ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು. 1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ […]

ಕೊರೊನಾ ಕಾಟಕ್ಕೆ ಗುಡ್​ಬೈ ಹೇಳಿ, ಪ್ರತಿಷ್ಠಿತ ಡಿಸ್ನಿಲ್ಯಾಂಡ್​ ಪಾರ್ಕ್​ ಮತ್ತೆ ಆರಂಭವಾಯ್ತು
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 01, 2020 | 1:23 PM

ಟೋಕಿಯೋ: ಕಳೆದ ನಾಲ್ಕು ತಿಂಗಳಿನಿಂದ ಕೊರೊನಾದಿಂದ ಬಳಲಿ ಬೇಸತ್ತು ಹೋಗಿದ್ದ ಜಪಾನ್​ ದೇಶದ ರಾಜಧಾನಿ ಟೋಕಿಯೋ ಈಗ ತುಸು ಸುಧಾರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಇದೀಗ ನಗರದ ಹಲವಾರು ಮನರಂಜನಾ ಸಂಸ್ಥೆಗಳು ಪುನಃ ಬಾಗಿಲು ತೆರೆದು ಜನರನ್ನು ಸ್ವಾಗತಿಸುತ್ತಿವೆ. ಇದರಲ್ಲಿ ಟೋಕಿಯೋದ ಜನಪ್ರಿಯ ಡಿಸ್ನಿಲ್ಯಾಂಡ್​ ಮತ್ತು ಡಿಸ್ನಿ ಸೀ ಥೀಮ್​​ ಪಾರ್ಕ್​ಗಳು ಕೂಡ ಒಂದು.

1983ರಲ್ಲಿ ಸ್ಥಾಪನೆಯಾಗಿದ್ದ ಥೀಮ್​ ಪಾರ್ಕ್​ಗೆ ಪ್ರತಿ ವರ್ಷ ಸರಿಸುಮಾರು 18 ಮಿಲಿಯನ್​ ಜನ ಭೇಟಿ ನೀಡುತ್ತಾರೆ. ಹೀಗಾಗಿ, ಸುಮಾರು ನಾಲ್ಕು ತಿಂಗಳ ಬಳಿಕ ಇಂದಿನಿಂದ ಮತ್ತೊಮ್ಮೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಬೆಳಗ್ಗೆ 8ರಿಂದ ಆರಂಭಗೊಳ್ಳುವ ಪಾರ್ಕ್ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಕವಾಯತ್ತು ಅಥವಾ ಶೋಗಳನ್ನು ನಡೆಸುವುದಿಲ್ಲ. ಕೇವಲ ರೋಲರ್​ ಕೋಸ್ಟರ್​ ಹಾಗೂ ಇತರೆ ಆಟಗಳು ಮಾತ್ರ ಲಭ್ಯವಿರುತ್ತೆ.

ಜೊತೆಗೆ, ಪಾರ್ಕ್​ನ ಆಡಳಿತ ಮಂಡಳಿ ಕೆಲವು ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ. ಡಿಸ್ನಿಲ್ಯಾಂಡ್​ಗೆ ಭೇಟಿ ಕೊಡುವ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಲೇಬೇಕು. ಪಾರ್ಕ್ ​ ಪ್ರವೇಶಿಸುವ ಮುನ್ನ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸ್​​ ಮಾಡಲಾಗುವುದು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹ ಸೂಚಿಸಲಾಗುವುದು. ಇದಲ್ಲದೆ, ಇವೆಲ್ಲಾ ಮಾಹಿತಿಯನ್ನು ಟಿಕೆಟ್​ನ ಹಿಂದೆ ಸಹ ನಮೂದಿಸಲಾಗುವುದು ಎಂದು ಪಾರ್ಕ್​ನ ಆಡಳಿತ ಮಂಡಳಿ ತಿಳಿಸಿದೆ.

Published On - 1:10 pm, Wed, 1 July 20

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