AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HD ಕುಮಾರಸ್ವಾಮಿ ನಾಳೆ.. ಹೋಗಿ ಬಾವಿಗೆ ಬೀಳಿ ಅಂದ್ರೆ ಬೀಳೋದಾ? -ಸಿದ್ದರಾಮಯ್ಯ

ಹೊಸ ಪಕ್ಷ ಕಟ್ಟಿ ನೋಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ವಿಚಾರವಾಗಿ ಕುಮಾರಸ್ವಾಮಿಯ ಸವಾಲು ಸ್ವೀಕಾರ ಮಾಡಬೇಕು ಅಂತಾ ಏನಾದರು ಇದ್ಯಾ? ಅವರು ನಾಳೆ ಹೋಗಿ ಬಾವಿಗೆ ಬೀಳಿ ಅಂದ್ರೆ ಬೀಳೋದಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

HD ಕುಮಾರಸ್ವಾಮಿ ನಾಳೆ.. ಹೋಗಿ ಬಾವಿಗೆ ಬೀಳಿ ಅಂದ್ರೆ ಬೀಳೋದಾ? -ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
KUSHAL V
| Edited By: |

Updated on:Dec 21, 2020 | 12:59 PM

Share

ಬೆಂಗಳೂರು: ಬಿಜೆಪಿ, JDS ಈಗಾಗಲೇ ಹೊಂದಾಣಿಕೆ ಮಾಡಿಕೊಂಡಿವೆ. ಆದರೆ ಅವರು ವಿಲೀನ ವಿಚಾರವನ್ನು ತಳ್ಳಿ ಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. JDS ಪಕ್ಷವು BJPಯ B-ಟೀಂ. ಅವರು B-ಟೀಂ ಆಗಿರೋದ್ದಕ್ಕೇ.. ನಾನು B-ಟೀಂ ಅಂತಾ ಹೇಳಿದ್ದೇನೆ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ . ಜೊತೆಗೆ, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ದೇವೇಗೌಡರು ಒಪ್ಪಿದ್ದಾರಾ ಎಂಬುದು ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳೋಕೆ ಬರಲ್ಲ ಎಂದು ಹೇಳಿ ಸಿದ್ದರಾಮಯ್ಯ ಸುಮ್ಮನಾದರು.

‘ನಾಳೆ ಹೋಗಿ ಬಾವಿಗೆ ಬೀಳಿ ಅಂದ್ರೆ ಬೀಳೋದಾ?’ ಹೊಸ ಪಕ್ಷ ಕಟ್ಟಿ ನೋಡಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ವಿಚಾರವಾಗಿ ಕುಮಾರಸ್ವಾಮಿಯ ಸವಾಲು ಸ್ವೀಕಾರ ಮಾಡಬೇಕು ಅಂತಾ ಏನಾದರು ಇದ್ಯಾ? ಅವರು ನಾಳೆ ಹೋಗಿ ಬಾವಿಗೆ ಬೀಳಿ ಅಂದ್ರೆ ಬೀಳೋದಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ನಾನ್ಯಾಕೆ ಹೊಸ ಪಾರ್ಟಿ ಕಟ್ಟಲಿ ಎಂದ ಸಿದ್ದರಾಮಯ್ಯ ನಾನು ಕಾಂಗ್ರೆಸ್ ಮನ್. ನಾನು ಕಾಂಗ್ರೆಸ್​ನಲ್ಲಿ ಕಂಫರ್ಟಬಲ್​ ಆಗಿದ್ದೇನೆ ಎಂದು ಹೇಳಿದರು.

ಸಿದ್ದರಾಮಯ್ಯ (ಎಡ); H.D.ಕುಮಾರಸ್ವಾಮಿ (ಬಲ)

