ಎಲ್ಲ ಸಮೀಕ್ಷೆಗಳಲ್ಲೂ ಹಿನ್ನಡೆ! ದೊಡ್ಡಣ್ಣ ಟ್ರಂಪ್ ರೇಸ್‌ನಿಂದ ಹಿಂದಕ್ಕೆ?
ಅಮೆರಿಕಾ ಅಂದ್ರೆ ಅದೊಂದು ಕನಸು. ಬಹುತೇಕ ಪ್ರತಿಯೊಬ್ಬರ ಕನಸು ಅಮೆರಿಕಾಕ್ಕೆ ಒಮ್ಮೆಯಾದ್ರೂ ಹೋಗಬೇಕು ಅನ್ನೋದು. ಅಲ್ಲಿ ಏನೇ ನಡೆದ್ರೂ ಇತರೆಡೆ ಅದು ಹೆಡ್‌ಲೈನ್. ಇಂಥ ಅಮೆರಿಕಾದಿಂದ ಬಂದ ಹೆಡ್‌ಲೈನ್ ನ್ಯೂಸ್ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಟ್ರಂಪ್ ಆಪ್ತ ಫಾಕ್ಸ್ ನ್ಯೂಸ್ ಮೂಲಗಳ ಪ್ರಕಾರ.. ಹೌದು ಅಮೆರಿಕಾ ಕಂಡ ಅಂತ್ಯಂತ ವಿವಾದಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡನೆ ಅವಧಿಯ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರೀತಾರಾ ಅನ್ನೋ ಗರಮಾ ಗರಮ್ ನ್ಯೂಸ್ ಈಗ ತೀವ್ರ ಸಂಚಲನ ಮೂಡಿಸಿದೆ. ಅಧ್ಯಕ್ಷ […]
ಅಮೆರಿಕಾ ಅಂದ್ರೆ ಅದೊಂದು ಕನಸು. ಬಹುತೇಕ ಪ್ರತಿಯೊಬ್ಬರ ಕನಸು ಅಮೆರಿಕಾಕ್ಕೆ ಒಮ್ಮೆಯಾದ್ರೂ ಹೋಗಬೇಕು ಅನ್ನೋದು. ಅಲ್ಲಿ ಏನೇ ನಡೆದ್ರೂ ಇತರೆಡೆ ಅದು ಹೆಡ್‌ಲೈನ್. ಇಂಥ ಅಮೆರಿಕಾದಿಂದ ಬಂದ ಹೆಡ್‌ಲೈನ್ ನ್ಯೂಸ್ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ.
ಟ್ರಂಪ್ ಆಪ್ತ ಫಾಕ್ಸ್ ನ್ಯೂಸ್ ಮೂಲಗಳ ಪ್ರಕಾರ.. ಹೌದು ಅಮೆರಿಕಾ ಕಂಡ ಅಂತ್ಯಂತ ವಿವಾದಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡನೆ ಅವಧಿಯ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರೀತಾರಾ ಅನ್ನೋ ಗರಮಾ ಗರಮ್ ನ್ಯೂಸ್ ಈಗ ತೀವ್ರ ಸಂಚಲನ ಮೂಡಿಸಿದೆ. ಅಧ್ಯಕ್ಷ ಟ್ರಂಪ್‌ಗೆ ಆಪ್ತವಾಗಿರುವ ಫಾಕ್ಸ್ ನ್ಯೂಸ್‌ನ ಮೂಲಗಳ ಪ್ರಕಾರ 2020 ಅಧ್ಯಕ್ಷೀಯ ರೇಸ್‌ನಿಂದ ಡೋನಾಲ್ಡ್ ಟ್ರಂಪ್ ಹಿಂದೆ ಸರಿಯುವ ಸಾಧ್ಯತೆ ಇದೆ. ಇದು ಎಲ್ಲೆಡೆ ಈಗ ಹಲ್‌ಚಲ್ ಸೃಷ್ಟಿಸಿದೆ.
ಟ್ರಂಪ್ ಹಿಂದೆ ಸರಿಯುವ ಚಿಂತನೆಗೆ ಕಾರಣಗಳೇನು ಫಾಕ್ಸ್ ನ್ಯೂಸ್ ಪ್ರಕಾರ ಇತ್ತೀಚಿನ ದಿನಗಳಲ್ಲಿ ಅಮೆರಿಕಾದಲ್ಲಿ ನಡೆದ ಸಮೀಕ್ಷೆಗಳಲ್ಲಿ ಅಧ್ಯಕ್ಷ ಟ್ರಂಪ್ ಪ್ರತಿಯೊಂದು ಸರ್ವೆಯಲ್ಲೂ ಹಿಂದಿದ್ದಾರೆ. ಅವರ ಪ್ರತಿಸ್ಪರ್ಧಿ ಡೆಮೋಕ್ರಟಿಕ್ ಪಕ್ಷದ ಸಂಭ್ಯಾವ್ಯ ಅಭ್ಯರ್ಥಿ ಜೋಯ್ ಬಿಡೆನ್ ಗಣನೀಯವಾಗಿ ಮಂದಿದ್ದಾರೆ. ಇದು ಟ್ರಂಪ್ ಟೀಮ್‌ನ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಚುನಾವಣೆಯಲ್ಲಿ ಸೋತು ಮರ್ಯಾದೆಗೆಡುವುದಕ್ಕಿಂತ ಚುನಾವಣಾ ಕಣದಿಂದಲೇ ಹಿಂದಕ್ಕೆ ಸರಿಯುವುದು ಲೇಸು ಎನ್ನುವ ಚಿಂತನೆ ಟ್ರಂಪ್ ಅವರದ್ದು ಎಂದು ಹೇಳಲಾಗ್ತಿದೆ.
