ಹಲವು ಬೇಡಿಕೆಗಳನಿಟ್ಟು ಮತ್ತೆ ಶುರುವಾಗಲಿದೆ ವೈದ್ಯರಿಂದ ಪ್ರತಿಭಟನೆ..
ಬೆಂಗಳೂರು: ವೈದ್ಯ ಸಿಬ್ಬಂದಿ ಮತ್ತೆ ಪ್ರತಿಭಟನೆಗಿಳಿದಿದ್ದಾರೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ, NHM ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ವಿವಿಧ ಬೇಡಿಕೆಗಳಿಗೆ ಡಿಮ್ಯಾಂಡ್ ಮಾಡಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ಮುಂದಾಗಿದ್ದಾರೆ. ಸಮಾನ ವೇತನ ಹಾಗೂ ಸಮಾನ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕೆಲಸಕ್ಕೆ ಹಾಜರಾಗದಿರಲು ಸರ್ಕಾರಿ ಗುತ್ತಿಗೆ ಹಾಗೂ ಹೊರಗುತ್ತಿಗೆ ವೈದ್ಯರು ನಿರ್ಧರಿಸಿದ್ದು,ಸುಮಾರು 20 ಸಾವಿರ ಮಂದಿ ಕೆಲಸಕ್ಕೆ ಗೈರಾಗಿದ್ದಾರೆ. ಸತತ 10 ರಿಂದ 15 ವರ್ಷ ಕೆಲಸ ಮಾಡ್ತಿದ್ರು ಸೇವಾ ಭದ್ರತೆ ಇಲ್ಲ.ನಮಗೆ […]
ಬೆಂಗಳೂರು: ವೈದ್ಯ ಸಿಬ್ಬಂದಿ ಮತ್ತೆ ಪ್ರತಿಭಟನೆಗಿಳಿದಿದ್ದಾರೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ, NHM ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ವಿವಿಧ ಬೇಡಿಕೆಗಳಿಗೆ ಡಿಮ್ಯಾಂಡ್ ಮಾಡಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ಮುಂದಾಗಿದ್ದಾರೆ. ಸಮಾನ ವೇತನ ಹಾಗೂ ಸಮಾನ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕೆಲಸಕ್ಕೆ ಹಾಜರಾಗದಿರಲು ಸರ್ಕಾರಿ ಗುತ್ತಿಗೆ ಹಾಗೂ ಹೊರಗುತ್ತಿಗೆ ವೈದ್ಯರು ನಿರ್ಧರಿಸಿದ್ದು,ಸುಮಾರು 20 ಸಾವಿರ ಮಂದಿ ಕೆಲಸಕ್ಕೆ ಗೈರಾಗಿದ್ದಾರೆ.
ಸತತ 10 ರಿಂದ 15 ವರ್ಷ ಕೆಲಸ ಮಾಡ್ತಿದ್ರು ಸೇವಾ ಭದ್ರತೆ ಇಲ್ಲ.ನಮಗೆ ಹೆಚ್.ಆರ್ ಪಾಲಿಸಿ ಮಾಡಿಲ್ಲ. ಸರಿಯಾದ ವೇತನ ಪರಿಷ್ಕರಣೆ ಮಾಡುತ್ತಿಲ್ಲ. ಹೀಗೆ ಹಲವು ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವರಾಧ್ಯ ಟಿವಿ9 ಜೊತೆ ಮಾಹಿತಿ ಹಂಚಿಕೊಂಡ್ರು.