ಲಂಚ ಹೊಡೆದು ಜೈಲುಪಾಲಾಗಿ.. ಕಸ್ಟಡಿಯಲ್ಲಿದ್ದಾಗಲೇ ನೇಣಿಗೆ ಶರಣಾದ ತಹಶೀಲ್ದಾರ್

ಹೈದರಾಬಾದ್‌: ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಚಂಚಲಗೂಡ ಕಾರಾಗೃಹದಲ್ಲಿ ನಡೆದಿದೆ. ಹೈದರಾಬಾದ್ ಬಳಿಯ ಕೀಸರದಲ್ಲಿ ಲಂಚ ಪಡೆದು‌ ಜೈಲುಪಾಲಾಗಿದ್ದ ತಹಶೀಲ್ದಾರ್​ ನಾಗರಾಜ 2 ದಿನದ ಹಿಂದೆ ನೇಣಿಗೆ ಶರಣಾಗಿದ್ದಾರೆ. ಸರ್ಕಾರಿ ಜಮೀನಿನ ಹಕ್ಮು ಬದಲಾವಣೆಗಾಗಿ 2 ಕೋಟಿಗೂ ಅಧಿಕ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೀಸರ ತಹಶೀಲ್ದಾರ್​ ನಾಗರಾಜ ಲಂಚ ಪಡೆಯುವಾಗ ACB ಬಲೆಗೆ ಬಿದ್ದು ಜೈಲುಪಾಲಾಗಿದ್ದರು. ನಾಗರಾಜ ಕಳೆದ 2 ತಿಂಗಳಿನಿಂದ ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿ ವಿಚಾರಾಣಾಧೀನ ಕೈದಿಯಾಗಿದ್ದರು. […]

ಲಂಚ ಹೊಡೆದು ಜೈಲುಪಾಲಾಗಿ.. ಕಸ್ಟಡಿಯಲ್ಲಿದ್ದಾಗಲೇ ನೇಣಿಗೆ ಶರಣಾದ ತಹಶೀಲ್ದಾರ್
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Oct 16, 2020 | 2:47 PM

ಹೈದರಾಬಾದ್‌: ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಚಂಚಲಗೂಡ ಕಾರಾಗೃಹದಲ್ಲಿ ನಡೆದಿದೆ. ಹೈದರಾಬಾದ್ ಬಳಿಯ ಕೀಸರದಲ್ಲಿ ಲಂಚ ಪಡೆದು‌ ಜೈಲುಪಾಲಾಗಿದ್ದ ತಹಶೀಲ್ದಾರ್​ ನಾಗರಾಜ 2 ದಿನದ ಹಿಂದೆ ನೇಣಿಗೆ ಶರಣಾಗಿದ್ದಾರೆ.

ಸರ್ಕಾರಿ ಜಮೀನಿನ ಹಕ್ಮು ಬದಲಾವಣೆಗಾಗಿ 2 ಕೋಟಿಗೂ ಅಧಿಕ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೀಸರ ತಹಶೀಲ್ದಾರ್​ ನಾಗರಾಜ ಲಂಚ ಪಡೆಯುವಾಗ ACB ಬಲೆಗೆ ಬಿದ್ದು ಜೈಲುಪಾಲಾಗಿದ್ದರು. ನಾಗರಾಜ ಕಳೆದ 2 ತಿಂಗಳಿನಿಂದ ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿ ವಿಚಾರಾಣಾಧೀನ ಕೈದಿಯಾಗಿದ್ದರು.

ಇದೀಗ, ಕಸ್ಟೋಡಿಯಲ್‌ ಡೆತ್ ಎಂದು ಪ್ರಕರಣ ದಾಖಲಿಸಿಕೊಂಡ ಡಬೀರಪುರ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಪೊಲೀಸರಿಂದ ಆತ್ಮಹತ್ಯೆಗೆ ಮೊದಲು ನಾಗರಾಜ ಇದ್ದ ಸ್ಥಿತಿಗತಿಯ ಬಗ್ಗೆ ಜೈಲು ಅಧಿಕಾರಿಗಳು ಹಾಗೂ ಸಹ ಕೈದಿಗಳ ವಿಚಾರಣೆ ನಡೆಸಲಾಗುತ್ತಿದೆ.

Published On - 2:46 pm, Fri, 16 October 20