ಆದ್ರೆ ಡೋನಾಲ್ಡ್ ಟ್ರಂಪ್ ಈ ಸುದ್ದಿಯನ್ನ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ಅಧ್ಯಕ್ಷೀಯ ಚುನಾವಣೆಯ ಸರ್ವೆಗಳೆಲ್ಲವನ್ನೂ ಕೂಡಾ ಒಂದು ಜೋಕ್ ಅಂತಾ ತಳ್ಳಿಹಾಕಿದ್ದಾರೆ. ಹಾಗೇನೇ 2016ರಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನ ತಮ್ಮ ವಿರೋಧಿಗಳಿಗೆ ನೆನಪಿಸಿದ್ದಾರೆ.
2016ರಲ್ಲಿ ಅಚ್ಚರಿ ರೀತಿಯಲ್ಲಿ ಹಿಲರಿಯ ಸೋಲಿಸಿದ್ದ ಟ್ರಂಪ್ ಹೌದು 2016 ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಎಂಬ ಅಂಡರ್‌ಡಾಗ್, ಗೆಲ್ಲುವ ಹಾಟ್‌ಫೆವರಿಟ್ ಆಗಿದ್ದ ಹಿಲರಿ ಕ್ಲಿಂಟನ್ ಅವರನ್ನ ಚುನಾವಣಾ ಪೂರ್ವ ಸರ್ವೆಗಳಲ್ಲಿ ಹಿಂದಿದ್ರೂ ಸೋಲಿಸಿ ಇಡಿ ಜಗತ್ತಿಗೇ ಶಾಕ್ ಕೊಟ್ಟಿದ್ರು. ಹೀಗಾಗಿ ಈ ಸಾರಿಯು ಹಾಗೇ ಆಗುತ್ತೆ ಅನ್ನೋದು ಟ್ರಂಪ್ ಅವರ ನಂಬಿಕೆ.
ಟ್ರಂಪ್ ಬಗ್ಗೆ ಅಮೆರಿಕದಲ್ಲಿ ಅಸಮಾಧಾನ ಆದ್ರೆ ಈ ನಾಲ್ಕು ವರ್ಷಗಳಲ್ಲಿ ಅಮೆರಿಕಾದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಟ್ರಂಪ್ ಅವರ ಮೂಲ ಬೆಂಬಲಿಗರಲ್ಲಿ ಕೆಲವರಿಗೆ ಟ್ರಂಪ್ ಬಗ್ಗೆ ಭ್ರಮನಿರಸನವಾಗಿದೆ. ಜೊತೆಗೆ ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಮತ್ತು ಬ್ಲಾಕ್ ಲೈವ್ಸ್ ಮ್ಯಾಟರ್ ಆಂದೋಲನವನ್ನ ಸಮರ್ಥವಾಗಿ ನಿಭಾಯಿಸಲು ಟ್ರಂಪ್ ವಿಫಲರಾಗಿದ್ದಾರೆ ಎನ್ನೋ ಭಾವನೆ ಅಮೆರಿಕನ್‌ರಲ್ಲಿದೆ.
ಹೀಗಾಗಿ ಸಾಕಷ್ಟು ಅಮೆರಿಕನ್‌ರು ಈ ಬಾರಿ ಮಾಜಿ ಉಪಾಧ್ಯಕ್ಷ ಜೋಯ್ ಬಿಡೆನ್‌ರತ್ತ ಮುಖ ಮಾಡಿದ್ದಾರೆ ಎನ್ನುತ್ತವೆ ಸಮೀಕ್ಷೆಗಳು. ಹೀಗಾಗಿ ಟ್ರಂಪ್ ಸೋತು ಮುಖಭಂಗಕ್ಕೀಡಾಗುವುದಕ್ಕಿಂತ ಕಣದಿಂದ ಹಿಂದೆ ಸರಿಯುವುದೇ ಲೇಸು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನುತ್ತವೆ ರಿಪಬ್ಲಿಕ್ ಪಕ್ಷದ ಮೂಲಗಳು.