಯಿಂದ ಗರುಡ […]
ಹೈದರಾಬಾದ್: ಕೊರೊನಾ ಸಂಕಷ್ಟದಿಂದ ಸುಧಾರಿಸಿಕೊಂಡ ನಂತರ ಆಂಧ್ರಪ್ರದೇಶದ ತಿರುಮಲದಲ್ಲಿ ಸಾಲಕೊಟ್ಲ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದೆ. ತಿರುಮಲದಲ್ಲಿಂದು 5ನೇ ದಿನದ ಸಾಲಕೊಟ್ಲ ಬ್ರಹ್ಮೋತ್ಸವ ಕಾರ್ಯಕ್ರಮ ವೆಂಕಟೇಶ್ವರ ದೇವಾಲಯದಲ್ಲಿ ಜರುಗುತ್ತಿದೆ.
ವಿಶೇಷ ಅಂದ್ರೆ ಇಂದು ಇಬ್ಬರು ಸಿಎಂಗಳು ಸಮಾರಂಭಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಸಂಜೆ ಕರ್ನಾಟಕ ಸಿಎಂ. ಯಡಿಯೂರಪ್ಪ ಹಾಗೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಬಾಲಾಜಿಗೆ ರಾಜ್ಯಗಳ ಪರ ಪಟ್ಟೆವಸ್ತ್ರ ಸಮರ್ಪಣೆ ಮಾಡಲಿದ್ದಾರೆ.
ಇಂದು ಮೋಹಿನಿ ಅವತಾರದಲ್ಲಿ ಶ್ರೀನಿವಾಸ ಭಕ್ತರಿಗೆ ಅಭಯ ನೀಡ್ತಾನೆ. ರಾತ್ರಿ 8ಗಂಟೆಯಿಂದ ಗರುಡ ವಾಹನದ ಮೇಲೆ ಮಲೆಯಪ್ಪಸ್ವಾಮಿ ಮೆರವಣಿಗೆ ನಡೆಯುತ್ತೆ. ಕೋವಿಡ್ ನಿರ್ಬಂಧನೆಗಳ ಕಾರಣ ಕಲ್ಯಾಣೋತ್ಸವ ಕೇವಲ ಮಂಟಪ್ಪಕ್ಕೆ ಕಾರ್ಯಕ್ರಮಗಳನ್ನು ಸೀಮಿತ ಮಾಡಲಾಗಿದೆ.