ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಎನ್ಎಸ್ಇ (National Stock Exchange – NSE) ಫೆಬ್ರವರಿ 24ರ ಬೆಳಗ್ಗೆ 10.08ರ ಸುಮಾರಿಗೆ ಅಡ್ಡೇಟ್ ಆಗುವುದು ನಿಂತಿತ್ತು. ಈ ಬಗ್ಗೆ ಸಿಎನ್ಬಿಸಿ ಟಿವಿ18 ವರದಿ ಮಾಡಿತು. ಆ ನಂತರ 11.40ರಲ್ಲಿ ಫ್ಯೂಚರ್ ಅಂಡ್ ಆಪ್ಷನ್ಸ್ ಹಾಗೂ 11.43ರಲ್ಲಿ ಕ್ಯಾಶ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಯಿತು. ಶೀಘ್ರದಲ್ಲೇ ಸಮಸ್ಯೆ ನಿವಾರಣೆ ಮಾಡುವುದಾಗಿ ಎನ್ಎಸ್ಇ ಟ್ವೀಟ್ ಮಾಡಿತು. ಎನ್ಎಸ್ಇ ಎರಡು ಟೆಲಿಕಾಂ ಸೇವೆಯನ್ನು ಪಡೆಯುತ್ತದೆ. ಎರಡರಲ್ಲೂ ಸಮಸ್ಯೆ ಎದುರಾಗಿದ್ದರಿಂದ ಇಂತಹ ಸ್ಥಿತಿ ಏರ್ಪಟ್ಟಿತು ಎಂದು ತಿಳಿಸಿರುವುದಾಗಿ ಎನ್ಎಸ್ಇ ಮತ್ತೊಂದು ಟ್ವೀಟ್ ಮಾಡಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಗದು, ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಸೇರಿ ಎಲ್ಲ ಸೆಗ್ಮೆಂಟ್ಗಳ ವಹಿವಾಟನ್ನು ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಬುಧವಾರ ಸ್ಥಗಿತಗೊಳಿಸಿದರೆ, ಬಿಎಸ್ಇ ಸೆನ್ಸೆಕ್ಸ್ ವ್ಯವಹಾರ ಮುಂದುವರಿಸಿದೆ.
‘ಎನ್ಎಸ್ಇ ನಿಫ್ಟಿ, ಬ್ಯಾಂಕ್ ನಿಫ್ಟಿ, ನಗದು ದರಗಳು ಬೆಳಗ್ಗೆಯಿಂದಲೇ ಅಪ್ಡೇಟ್ ಆಗುತ್ತಿಲ್ಲ. ಇದು ಈ ಎಕ್ಸ್ಚೇಂಜ್ನ ಸಮಸ್ಯೆ ಮತ್ತು ನಮಗೆ ಪರ್ಯಾಯಗಳು ಇಲ್ಲ’ ಎಂದು ಷೇರು ದಲ್ಲಾಳಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಫ್ಯೂಚರ್ಸ್ ಮಾರ್ಕೆಟ್ ದರಕ್ಕೆ ನಗದು ಮಾರುಕಟ್ಟೆಯ ದರವು ರೆಫರೆನ್ಸ್ ಇದ್ದಂತೆ. ಎನ್ಎಸ್ಇಯಲ್ಲಿ ಈ ರೀತಿಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಇಂಥ ಸಮಸ್ಯೆ ಹಲವು ಬಾರಿ ಆಗಿದೆ. ಈ ಸಮಸ್ಯೆಗೆ ಎಕ್ಸ್ ಚೇಂಜ್ಗೆ ಸೆಬಿ ದಂಡ ವಿಧಿಸಿತ್ತು. ತಾಂತ್ರಿಕ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ನೀಡುವ ನೀತಿಯೊಂದನ್ನು ರೂಪಿಸುವುದಕ್ಕೆ ಸೆಬಿ ಯೋಚನೆ ಮಾಡುತ್ತಿದೆ.
ಇದನ್ನೂ ಓದಿ: Stock Market: ಷೇರು ಮಾರುಕಟ್ಟೆ ಬೆಳವಣಿಗೆಯಿಂದ ಜನ ಸಾಮಾನ್ಯರಿಗೇನು ಲಾಭ?
ಇದನ್ನೂ ಓದಿ: Market Bloodbath: ಷೇರುಪೇಟೆ ಕುಸಿತ; ಕರಗಿತು ಹೂಡಿಕೆದಾರರ 3.7 ಲಕ್ಷ ಕೋಟಿ ಸಂಪತ್ತು
Published On - 1:53 pm, Wed, 24 February 21