ಕೊರೊನಾ ಎರಡನೇ ಅಲೆ ಭೀತಿಗೆ ಮತ್ತೆ ಸ್ತಬ್ಧಗೊಂಡ ನಗರಗಳು

ಕೊರೊನಾ ಎರಡನೇ ಅಲೆ ಭೀತಿಗೆ ಮತ್ತೆ ಸ್ತಬ್ಧಗೊಂಡ ನಗರಗಳು

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಲೆಕ್ಕಾಚಾರ ಒಂದೆಡೆ ಆರುಂಭವಾಗುತ್ತಿದ್ದರೆ ಇತ್ತ ಸದ್ದಿಲ್ಲದೇ ಕೊರೊನ ಸೋಂಕಿನ ಎರಡನೇ ಅಲೆ ಜನರಲ್ಲಿ ಭೀತಿ ಹುಟ್ಟಿಸಿದೆ. ಒಂದು ವೇಳೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಿದರೆ ಪರಿಸ್ಥಿತಿ ಮೊದಲಿಗಿಂತಲೂ ಗಂಭಿರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಕೆಲವು ನಗರಗಳಲ್ಲಿ ಒಂದು ತಿಂಗಳ ನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಧಿಡೀರ್ ಏರಿಕೆಯಾಗತೊಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಭಾರತದ ಕೆಲವು ರಾಜ್ಯಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಭಾಗಶಃ ಲಾಕ್ಡೌನ್, ನೈಟ್ ಕರ್ಫ್ಯೂನಂತಹ ಕ್ರಮಗಳ […]

Arun Belly

|

Nov 21, 2020 | 7:15 PM

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಲೆಕ್ಕಾಚಾರ ಒಂದೆಡೆ ಆರುಂಭವಾಗುತ್ತಿದ್ದರೆ ಇತ್ತ ಸದ್ದಿಲ್ಲದೇ ಕೊರೊನ ಸೋಂಕಿನ ಎರಡನೇ ಅಲೆ ಜನರಲ್ಲಿ ಭೀತಿ ಹುಟ್ಟಿಸಿದೆ. ಒಂದು ವೇಳೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಿದರೆ ಪರಿಸ್ಥಿತಿ ಮೊದಲಿಗಿಂತಲೂ ಗಂಭಿರವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಕೆಲವು ನಗರಗಳಲ್ಲಿ ಒಂದು ತಿಂಗಳ ನಂತರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಧಿಡೀರ್ ಏರಿಕೆಯಾಗತೊಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಭಾರತದ ಕೆಲವು ರಾಜ್ಯಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಭಾಗಶಃ ಲಾಕ್ಡೌನ್, ನೈಟ್ ಕರ್ಫ್ಯೂನಂತಹ ಕ್ರಮಗಳ ಮೊರೆಹೋಗಿವೆ. ಸದ್ಯ ಯಾವ್ಯಾವ ರಾಜ್ಯಗಳು ಏನೇನು ಕ್ರಮ ಕೈಗೊಂಡಿವೆ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಟಿವಿ9 ಡಿಜಿಟಲ್ ತಂಡ ನಿಮಗೆ ನೀಡುತ್ತಿದೆ.

ಮಧ್ಯಪ್ರದೇಶ: ರಾಜ್ಯದ ಭೋಪಾಲ್, ಇಂದೋರ್, ಗ್ವಾಲಿಯರ್, ವಿದಿಶಾ, ರತ್ಲಾಂ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದ್ದು ಈ ಪ್ರದೇಶಗಳಲ್ಲಿ ಸದ್ಯ ಶೇಕಡಾ ಐದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಸದ್ಯ ವಾಣಿಜ್ಯ ಮತ್ತು ವ್ಯಾವಹಾರಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶಾಲೆಗಳನ್ನು ಈಗಲೇ ತೆರೆಯುವುದಿಲ್ಲ ಎಂದಿದ್ದಾರೆ. ಆದರೆ, ಒಂಭತ್ತರಿಂದ ಹನ್ನೆರಡನೇ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಪಠ್ಯ ಸಂಬಂಧಿತ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಶಾಲೆಗೆ ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾಜಸ್ಥಾನ : ನಿನ್ನೆ ಒಂದೇ ದಿನ2,762 ಹೊಸ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಜೋರಾಗಿದೆ. ಆದ್ದರಿಂದ ರಾಜಸ್ಥಾನದ33 ಜಿಲ್ಲೆಗಳಲ್ಲಿ ಸೆಕ್ಷನ144 ಹೇರುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಲಾಗುತ್ತಿದೆ.

