ಹೊಸ ಆವಿಷ್ಕಾರ! ಮಾಸ್ಕ್ನಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟು ಕಾಪಿ ಮಾಡಿದ ಪ್ಯಾದೆ..
ಬಾಗಲಕೋಟೆ: ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಯೊಬ್ಬ ವಿನೂತನ ರೀತಿಯಲ್ಲಿ ನಕಲು ಮಾಡಲು ಮುಂದಾಗಿ ಇದೀಗ ಖಾಕಿಯ ಅತಿಥಿಯಾಗಿದ್ದಾನೆ. ನಿನ್ನೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿ ಶ್ರೀಮಂತ ಸದಲಗಿ ನಕಲು ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ. ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿ ಶ್ರೀಮಂತ ಸದಲಗಿ ತನ್ನ ಮಾಸ್ಕ್ನಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟುಕೊಂಡಿದ್ದ. ಬ್ಯೂಟೂತ್ ಡಿವೈಸ್ ಮೂಲಕ ಪರೀಕ್ಷಾ ಕೇಂದ್ರದ ಹೊರಗಿದ್ದವರೊಂದಿಗೆ ಸಂಪರ್ಕ ಸಾಧಿಸಿ, ಪ್ರಶ್ನೆಗಳನ್ನು ಓದಿ ತನ್ನ ಸಹಚರರಿಂದ ಉತ್ತರ ಪಡೆಯುತ್ತಿದ್ದ. ಇದನ್ನು ಗಮನಿಸಿದ ಸಿಬ್ಬಂದಿ ತಪಾಸಣೆ […]

ಬಾಗಲಕೋಟೆ: ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಯೊಬ್ಬ ವಿನೂತನ ರೀತಿಯಲ್ಲಿ ನಕಲು ಮಾಡಲು ಮುಂದಾಗಿ ಇದೀಗ ಖಾಕಿಯ ಅತಿಥಿಯಾಗಿದ್ದಾನೆ. ನಿನ್ನೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿ ಶ್ರೀಮಂತ ಸದಲಗಿ ನಕಲು ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿ ಶ್ರೀಮಂತ ಸದಲಗಿ ತನ್ನ ಮಾಸ್ಕ್ನಲ್ಲಿ ಬ್ಲೂಟೂತ್ ಡಿವೈಸ್ ಬಚ್ಚಿಟ್ಟುಕೊಂಡಿದ್ದ. ಬ್ಯೂಟೂತ್ ಡಿವೈಸ್ ಮೂಲಕ ಪರೀಕ್ಷಾ ಕೇಂದ್ರದ ಹೊರಗಿದ್ದವರೊಂದಿಗೆ ಸಂಪರ್ಕ ಸಾಧಿಸಿ, ಪ್ರಶ್ನೆಗಳನ್ನು ಓದಿ ತನ್ನ ಸಹಚರರಿಂದ ಉತ್ತರ ಪಡೆಯುತ್ತಿದ್ದ.
ಇದನ್ನು ಗಮನಿಸಿದ ಸಿಬ್ಬಂದಿ ತಪಾಸಣೆ ನಡೆಸಿದಾಗ ಬ್ಲೂಟೂತ್ ಡಿವೈಸ್ ಪತ್ತೆಯಾಗಿದೆ. ತಕ್ಷಣ ಆತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.