ಮೈಸೂರು: ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಶುರುವಾಗಲಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಹಾಗೂ ಕೊರೊನಾ ವಿರುದ್ಧ ಹೋರಾಡಲು ಮಾಡಿಕೊಳ್ಳಬೇಕಾದ ಕ್ರಮಗಳನ್ನು ಎಲ್ಲಾ ಎಕ್ಸಾಂ ಸೆಂಟರ್ಗಳಲ್ಲಿ ಮಾಡಿಕೊಳ್ಳಲಾಗಿದೆ. ಆದರೆ ಮೈಸೂರಿನ ಮಹಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ.
ವಿದ್ಯಾರ್ಥಿಗಳ ಕ್ರಮ ಸಂಖ್ಯೆ ನೋಟಿಸ್ ಬೋರ್ಡ್‌ಗೆ ಹಾಕಿಲ್ಲ. ಗೊಂದಲದಲ್ಲಿ ವಿದ್ಯಾರ್ಥಿಗಳು ಕಾಲೇಜು ಮುಂದೆ ನಿಂತಿರುವ ದೃಶ್ಯ ಕಂಡು ಬಂದಿದೆ. ಒಂದೆಡೆ ಖಾಸಗಿ ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಕಂಡು ಬಂದರೆ. ಸರ್ಕಾರಿ ಕಾಲೇಜಿನಲ್ಲಿ ಮಾತ್ರ ಈ ವರೆಗು ಯಾವುದೇ ಮುಂಜಾಗ್ರತ ಕ್ರಮ ಕಾಣಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಡಿಸ್ಟೆನ್ಸ್ ಮಾರ್ಕ್ ಕೂಡ ಹಾಕಿಲ್ಲ.
ಪ್ರಾಂಶುಪಾಲ ಸೋಮಣ್ಣಗೆ ಪೋಷಕರಿಂದ ತರಾಟೆ:
Published On - 9:24 am, Thu, 18 June 20