ಓವರ್ ಟೆಕ್ ಮಾಡುವಾಗ ಇನ್ನೊವಾ ಕಾರಿಗೆ KSRTC ಬಸ್ ಡಿಕ್ಕಿ

  • TV9 Web Team
  • Published On - 12:53 PM, 14 Oct 2020
ಓವರ್ ಟೆಕ್ ಮಾಡುವಾಗ ಇನ್ನೊವಾ ಕಾರಿಗೆ KSRTC ಬಸ್ ಡಿಕ್ಕಿ

ಹಾಸನ: ಮುಂದೊಂದು ಚಲಿಸುತ್ತಿರುವ ಸಾರಿಗೆ ಬಸ್ ಅನ್ನು ಓವರ್ ಟೆಕ್ ಮಾಡುವಾಗ.. ಎದುರಿಗೆ ಬಂದ ಇನ್ನೊವಾ ಕಾರಿಗೆ KSRTC ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಮತ್ತು ತುಮಕೂರಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಇನ್ನೊವಾ ಕಾರು ನಡುವೆ ಈ ಡಿಕ್ಕಿ ಸಂಭವಿಸಿದೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.