ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ 3 ವರ್ಷದ ಮಗು ಸಾವು

ನೆಲಮಂಗಲ: ಬೈಕ್​​​ಗೆ ಲಾರಿ ಡಿಕ್ಕಿಯಾಗಿ 3 ವರ್ಷದ ಮಗು ಸಾವಿಗೀಡಾಗಿರುವ ದುರಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹುರಳಿಹಳ್ಳಿ ಗೇಟ್ ಬಳಿ ನಡೆದಿದೆ. ಬೈಕ್​ನಲ್ಲಿದ್ದ 3 ವರ್ಷದ ಮಗು ಶ್ರಾವಣಿ ಸ್ಥಳದಲ್ಲೇ ಸಾವನ್ನಪ್ಪಿದೆ. ಚಿಕ್ಕಮ್ಮನ ಮದುವೆಗೆ ಹೊರಟಿದ್ದ ಮಗು ಮಸಣಕ್ಕೆ.. ಬೈಕ್​ನಲ್ಲಿದ್ದ ದಂಪತಿ ಶ್ರೀನಿವಾಸ ಮೂರ್ತಿ ಮತ್ತು ಕಲಾವತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಮತ್ತು ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ […]

ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ 3 ವರ್ಷದ ಮಗು ಸಾವು
Follow us
ಸಾಧು ಶ್ರೀನಾಥ್​
|

Updated on:Mar 18, 2021 | 5:53 PM

ನೆಲಮಂಗಲ: ಬೈಕ್​​​ಗೆ ಲಾರಿ ಡಿಕ್ಕಿಯಾಗಿ 3 ವರ್ಷದ ಮಗು ಸಾವಿಗೀಡಾಗಿರುವ ದುರಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹುರಳಿಹಳ್ಳಿ ಗೇಟ್ ಬಳಿ ನಡೆದಿದೆ. ಬೈಕ್​ನಲ್ಲಿದ್ದ 3 ವರ್ಷದ ಮಗು ಶ್ರಾವಣಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಚಿಕ್ಕಮ್ಮನ ಮದುವೆಗೆ ಹೊರಟಿದ್ದ ಮಗು ಮಸಣಕ್ಕೆ.. ಬೈಕ್​ನಲ್ಲಿದ್ದ ದಂಪತಿ ಶ್ರೀನಿವಾಸ ಮೂರ್ತಿ ಮತ್ತು ಕಲಾವತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಮತ್ತು ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ಕಲಾವತಿ ತಂಗಿ ಮದುವೆಗೆ ಗುಬ್ಬಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಹಾಸನ- ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು ಹಾಸನ ತಾಲ್ಲೂಕಿನ ಮಡೆನೂರು ಗೇಟ್ ಬಳಿ‌ ತಡರಾತ್ರಿ ವಾಹನ ಡಿಕ್ಕಿಯಾಗಿ ಎಂಟು ವರ್ಷದ ಹೆಣ್ಣು ಚಿರತೆ‌ ಮೃತಪಟ್ಟಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ‌ ಹೊಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ‌ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕುಳಘಟ್ಟದಲ್ಲಿ ತಾಯಿ ಮತ್ತು ಮಗಳ ಜೊತೆ ಲವ್ವಡವ್ವಿ, ಪತಿಯ ಹತ್ಯೆ ಪ್ರಕರಣ – ಮೂವರು ಆರೋಪಿಗಳ ಸೆರೆ:

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಘಟ್ಟ ಗ್ರಾಮದಲ್ಲಿ ಪ್ರಿಯಕರ ಮತ್ತು ಪುತ್ರಿಯ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಹೊನ್ನಾಳಿ ಠಾಣೆ ಪೊಲೀಸರಿಂದ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಉಷಾ, ಪುತ್ರಿ ಸಿಂಧು ಹಾಗೂ ಪ್ರಿಯಕರ ಶ್ರೀನಿವಾಸಗೌಡ ಸೆರೆಯಾದವರು. ತಾಯಿ ಮತ್ತು ಮಗಳಿಗೆ ದೇವರಾಜ್ ಜೊತೆ ಅನೈತಿಕ ಸಂಬಂಧವಿತ್ತು. ಆ ಅನೈತಿಕ ಸಂಬಂಧ ಮುಚ್ಚಿಹಾಕಲು ಮಂಜಪ್ಪ(68) ಎಂಬುವವರ ಕೊಲೆ ನಡೆದಿದೆ. ಮೂವರೂ ಸೇರಿ ಮಂಜಪ್ಪನನ್ನು ಕೊಂದು ಕಾಲುವೆಗೆ ಎಸೆದಿದ್ದರು. ಹತ್ಯೆ ನಡೆದು 17 ದಿನಗಳ ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Published On - 5:05 pm, Thu, 18 March 21