ಯಾದಗಿರಿ: ಬಳ್ಳಾರಿಯಲ್ಲಿ ನಿನ್ನೆ ಸೋಂಕಿತರ ಮೃತದೇಹಗಳನ್ನ ಯಾವುದೇ ಗೌರವವಿಲ್ಲದೆ ಅಮಾನವೀಯವಾಗಿ ಗುಂಡಿಗೆ ಎಸೆದ ಘಟನೆ ಈಗಲೂ ನಮ್ಮ ಕಣ್ಣಿನ ಮುಂದೆ ಕಟ್ಟಿದಂತಿದೆ. ನೆನಪಿನಿಂದ ಈ ಘಟನೆ ಮಾಸುವ ಮುನ್ನವೇ ಇದೀಗ ಯಾದಗಿರಿಯಲ್ಲಿ ಅಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಕೊವಿಡ್ನಿಂದ ಮೃತಪಟ್ಟಿದ್ದ ಸೋಂಕಿತನ ಶವವನ್ನು ಸತ್ತ ಪ್ರಾಣಿಯಂತೆ ಕಟ್ಟಿಗೆಗೆ ಕಟ್ಟಿ ದರದರನೇ ಎಳೆದಾಡುತ್ತಾ ಕೊನೆಗೆ ಗುಂಡಿಗೆ ಹಾಕಿದ ದೃಶ್ಯಗಳು ಜಿಲ್ಲೆಯ ಹೊನಗೇರಾ ಗ್ರಾಮದಲ್ಲಿ ಕಂಡು ಬಂದಿದೆ.
ರಾಯಚೂರಿನ ಸಿರವಾರದಲ್ಲಿ ಮೃತಪಟ್ಟಿದ್ದ ಸೋಂಕಿತ ವ್ಯಕ್ತಿ ಮಗಳ ಮದುವೆ ನಡೆದ ಮರುದಿನವೇ ಸೋಂಕಿಗೆ ಬಲಿಯಾಗಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಹುಟ್ಟೂರು ಹೊನಗೇರಾದಲ್ಲಿ ಆರೋಗ್ಯ ಇಲಾಖೆ ನಿಯಮಾವಳಿಯಂತೆ ಅಂತ್ಯಸಂಸ್ಕಾರ ನಡೆಸಲು ಅಧಿಕಾರಿಗಳು ಮುಂದಾದರು.
ಆದರೆ, ಕುಟುಂಬಸ್ಥರ ಅನುಪಸ್ಥಿತಿಯಲ್ಲಿ ನಡೆದಿದ್ದ ಅಂತ್ಯಕ್ರಿಯೆಯಲ್ಲಿ ಸ್ವಲ್ಪವೂ ಕಾಳಜಿಯಿಲ್ಲದೆ ಪ್ರಾಣಿಯ ಕಳೆಬರದಂತೆ ಎಳೆದುದೊಯ್ದು ಶವವನ್ನು ಗುಂಡಿಗೆ ದಬ್ಬಿದ್ದು ನಿಜಕ್ಕೂ ಅಮಾನವೀಯ.
Published On - 3:23 pm, Wed, 1 July 20