ಬದುಕೆಲ್ಲ ಚಿಂದಿ ಆಯುತ್ತಾ.. ಕೊನೆಗೆ ತನ್ನದೇ ಪುತ್ಥಳಿ ನಿರ್ಮಿಸಿಕೊಂಡ ಆ ವ್ಯಕ್ತಿ! ಎಲ್ಲಿ?
ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ. ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ. 60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ […]
ಚೆನ್ನೈ: ದೇಶದ ಗಣ್ಯರು ಹಾಗೂ ಮಹಾನ್ ವ್ಯಕ್ತಿಗಳ ಪ್ರತಿಮೆ ಮತ್ತು ಪುತ್ಥಳಿಗಳನ್ನು ಹಲವೆಡೆ ಸ್ಥಾಪಿಸುವುದನ್ನು ನೋಡಿದ್ದೇವೆ. ಇದಕ್ಕಾಗಿ ಹಲವಾರು ಹೋರಾಟಗಳು ಮತ್ತು ಬಡಿದಾಟಗಳು ನಡೆಯುವುದನ್ನು ಸಹ ಕಂಡಿದ್ದೇವೆ.
ಆದರೆ ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿ ಇದ್ಯಾವುದರ ಗೋಜಿಗೆ ಹೋಗದೆಯೇ ತನ್ನದೇ ಜಮೀನೊಂದನ್ನು ಖರೀದಿಸಿ ಅದರಲ್ಲಿ ತನ್ನ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವ ಸ್ವಾರಸ್ಯಕರ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇದನ್ನ ಕೇಳೋಕೆ ಅಚ್ಚರಿ ಎನಿಸಿದರೂ ಸತ್ಯ ಸಂಗತಿ.
60 ವರ್ಷದ ನಲ್ಲತಂಬಿ ಎಂಬ ಚಿಂದಿ ವ್ಯಾಪಾರಿ ಕಳೆದ ಭಾನುವಾರ ತನ್ನದೇ ಪ್ರತಿಮೆಯನ್ನ ತಾನು ಖರೀದಿಸಿದ ಜಮೀನಿನಲ್ಲಿ ಪ್ರತಿಷ್ಠಾಪಿಸಿದ್ದಾನೆ. ಅಂದ ಹಾಗೆ, ಚಿಂದಿ ಆಯುವ ಈ ವ್ಯಕ್ತಿಯ ಬಳಿ ಜಮೀನು ಖರೀದಿಸಲು ಇಷ್ಟೊಂದು ದುಡ್ಡು ಹೇಗೆ ಇರಲು ಸಾಧ್ಯ ಅಂತಾ ಅಂದುಕೊಳ್ಳಬೇಡಿ. ನಲ್ಲತಂಬಿ ಜಮೀನು ಕೊಂಡುಕೊಳ್ಳಲು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇನ್ನು ತನ್ನ ಪ್ರತಿಮೆ ನಿರ್ಮಾಣಕ್ಕಾಗಿ 1 ಲಕ್ಷ ರೂಪಾಯಿ ಸಹ ಕೊಟ್ಟಿದ್ದಾನೆ.
ಮೂಲತಃ ಕಟ್ಟಡ ಕೆಲಸ ಮಾಡುತ್ತಿದ್ದ ನಲ್ಲತಂಬಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 20 ವರ್ಷಗಳ ಹಿಂದೆ ಮನೆತೊರೆದಿದ್ದನಂತೆ. ಇಷ್ಟು ವರ್ಷಗಳ ಕಾಲ ಚಿಂದಿ ಆಯುತ್ತಾ ಬದುಕು ಸಾಗಿಸಿದ್ದ. ಆದರೆ, ಈಗ ಜಗತ್ತಿನಲ್ಲಿ ತನ್ನದೇ ಆದ ಒಂದು ನೆನಪು ಉಳಿಸಲು ತನ್ನ ಪ್ರತಿಮೆಯನ್ನು ಸ್ಥಾಪಿಸಿದ್ದಾನೆ.