Top News: ಕೋವಿಡ್ ಆಸ್ಪತ್ರೆಯವರೇ ನನ್ನನ್ನು ಕೊಲ್ಲಲು ಯತ್ನಿಸಿದ್ರು!
ಕೊರೊನಾ ಸೋಂಕಿತರು ಆಸ್ಪತ್ರೆಗೆ ಸೇರಿದ್ರೂ, ಅವರ ಸ್ಥಿತಿ ಎಷ್ಟು ನರಕದಂತಿರುತ್ತೆ ಅನ್ನೋದನ್ನ ಭಾರತದಲ್ಲಿ ನೋಡಿದ್ವಿ. ಆದ್ರೆ, ನ್ಯೂಯಾರ್ಕ್ನ ಆಸ್ಪತ್ರೆಯೊಂದರಲ್ಲಿ 31 ವರ್ಷದ ಕಿಮ್ ವಿಕ್ಟರಿ ಆಸ್ಪತ್ರೆಯವರೇ ತನ್ನನ್ನ ಕೊಲ್ಲಲು ಯತ್ನಿಸಿದ್ರು ಅಂತಾ ಹೇಳಿದ್ದಾರೆ. ಜಪಾನ್ನ ಲ್ಯಾಬ್ ವೊಂದರಲ್ಲಿ ಸೋಂಕಿತೆಯನ್ನ ಇರಿಸಲಾಗಿತ್ತಂತೆ. ಬಳಿಕ ಬೆಕ್ಕುಗಳನ್ನ ಲ್ಯಾಬ್ಗೆ ಬಿಟ್ಟು ಚಿತ್ರಹಿಂಸೆ ಕೊಡಲಾಗಿತ್ತಂತೆ. ಐಸಿಯು ನಲ್ಲಿ ವೆಂಟಿಲೇಟರ್ ತೆಗೆದು, ನೆಲದ ಮೇಲೆ ಮಲಗಿಸಲಾಗಿತ್ತು ಅಂತಾ ಅಳಲು ತೋಡಿಕೊಂಡಿದ್ದಾರೆ. ಕೊರೊನಾ ‘ಭೂತ’ ಕೊರೊನಾ ವೈರಸ್ನ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ 1,04,09,239 […]
ಕೊರೊನಾ ಸೋಂಕಿತರು ಆಸ್ಪತ್ರೆಗೆ ಸೇರಿದ್ರೂ, ಅವರ ಸ್ಥಿತಿ ಎಷ್ಟು ನರಕದಂತಿರುತ್ತೆ ಅನ್ನೋದನ್ನ ಭಾರತದಲ್ಲಿ ನೋಡಿದ್ವಿ. ಆದ್ರೆ, ನ್ಯೂಯಾರ್ಕ್ನ ಆಸ್ಪತ್ರೆಯೊಂದರಲ್ಲಿ 31 ವರ್ಷದ ಕಿಮ್ ವಿಕ್ಟರಿ ಆಸ್ಪತ್ರೆಯವರೇ ತನ್ನನ್ನ ಕೊಲ್ಲಲು ಯತ್ನಿಸಿದ್ರು ಅಂತಾ ಹೇಳಿದ್ದಾರೆ. ಜಪಾನ್ನ ಲ್ಯಾಬ್ ವೊಂದರಲ್ಲಿ ಸೋಂಕಿತೆಯನ್ನ ಇರಿಸಲಾಗಿತ್ತಂತೆ. ಬಳಿಕ ಬೆಕ್ಕುಗಳನ್ನ ಲ್ಯಾಬ್ಗೆ ಬಿಟ್ಟು ಚಿತ್ರಹಿಂಸೆ ಕೊಡಲಾಗಿತ್ತಂತೆ. ಐಸಿಯು ನಲ್ಲಿ ವೆಂಟಿಲೇಟರ್ ತೆಗೆದು, ನೆಲದ ಮೇಲೆ ಮಲಗಿಸಲಾಗಿತ್ತು ಅಂತಾ ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ‘ಭೂತ’ ಕೊರೊನಾ ವೈರಸ್ನ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣಗೊಂಡಿದೆ. ಸೋಂಕಿತರ ಸಂಖ್ಯೆ 1,04,09,239 ಕ್ಕೆ ಏರಿಕೆಯಾಗಿದೆ. ಹೊಸದಾಗಿ 1 ಲಕ್ಷ 60 ಸಾವಿರದ 468 ಜನರಿಗೆ ಸೋಂಕು ತಗುಲಿದೆ. ಸೋಂಕಿನಿಂದಾಗಿ, ಕೊರೊನಾಗೆ ಒಟ್ಟು 5 ಲಕ್ಷ 8 ಸಾವಿರ 84 ಜನರು ಬಲಿಯಾಗಿದ್ದಾರೆ. ವಿಶ್ವದಲ್ಲಿ 24 ಗಂಟೆ ಅವಧಿಯಲ್ಲಿ 3,402 ಜನರು ಕ್ರೂರಿ ವೈರಸ್ಗೆ ಬಲಿಯಾಗಿದ್ದಾರೆ. 56 ಲಕ್ಷ 48 ಸಾವಿರದ 584 ಸೋಂಕಿತರು ಗುಣಮುಖರಾಗಿದ್ದು, 57,508 ಜನರ ಸ್ಥಿತಿ ಗಂಭೀರವಾಗಿದೆ.