ಉತ್ತರ ಪ್ರದೇಶ: ಅಕ್ಟೋಬರ 17ರ ನಂತರ, ಶಿಕ್ರವಾರದಂದು ಅತಿ ಹೆಚ್ಚು ಅಂದರೆ 2,858 ಪ್ರಕರಣಗಳು ದಾಖಲಾಗಿದ್ದು ರಾಜ್ಯದಲ್ಲಿ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಜನರಿಗೆ ಮನೆಯಿಂದ ಆಚೆ ಬಾರದಂತೆ ಸಲಹೆ ನೀಡಿದ್ದು ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಕ್ರಮಕೈಗೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.

ಹರಿಯಾಣ: ನವೆಂಬರ್ ಅಂತ್ಯದವರೆಗೂ ಶಾಲೆಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. 9 ರಿಂದ12ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಆರಂಭಿಸಿದ ಕೆಲವೇ ದಿನಗಳಲ್ಲಿ11ವಿದ್ಯಾರ್ಥಿಗಳು ಹಾಗೂ 8ಶಿಕ್ಷಕರು ಪಾಸಿಟಿವ್ ಸೋಂಕಿಗೀಡಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದೆ.

ಗುಜರಾತ್: ವಡೋದರಾ, ರಾಜ್ ಕೋಟ್ ಹಾಗೂ ಅಹಮದಾಬಾದ್​ನಿಂದ ಸೂರತ್​ವರೆಗಿನ ಪ್ರದೇಶಗಳಲ್ಲಿ ಅನಿರ್ದಿಷ್ಟಾವಧಿ ನೈಟ್ ಕರ್ಫ್ಯೂ ಹೇರಲಾಗಿದ್ದು ಪರಿಸ್ಥಿತಿ ಹತೋಟಿಗೆ ಬರುವ ತನಕವೂ ನಿಯಮ ಸಡಿಲಿಸಿದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದೆಹಲಿ : ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ದಿನೇದಿನೇ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕಂಟೈನ್ಮೆಂಟ್ ವಲಯಗಳ ಕಡೆ ಹೆಚ್ಚಿನ ಗಮನ ನೀಡುತ್ತಿದೆ. ಕಾಂಟ್ಯಾಕ್ಟ್ ಟ್ರೇಸಿಂಗ್, ಮನೆ ಮನೆಗೆ ಭೇಟಿ ನೀಡಿ ಸರ್ವೇ ಮಾಡುವುದು ಸೇರಿದಂತೆ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕೊರೊನಾ ಎರಡನೇ ಅಲೆಯಿಂದ ಬಚಾವಾಗಲು ಯತ್ನಿಸುತ್ತಿದೆ. ಜೊತೆಗೆ ಮಾಸ್ಕ್ ಧರಿಸದೇ ಇರುವವರಿಗೆ ವಿಧಿಸುವ ದಂಡದ ಪ್ರಮಾಣವನ್ನು 500 ರಿಂದ 1000 ರೂಪಾಯಿಗಳಿಗೆ ಏರಿಸಲಾಗಿದ್ದು ಜನನಿಬಿಡ ಮಾರುಕಟ್ಟೆಗಳನ್ನು ನಿರ್ಬಂಧಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Follow us on

Related Stories

Most Read Stories

Click on your DTH Provider to Add TV9 Kannada