‘ಸಿ.ಟಿ.ರವಿ ಏನಾದ್ರೂ ಪ್ರಶ್ನಾತೀತ ನಾಯಕನಾ?’ ಚಾಮುಂಡೇಶ್ವರಿಯಲ್ಲಿ ಸೋಲಿಸಿದವರ ಬಗ್ಗೆ ಬಹಿರಂಗಪಡಿಸಿ ಎಂಬ ಸಿ.ಟಿ. ರವಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು ನನ್ನ ಸೋಲಿನ ಬಗ್ಗೆ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದೇನೆ. ನಾನು ಚಾಮುಂಡೇಶ್ವರಿ ಕ್ಷೇತ್ರದ ‘ಕೈ’ ಸಭೆಯಲ್ಲಿ ಹೇಳಿದ್ದೆ. ಸಿ.ಟಿ.ರವಿ ಕೇಳಿರುವುದಕ್ಕೆ ನಾನ್ಯಾಕೆ ಉತ್ತರ ನೀಡಬೇಕು. ಸಿ.ಟಿ.ರವಿ ಏನಾದ್ರೂ ಪ್ರಶ್ನಾತೀತ ನಾಯಕನಾ? ಎಂದು ಖಾರವಾಗಿ ತಿರುಗೇಟು ಕೊಟ್ಟರು.

‘ನನ್ನ ಪ್ರಕಾರ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಪಕ್ಷ ಬಿಡಲ್ಲ’ ನನ್ನ ಪ್ರಕಾರ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಪಕ್ಷ ಬಿಡಲ್ಲ. ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಮತ್ತು ನಾನು ಒಳ್ಳೆಯ ಸ್ನೇಹಿತರು. ಹೀಗಾಗಿ ಸಿ.ಎಂ. ಇಬ್ರಾಹಿಂ ನನ್ನ ಬಗ್ಗೆ ಮಾತನಾಡಿದ್ದಾರೆ. ನಾಯಕರಾದವರು ರಾಜ್ಯ ಪ್ರವಾಸ ಮಾಡಬೇಕು. ಅದಕ್ಕೆ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಪ್ರವಾಸ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮುಸ್ಲಿಮರಿಗೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನ ನೀಡದ ವಿಚಾರವಾಗಿ ಸಂದರ್ಭ ಬಂದಾಗ ಮುಸ್ಲಿಮರನ್ನ ಅಧ್ಯಕ್ಷರಾಗಿ ಮಾಡೋಣ. ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್ ಇರಲಿಲ್ವೇ? ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು.

‘ರಾಜ್ಯ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡುವ ಅಭ್ಯಾಸ ಇಲ್ಲ’ ಖಾಸಗಿ ಶಾಲೆ ವಿಚಾರ ಸೇರಿದಂತೆ ರಾಜ್ಯ ಸರ್ಕಾರಕ್ಕೆ 3 ಪತ್ರ ಬರೆದಿದ್ದೇನೆ. ಆದರೆ ರಾಜ್ಯ ಸರ್ಕಾರಕ್ಕೆ ಉತ್ತರ ಬರೆಯುವ ಅಭ್ಯಾಸವಿಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡುವ ಅಭ್ಯಾಸ ಇಲ್ಲ. ಕೆಟ್ಟ ಕೆಲಸಗಳನ್ನು ಮಾತ್ರ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯ ಸರ್ಕಾರ ಖಾಸಗಿ ಶಾಲೆಗಳ‌ ಜೊತೆ ಶಾಮೀಲಾಗಿದೆ. ಪ್ರಸಕ್ತ ವರ್ಷ ಎಲ್ಲರನ್ನೂ ಪಾಸ್ ಮಾಡಲು ಸಲಹೆ ನೀಡಿದ್ದೆ. ಸರ್ಕಾರ ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಟೊಯೋಟಾ ಕಂಪನಿ ಕಾರ್ಮಿಕರ ಧರಣಿ ನಡೆಯುತ್ತಿದೆ. ಆದ್ರೆ ಸರ್ಕಾರ ಜವಾಬ್ದಾರಿ ಮರೆತುಬಿಟ್ಟಿದೆ, ಸತ್ತುಹೋಗಿದೆ. ಕಂಪನಿ ಆಡಳಿತ ಮಂಡಳಿ ಏನು ಬೇಕಾದರೂ ಮಾಡಲಿ. ಅದನ್ನ ನೋಡಿಕೊಂಡು ಕುಳಿತುಕೊಳ್ಳಲು ಸರ್ಕಾರ ಇಲ್ಲ ಎಂದು ಹೇಳಿದರು.

ಮನ್​ಕಿ ಬಾತ್ ವಿರೋಧಿಸಿ ಚಪ್ಪಾಳೆ ತಟ್ಟಿ: ಭಾರತೀಯ ಕಿಸಾನ್ ಯೂನಿಯನ್ ಕರೆ

Published On - 12:59 pm, Mon, 21 December 20