ಬೀದರ್: ಬಸ್ ಡಿಪೋದ ಕೊಠಡಿಯಲ್ಲಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಎನ್‌ಇಕೆಆರ್‌ಟಿಸಿ ನೌಕರ ಓಂಕಾರ ಭಾಲ್ಕಿ ನೇಣಿಗೆ ಶರಣಾದ ವ್ಯಕ್ತಿ.
ಬೀದರ್ ತಾಲೂಕಿನ ಡೊಂಗರಗಿ ನಿವಾಸಿ ಓಂಕಾರ ಭಾಲ್ಕಿ, 8 ವರ್ಷದಿಂದ ಬಸ್ ಚಾಲಕರಾಗಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸ್ತಿದ್ರು. ಆದ್ರೆ ನಿನ್ನೆ ಏಕಾಏಕಿ ಬಸ್ ಡಿಪೋದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅಂದ್ರೆ ನಿನ್ನೆ ಸಂಜೆ ಚುನಾವಣೆ ನಿಮಿತ್ತ ಬಸ್ ಕೊಂಡೊಯ್ದಿದ್ದರು. ನಿನ್ನೆಯಿಂದ KA-32 F-926 ಬಸ್ ಕೂಡ ನಾಪತ್ತೆಯಾಗಿದೆ. ಸದ್ಯ ಈ ಆತ್ಮಹತ್ಯೆ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಚುನಾವಣೆಗೆಂದು ಸಂಜೆ ಬಸ್ ಕೊಂಡೊಯ್ದ ಚಾಲಕ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.