ಸೋಂಕಿತರ ಅಂತ್ಯಕ್ರಿಯೆ ವದಂತಿ ತಂದ ಆತಂಕ, ಗೌರಿಬಿದನೂರು ತಾಲೂಕಿನ ಗ್ರಾಮಸ್ಥರ ಆಕ್ರೋಶ
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಅಲ್ಲಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಹೊಸದಾಗಿ ಕೊರೊನಾ ಸೋಂಕಿತರಿಗಾಗಿಯೇ ಸ್ಮಶಾನಗಳಿಗೆ ಪ್ರತೇಕ ಜಾಗೆ ಗುರುತಿಸಿದೆ. ಆದ್ರೆ ಅಲ್ಲೂ ಈಗ ಚಿಕ್ಕಬಳ್ಳಾಪುರದಲ್ಲಿ ವಿರೋಧ ವ್ಯಕ್ತವಾಗಿದೆ. ಹೌದು ರಾಜ್ಯ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರಿಗಾಗಿಯೇ ಆಯಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರತ್ಯೇಕ ಸ್ಮಶಾನಗಳನ್ನ ಗುರುತಿಸಿದೆ. ಇನ್ನು ಮೇಲೆ ಅಲ್ಲಿಯೇ ಸೋಂಕಿತರ ಅಂತ್ಯಕ್ರಿಯೆ ಆಗಬೇಕು. ಆದ್ರೆ ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಮತ್ತು ಸುತ್ತಲಿನ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ಅದ್ರಲ್ಲೂ ಗೌರಿಬಿದನೂರಿನಲ್ಲಿ ಇಬ್ಬರು […]
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಅಲ್ಲಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಹೊಸದಾಗಿ ಕೊರೊನಾ ಸೋಂಕಿತರಿಗಾಗಿಯೇ ಸ್ಮಶಾನಗಳಿಗೆ ಪ್ರತೇಕ ಜಾಗೆ ಗುರುತಿಸಿದೆ. ಆದ್ರೆ ಅಲ್ಲೂ ಈಗ ಚಿಕ್ಕಬಳ್ಳಾಪುರದಲ್ಲಿ ವಿರೋಧ ವ್ಯಕ್ತವಾಗಿದೆ.
ಹೌದು ರಾಜ್ಯ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರಿಗಾಗಿಯೇ ಆಯಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರತ್ಯೇಕ ಸ್ಮಶಾನಗಳನ್ನ ಗುರುತಿಸಿದೆ. ಇನ್ನು ಮೇಲೆ ಅಲ್ಲಿಯೇ ಸೋಂಕಿತರ ಅಂತ್ಯಕ್ರಿಯೆ ಆಗಬೇಕು. ಆದ್ರೆ ಇದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಮತ್ತು ಸುತ್ತಲಿನ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ಅದ್ರಲ್ಲೂ ಗೌರಿಬಿದನೂರಿನಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಇವರ ಅಂತ್ಯಕ್ರಿಯೆಯನ್ನು ರಾತ್ರಿ ನಾಮಗೊಂಡ್ಲು ಗ್ರಾಮದ ಜಾಗದಲ್ಲಿಯೇ ಮಾಡುತ್ತಾರೆ ಎಂದು ವದಂತಿ ಹಬ್ಬಿದೆ. ಹೀಗಾಗಿ ಭಯ ಮತ್ತು ಆಕ್ರೋಶಕೊಂಡಿರುವ ಸುತ್ತಮಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 7:52 pm, Sun, 5 July 20