ಗಾಬರಿ ಬೇಡ.. ಆಯುರ್ವೇದ ಚಿಕಿತ್ಸೆಯಲ್ಲಿ ಈ 58 ಸರ್ಜರಿಗಳಿಗೆ ಮಾತ್ರವೇ ಅವಕಾಶ

|

Updated on: Nov 23, 2020 | 11:57 AM

ದೆಹಲಿ: ಕೆಲವು ಸರ್ಜರಿಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೂ ಕೇಂದ್ರ ಸರ್ಕಾರ ಕಾನೂನು ಬದ್ಧವಾಗಿ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದ್ದಕ್ಕೆ ಐಎಂಎ (ಭಾರತೀಯ ವೈದ್ಯಕೀಯ ಸಂಘ) ವಿರೋಧ ವ್ಯಕ್ತಪಡಿಸಿತ್ತು. ಆಧುನಿಕ ಔಷಧೀಯ ವ್ಯವಸ್ಥೆಯನ್ನು ಭಾರತದ ಪ್ರಾಚೀನ ಆಯುರ್ವೇದ ಪದ್ಧತಿಯೊಂದಿಗೆ ಬೆರೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಬೆನ್ನಲ್ಲೇ ಆಯುಷ್​ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಎರಡೂ ಔಷಧ ಪದ್ಧತಿಗಳನ್ನು ಮಿಶ್ರಣ ಮಾಡುತ್ತಿಲ್ಲ. ಆಯುರ್ವೇದದಲ್ಲಿ ಸ್ನಾತಕೋತ್ತರ ಪಡೆದವರಿಗೆ ಕೇವಲ 58 ಬಗೆಯ ಶಸ್ತ್ರಚಿಕಿತ್ಸೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಅದರಲ್ಲೂ ಶಲ್ಯ ಮತ್ತು ಶಾಕಲ್ಯ […]

ಗಾಬರಿ ಬೇಡ.. ಆಯುರ್ವೇದ ಚಿಕಿತ್ಸೆಯಲ್ಲಿ ಈ 58 ಸರ್ಜರಿಗಳಿಗೆ ಮಾತ್ರವೇ ಅವಕಾಶ
Follow us on

ದೆಹಲಿ: ಕೆಲವು ಸರ್ಜರಿಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೂ ಕೇಂದ್ರ ಸರ್ಕಾರ ಕಾನೂನು ಬದ್ಧವಾಗಿ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದ್ದಕ್ಕೆ ಐಎಂಎ (ಭಾರತೀಯ ವೈದ್ಯಕೀಯ ಸಂಘ) ವಿರೋಧ ವ್ಯಕ್ತಪಡಿಸಿತ್ತು. ಆಧುನಿಕ ಔಷಧೀಯ ವ್ಯವಸ್ಥೆಯನ್ನು ಭಾರತದ ಪ್ರಾಚೀನ ಆಯುರ್ವೇದ ಪದ್ಧತಿಯೊಂದಿಗೆ ಬೆರೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಈ ಬೆನ್ನಲ್ಲೇ ಆಯುಷ್​ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಎರಡೂ ಔಷಧ ಪದ್ಧತಿಗಳನ್ನು ಮಿಶ್ರಣ ಮಾಡುತ್ತಿಲ್ಲ. ಆಯುರ್ವೇದದಲ್ಲಿ ಸ್ನಾತಕೋತ್ತರ ಪಡೆದವರಿಗೆ ಕೇವಲ 58 ಬಗೆಯ ಶಸ್ತ್ರಚಿಕಿತ್ಸೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಅದರಲ್ಲೂ ಶಲ್ಯ ಮತ್ತು ಶಾಕಲ್ಯ ಪರಿಣತರಿಗಷ್ಟೇ ಅವಕಾಶ. 39 ಸಾಮಾನ್ಯ ಸರ್ಜರಿಗಳು ಮತ್ತು 19 ರೀತಿಯ ಕಣ್ಣು, ತಲೆ, ಡೆಂಟಲ್​, ಮೂಗಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಳಿಗಷ್ಟೇ ಅನುಮತಿ ನೀಡಿ ಸೆಂಟ್ರಲ್​ ಕೌನ್ಸಿಲ್ ಆಫ್​ ಇಂಡಿಯನ್​ ಮೆಡಿಸಿನ್​ನಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದೆ.

ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ಆಯುರ್ವೇದ ಸ್ನಾತಕೋತ್ತರ ಶಿಕ್ಷಣ) ನಿಯಮಗಳು, 2016ಕ್ಕೆ ತಿದ್ದುಪಡಿ ತರುವ ಮೂಲಕ, ಸಿಸಿಐಎಂ (ಸೆಂಟ್ರಲ್​ ಕೌನ್ಸಿಲ್ ಆಫ್​ ಇಂಡಿಯನ್​ ಮೆಡಿಸಿನ್​) ನಿನ್ನೆ ಇಂಥದ್ದೊಂದು ಮಹತ್ವದ ಅಧಿಸೂಚನೆ ಹೊರಡಿಸಿತ್ತು.

ಅದರ ಅನ್ವಯ ಆಯುರ್ವೇದದ ಸ್ನಾತಕೋತ್ತರ ಪದವಿ ವೇಳೆ ಶಲ್ಯ ಮತ್ತು ಶಾಕಲ್ಯ ಅಭ್ಯಾಸ ಮಾಡಿ, ಅದನ್ನು ಸರಿಯಾಗಿ ತರಬೇತಿ ಪಡೆದು ಸ್ವತಂತ್ರವಾಗಿ ಪ್ರಕ್ರಿಯೆಗಳನ್ನು ನಿರ್ವಹಿಸಲು ಅರ್ಹರಾದವರಿಗಷ್ಟೇ ಸರ್ಜರಿಗೆ ಅವಕಾಶ ಎಂದು ಹೇಳಿತ್ತು.

ಆದರೆ ಈ ನೋಟಿಫಿಕೇಶನ್ ಹೊರಬೀಳುತ್ತಿದ್ದಂತೆ ಐಎಂಎ ಖಡಾಖಂಡಿತವಾಗಿ ವಿರೋಧಿಸಿತ್ತು. ಇದು ಇಡೀ ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಭ್ರಷ್ಟಗೊಳಿಸುವ ಕ್ರಮ ಎಂದು ಹೇಳಿತ್ತು. ಇಂಥ ಯಾವುದೇ ಔಷಧೀಯ ಪದ್ಧತಿಗಳನ್ನು ಮಿಶ್ರಣ ಮಾಡುವುದರಿಂದ ನಾವು ಅಂತರ ಕಾಯ್ದುಕೊಳ್ಳುತ್ತೇವೆ. ಹಾಗೇ ಆಯುರ್ವೇದ ಸರ್ಜರಿಗೂ ಆಧುನಿಕ ವೈದ್ಯಕೀಯದಲ್ಲಿರುವ ಹೆಸರುಗಳನ್ನೇ ಇಡುವುದು ಆಕ್ಷೇಪಾರ್ಹ ಎಂದೂ ಹೇಳಿತ್ತು.