ಮೈಸೂರು: ‘ಇಲಿ ಹೋಯ್ತು ಅಂದರೆ ಹುಲಿ ಹೋಯ್ತು ಅಂದರಂತೆ’. ಅಂತಹದೇ ಪರಿಸ್ಥಿತಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಕಾಡು ಬೆಕ್ಕನ್ನು ನೋಡಿ ಚಿರತೆ ಅಂದುಕೊಂಡು ಜನರೆಲ್ಲಾ ಕಂಗಾಲಾಗಿದ್ದಾರೆ.
ಗ್ರಾಮದಲ್ಲಿ ಕಾಡು ಬೆಕ್ಕೊಂದು ಸದ್ದಿಲ್ಲದೇ ಓಡಾಡುತ್ತಿತ್ತು. ಅದನ್ನು ದೂರದಿಂದ ನೋಡಿದ ಜನರು ಚಿರತೆ ಎಂದುಕೊಂಡು ಗಾಬರಿಯಾಗಿದ್ದರು. ತಕ್ಷಣವೇ ಜನರೆಲ್ಲ ಸೇರಿ ಕೈಯ್ಯಲ್ಲಿ ಕೋಲು ಹಿಡಿದು ಹುಡುಕಾಟ ಆರಂಭಿಸಿದರು. ಗ್ರಾಮದಲ್ಲಿ ಅಡಗಿ ಕುಳಿತಿದ್ದ ಕಾಡು ಬೆಕ್ಕನ್ನು ಸೆರೆಹಿಡಿದಿದ್ದಾರೆ. ಚಿರತೆ ಎಂದು ತಿಳಿದಿದ್ದ ಜನರು ಕಾಡುಬೆಕ್ಕನ್ನು ನೋಡಿ ನಿಟ್ಟಿಸುರು ಬಿಟ್ಟಿದ್ದಾರೆ. ಸೆರೆ ಹಿಡಿದ ಕಾಡು ಬೆಕ್ಕನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.
Published On - 11:15 am, Thu, 24 December 20