ಮೆಕ್ಸಿಕೋ ರೀ ಓಪನ್ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕ್ತಿತ್ತು. 2,20,657 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವೈರಸ್ನಿಂದಾಗಿ 27,121 ಜನರು ಬಲಿಯಾಗಿದ್ದಾರೆ. ಹೀಗಾಗಿ, ಲಾಕ್ಡೌನ್ ವಿಧಿಸಲಾಗಿತ್ತು. ಸೋಂಕಿತರ ಸಂಖ್ಯೆ ಕಡಿಮೆಯಾದ ಬೆನ್ನಲ್ಲೇ, ಮೆಕ್ಸಿಕೋ ನಗರದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಅಂಗಡಿ ಮುಂಗಟ್ಟುಗಳು ಸೇರಿದಂತೆ, ಕಚೇರಿಗಳನ್ನ ತೆರೆಯಲಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬಂದಿದೆ.
18 ದೇಶಗಳಿಗೆ ಜಪಾನ್ ನಿರ್ಬಂಧ ಕೊರೊನಾ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಲಕ್ಷ ಲಕ್ಷ ಜನರನ್ನ ಸೋಂಕಿತರನ್ನಾಗಿಸಿದೆ. ಆದ್ರೆ, ಜಪಾನ್ನಲ್ಲಿ ಅಷ್ಟೇನು ಪ್ರಭಾವ ಬೀರಿಲ್ಲ. ಕೇವಲ 18,476 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, 972 ಜನ ಸೋಂಕಿತರು ವೈರಸ್ನಿಂದಾಗಿ ಮೃತಪಟ್ಟಿದ್ದಾರೆ. ಸದ್ಯ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಮುನ್ನೆಚ್ಚರಿಕೆಯಿಂದಾಗಿ 18 ದೇಶಗಳ ಪ್ರವಾಸಿಗರಿಗೆ ಜಪಾನ್ ನಿರ್ಬಂಧ ವಿಧಿಸಿದೆ. ನಾಳೆಯಿಂದ 1 ತಿಂಗಳ ವರೆಗೂ ಎಂಟ್ರಿ ಇರಲ್ಲ.
‘HIV ಮದ್ದು ಕೊರೊನಾ ಗುಣಪಡಿಸಲ್ಲ’ ಕೊರೊನಾ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಆದ್ರೂ, ಸದ್ಯ ಮಲೇರಿಯಾ ಔಷಧಿ ಮತ್ತು ಹೆಚ್ಐವಿ ರೋಗಿಗಳಿಗೆ ನೀಡುವ ಔಷಧಿಯನ್ನ ನೀಡಲಾಗ್ತಿದೆ. ಆದ್ರೆ, ಬ್ರಿಟೀಷ್ ವಿಜ್ಞಾನಿಗಳ ಪ್ರಕಾರ, ಹೆಚ್ಐವಿ ಮದ್ದು ಕೊರೊನಾ ರೋಗವನ್ನ ಗುಣಪಡಿಸಲ್ಲ. ಸುಮಾರು 3,376 ಜನರ ಮೇಲೆ ನಡೆಸಿದ ಪ್ರಯೋಗದಲ್ಲಿ ಲೊಪಿನ್ವಿರ್ ಮತ್ತು ರಿಟೊನ್ವಿರ್ ಔಷಧಿ ಕೊರೊನಾ ಸೋಂಕಿತರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಅಂತಾ ಹೇಳಿದೆ.
‘ಭವಿಷ್ಯ ಕೆಟ್ಟದಾಗಿರಲಿದೆ’ ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವದ ಭವಿಷ್ಯವೇ ಮಂಕಾಗಿ ಹೋಗಿದೆ. ಜನ ಜೀವನ ಅಸ್ತವ್ಯಸ್ಥವಾಗಿದೆ. ಉದ್ಯೋಗ ಇಲ್ಲದೇ, ವೇತನ ಇಲ್ಲದೇ ಜನ ಬದುಕು ದುಸ್ತರವಾಗ್ತಿದೆ. ಇದ್ರ ಬೆನ್ನಲ್ಲೇ, ಕೊರೊನಾ ರೋಗದಿಂದ ಜನರ ಮುಂದಿನ ಭವಿಷ್ಯ ಕೆಟ್ಟದಾಗಿರಲಿದೆ ಅಂತಾ ಡಬ್ಲೂಎಚ್‌ಒ ಮುಖ್ಯಸ್ಥ ಟೆಡ್ರೊಸ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ. ಕೊರೊನಾ ವೈರಸ್ನ ಸಾಂಕ್ರಾಮಿಕ ರೋಗದ ಭೀಕರತೆ ಇನ್ನೂ ಬರಬೇಕಿದೆ. ಜನರಲ್ಲಿ ಭಯ ಹೋಗಲಾಡಿಸಿ ಹೋರಾಟಕ್ಕೆ ಸಜ್ಜುಗೊಳಿಸಬೇಕಿದೆ ಅಂತಾ ಟೆಡ್ರೊಸ್ ವಾರ್ನ್ ಮಾಡಿದ್ದಾರೆ.
