RTO ಕಣ್ಣಿಗೆ ಮಣ್ಣೆರಚುತ್ತಿವೆ Same to Same Number Plate ವಾಹನಗಳು.. ಇದು ಹೇಗೆ ಸಾಧ್ಯ?
ನೆಲಮಂಗಲ: ಒಂದೇ ನಂಬರ್ ಪ್ಲೇಟ್ನಲ್ಲಿ ನಾಲ್ಕು ಬಸ್ಗಳನ್ನು ರಸ್ತೆಗಿಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಬೊಕ್ಕಸಕ್ಕೆ ತೆರಿಗೆ ವಂಚನೆ ಮಾಡಿ ಓಡಾಟ ನಡೆಸ್ತಿದ್ದ ಬಸ್ಗಳನ್ನು ಇದೀಗ ಜಪ್ತಿ ಮಾಡಲಾಗಿದೆ. ಯಶವಂತಪುರ ಹಾಗೂ ನೆಲಮಂಗಲದ ಸಾರಿಗೆ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ತೆರಿಗೆ ವಂಚನೆ ಮಾಡ್ತಿದ್ದ ಬಸ್ಗಳನ್ನು ಜಪ್ತಿ ಮಾಡಿದ್ದಾರೆ. ಅಂದ ಹಾಗೆ, ಬಸ್ ಮಾಲೀಕರು ಕಳೆದ ಒಂದೂವರೆ ವರ್ಷದಿಂದ ಬೋಗಸ್ ಪರ್ಮಿಟ್ ಸಹ ಪಡೆದು ಬಸ್ಗಳನ್ನು ಓಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರು ಹಾಗೂ ಮುಂಬೈ ನಡುವೆ […]
ನೆಲಮಂಗಲ: ಒಂದೇ ನಂಬರ್ ಪ್ಲೇಟ್ನಲ್ಲಿ ನಾಲ್ಕು ಬಸ್ಗಳನ್ನು ರಸ್ತೆಗಿಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯದ ಬೊಕ್ಕಸಕ್ಕೆ ತೆರಿಗೆ ವಂಚನೆ ಮಾಡಿ ಓಡಾಟ ನಡೆಸ್ತಿದ್ದ ಬಸ್ಗಳನ್ನು ಇದೀಗ ಜಪ್ತಿ ಮಾಡಲಾಗಿದೆ. ಯಶವಂತಪುರ ಹಾಗೂ ನೆಲಮಂಗಲದ ಸಾರಿಗೆ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ತೆರಿಗೆ ವಂಚನೆ ಮಾಡ್ತಿದ್ದ ಬಸ್ಗಳನ್ನು ಜಪ್ತಿ ಮಾಡಿದ್ದಾರೆ.
ಅಂದ ಹಾಗೆ, ಬಸ್ ಮಾಲೀಕರು ಕಳೆದ ಒಂದೂವರೆ ವರ್ಷದಿಂದ ಬೋಗಸ್ ಪರ್ಮಿಟ್ ಸಹ ಪಡೆದು ಬಸ್ಗಳನ್ನು ಓಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೆಂಗಳೂರು ಹಾಗೂ ಮುಂಬೈ ನಡುವೆ ಸಂಚಾರ ಮಾಡ್ತಿದ್ದ ಬಸ್ಗಳು ಬರೋಬ್ಬರಿ ಅರ್ಧಕೋಟಿವರೆಗೂ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
NL 01 B 1974 ನಂಬರ್ನಲ್ಲಿ ಓಡಾಡ್ತಿದ್ದ ಎರಡು ಬಸ್ಗಳನ್ನು ಸಾರಿಗೆ ಅಧಿಕಾರಿಗಳು ಜಪ್ತಿಮಾಡಿದ್ದಾರೆ. ಯಶವಂತಪುರ ಹಾಗೂ ನೆಲಮಂಗಲ ಸಾರಿಗೆ ಅಧೀಕಾರಿಗಳು ಕಳೆದ ಒಂದು ತಿಂಗಳಿನಿಂದ ಕಾರ್ಯಾಚರಣೆ ನಡೆಸುವ ಮೂಲಕ ಈ ಅಕ್ರಮ ಪತ್ತೆಯಾಗಿದೆ.