ನಡುಗಡ್ಡೆಯಾದ ತಾರಾಪುರ: ಮತ್ತೊಬ್ಬ ಬಾಣಂತಿಯನ್ನ ಹೊರಗೆ ಕರೆ ತಂದ ತಹಶೀಲ್ದಾರ್

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸಿಲುಕಿದ್ದ ಮತ್ತೊಬ್ಬ ಬಾಣಂತಿಯನ್ನು ರಕ್ಷಣೆ ಮಾಡಲಾಗಿದೆ. ಪ್ರವಾಹದಿಂದ ನಡುಗಡ್ಡೆಯಾದ ತಾರಾಪುರ ಗ್ರಾಮದ ತವರಿನಲ್ಲಿದ್ದ ಬಾಣಂತಿ ಹಾಗೂ ಮೂರು ತಿಂಗಳ‌ ಮಗುವನ್ನು ತಹಶೀಲ್ದಾರ್ ಹೊರಗೆ ಕರೆ ತಂದಿದ್ದಾರೆ. ಬಾಣಂತಿ ತನ್ನ‌ ಮಗುವಿನ ಜೊತೆಗೆ ಆಲಮೇಲ ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ತೆರಳಲು ಒಪ್ಪಿದ್ದಾರೆ. ದೋಣಿಯ ಮೂಲಕ ಇಬ್ಬರು ಬಾಣಂತಿಯರು ಹಾಗೂ‌ ಮೂರು‌ ತಿಂಗಳ ಮಕ್ಕಳನ್ನು ತಹಶೀಲ್ದಾರ್‌ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ತಾರಾಪುರದಿಂದ ಹೊರಗೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ, ಸಿಂದಗಿ ತಹಶೀಲ್ದಾರ್ […]

ನಡುಗಡ್ಡೆಯಾದ ತಾರಾಪುರ: ಮತ್ತೊಬ್ಬ ಬಾಣಂತಿಯನ್ನ ಹೊರಗೆ ಕರೆ ತಂದ ತಹಶೀಲ್ದಾರ್
ಸಾಧು ಶ್ರೀನಾಥ್​

Updated on: Oct 16, 2020 | 3:39 PM

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪುರ ಗ್ರಾಮದಲ್ಲಿ ಸಿಲುಕಿದ್ದ ಮತ್ತೊಬ್ಬ ಬಾಣಂತಿಯನ್ನು ರಕ್ಷಣೆ ಮಾಡಲಾಗಿದೆ.

ಪ್ರವಾಹದಿಂದ ನಡುಗಡ್ಡೆಯಾದ ತಾರಾಪುರ ಗ್ರಾಮದ ತವರಿನಲ್ಲಿದ್ದ ಬಾಣಂತಿ ಹಾಗೂ ಮೂರು ತಿಂಗಳ‌ ಮಗುವನ್ನು ತಹಶೀಲ್ದಾರ್ ಹೊರಗೆ ಕರೆ ತಂದಿದ್ದಾರೆ. ಬಾಣಂತಿ ತನ್ನ‌ ಮಗುವಿನ ಜೊತೆಗೆ ಆಲಮೇಲ ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ತೆರಳಲು ಒಪ್ಪಿದ್ದಾರೆ.

ದೋಣಿಯ ಮೂಲಕ ಇಬ್ಬರು ಬಾಣಂತಿಯರು ಹಾಗೂ‌ ಮೂರು‌ ತಿಂಗಳ ಮಕ್ಕಳನ್ನು ತಹಶೀಲ್ದಾರ್‌ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ತಾರಾಪುರದಿಂದ ಹೊರಗೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ, ಸಿಂದಗಿ ತಹಶೀಲ್ದಾರ್ ಸಜೀವಕುಮಾರ ನೇತೃತ್ವದಲ್ಲಿ ಬಾಣಂತಿಯರನ್ನು ಸ್ಥಳ ತೆರವುಗೊಳಿಸುವಂತೆ ಮನವೊಲಿಕೆ ಮಾಡಲಾಯಿತು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us