‘ಮಾಸ್ಕ್ ಧರಿಸೋದು ಟ್ರಂಪ್ ಆಯ್ಕೆ’ ಅಮೆರಿಕದಲ್ಲಿ ಕೊರೊನಾ ವೈರಸ್ನ ಅಟ್ಟಹಾಸ ಎಷ್ಟಿದೆ ಅನ್ನೋದಕ್ಕೆ ಸೋಂಕಿತರ ಸಂಖ್ಯೆ 26,81,811ಕ್ಕೆ ಏರಿಕೆಯಾಗಿರೋದೇ ಸಾಕ್ಷಿ. ಸೋಂಕಿನಿಂದಾಗಿ 1,28.783 ಜನರು ಬಲಿಯಾಗಿದ್ದಾರೆ. ಆದ್ರೆ, ಇಷ್ಟಾದರೂ ಸಹ ಅಧ್ಯಕ್ಷ ಟ್ರಂಪ್ ಮಾತ್ರ ಒಮ್ಮೆಯೂ ಮಾಸ್ಕ್ ಧರಿಸಿಲ್ಲ. ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ವೈಟ್ ಹೌಸ್ ವಕ್ತಾರೆ ಕೇಯ್ಲೈ ಮೆಕನಾನಿ ಸ್ಪಷ್ಟನೆ ನೀಡಿದ್ದು, ಮಾಸ್ಕ್ ಧರಿಸೋದು ಬಿಡೋದು ಟ್ರಂಪ್ಗೆ ಬಿಟ್ಟ ಆಯ್ಕೆ. ಜನತೆ ಕೂಡ ಮಾಸ್ಕ್ ಧರಿಸೋದು ವೈಯಕ್ತಿಕ ವಿಚಾರ ಅಂತಾ ಹೇಳಿದ್ದಾರೆ.
ಲಿಬಿಯಾದಲ್ಲಿ ನರಕಯಾತನೆ! ಸ್ವಾಗತಿಸಲು ಸ್ನೇಹಿತರಿಲ್ಲ.. ಶುಭ ಕೋರಲು ಕುಟುಂಬಸ್ಥರಿಲ್ಲ.. ಲಾಗೋಸ್ ಏರ್ಪೋರ್ಟ್ನಲ್ಲಿ ವಲಸೆ ಕಾರ್ಮಿಕರ ಸ್ಥಿತಿ ನಿಜಕ್ಕೂ ನರಕಯಾತನೆ ಆಗಿದೆ. ಹೌದು, ಲಾಗೋಸ್ ಏರ್ಪೋರ್ಟ್ನಲ್ಲಿ ಕಾರ್ಗೋ ಟರ್ಮಿನಲ್ನಲ್ಲಿ ಬಂದಿಳಿದು 160 ವಲಸೆ ಕಾರ್ಮಿಕರು ವಾಪಸ್ ತವರಿಗೆ ಮರಳಿದ್ದು, ಅಲ್ಲಿನ ಸ್ಥಿತಿ ನೆನೆದು ಕಣ್ಣಿರಿಟ್ಟಿದ್ದಾರೆ. ಕೊರೊನಾ ಸೋಂಕಿನ ಮಧ್ಯೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲವಂತೆ.
ಚಿಲಿಯಲ್ಲಿ ಶವ ಪೆಟ್ಟಿಗೆಗಳ ಕೊರತೆ! ಚಿಲಿ ದೇಶದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ 2,71,982ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 5,500 ದಾಟಿದೆ. ಇದ್ರ ಮಧ್ಯೆ ಸೋಂಕಿನಿಂದ ಮೃತಪಟ್ಟವರನ್ನ ಸ್ಮಶಾನಕ್ಕೆ ಸಾಗಿಸಲು ಶವ ಪೆಟ್ಟಿಗೆಗಳ ಕೊರತೆ ಎದುರಾಗಿದೆ. ಸದ್ಯ ಇದ್ದ ಬದ್ದ ಶವ ಪೆಟ್ಟಿಗೆಗಳೆಲ್ಲವೂ ಖಾಲಿಯಾಗಿದೆಯಂತೆ.