‘ಮಾದಕ’ ನಟಿ ಸಂಜನಾ ಜೈಲಿನಲ್ಲಿ ಬರ್ತ್​ಡೇ ಅಚರಿಸಿಕೊಳ್ಳುತ್ತಿಲ್ಲ, ಯಾಕೆ ಗೊತ್ತಾ?

|

Updated on: Oct 09, 2020 | 5:33 PM

ಆನೇಕಲ್: ಸ್ಯಾಂಡಲ್ವುಡ್ ಡ್ರಗ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾದಕ ನಟಿ ಸಂಜನಾ ಗಲ್ರಾನಿ ನಾಳೆ ಜೈಲಿನಲ್ಲಿಯೇ ಹುಟ್ಟುಹಬ್ಬ ಅಚರಿಸಿಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಆ ಅವಕಾಶ ಅವರ ಕೈತಪ್ಪಿದೆ. ಸಂಜನಾ ಗಲ್ರಾನಿ ಬರ್ತ್​ಡೇಗೆ ಜೈಲಿನಲ್ಲಿ ಅವಕಾಶ ನಿರಾಕರಿಸಲಾಗಿದೆ. ಸಂಜನಾ ಮತ್ತು ರಾಗಿಣಿ ದ್ವಿವೇದಿ ಸದ್ಯ ಜೈಲಿನ ಒಂದೇ ಕೊಠಡಿಯಲ್ಲಿದ್ದಾರೆ. ಅಕ್ಟೋಬರ್ 10ರಂದು ಬರ್ತ್​ಡೇ ಆಚರಣೆಗೆ ಮನವಿಯನ್ನೂ ಸಲ್ಲಿಸಿದ್ದರು. ಇನ್ನು ಅವರ ಪೋಷಕರು ಮನೆಯಿಂದ ಮೂರು ಜೊತೆ ಹೊಸ ಬಟ್ಟೆ ಕೊಟ್ಟು ಹೋಗಿದ್ದರು. […]

‘ಮಾದಕ’ ನಟಿ ಸಂಜನಾ ಜೈಲಿನಲ್ಲಿ ಬರ್ತ್​ಡೇ ಅಚರಿಸಿಕೊಳ್ಳುತ್ತಿಲ್ಲ, ಯಾಕೆ ಗೊತ್ತಾ?
Follow us on

ಆನೇಕಲ್: ಸ್ಯಾಂಡಲ್ವುಡ್ ಡ್ರಗ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾದಕ ನಟಿ ಸಂಜನಾ ಗಲ್ರಾನಿ ನಾಳೆ ಜೈಲಿನಲ್ಲಿಯೇ ಹುಟ್ಟುಹಬ್ಬ ಅಚರಿಸಿಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಆ ಅವಕಾಶ ಅವರ ಕೈತಪ್ಪಿದೆ.

ಸಂಜನಾ ಗಲ್ರಾನಿ ಬರ್ತ್​ಡೇಗೆ ಜೈಲಿನಲ್ಲಿ ಅವಕಾಶ ನಿರಾಕರಿಸಲಾಗಿದೆ. ಸಂಜನಾ ಮತ್ತು ರಾಗಿಣಿ ದ್ವಿವೇದಿ ಸದ್ಯ ಜೈಲಿನ ಒಂದೇ ಕೊಠಡಿಯಲ್ಲಿದ್ದಾರೆ. ಅಕ್ಟೋಬರ್ 10ರಂದು ಬರ್ತ್​ಡೇ ಆಚರಣೆಗೆ ಮನವಿಯನ್ನೂ ಸಲ್ಲಿಸಿದ್ದರು. ಇನ್ನು ಅವರ ಪೋಷಕರು ಮನೆಯಿಂದ ಮೂರು ಜೊತೆ ಹೊಸ ಬಟ್ಟೆ ಕೊಟ್ಟು ಹೋಗಿದ್ದರು. ಹೀಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲು ರೆಡಿಯಾಗಿದ್ದ ನಟಿಗೆ ಇದೀಗ ನಿರಾಸೆಯಾಗಿದೆ.

ಹುಟ್ಟುಹಬ್ಬ ಆಚರಣೆಗೆ ಅವಕಾಶ ಕಲ್ಪಿಸುವುದಿಲ್ಲ
ಜೈಲಿನಲ್ಲಿ ವಿಶೇಷ ಆಚರಣೆಗಳಿಗೆ ಅವಕಾಶ ಕೊಡುವುದಿಲ್ಲ. ಹುಟ್ಟುಹಬ್ಬಕ್ಕೆ ಪರಸ್ಪರ ವಿಶ್ ಮಾಡಿಕೊಳ್ಳಲು ಮಾತ್ರ ಅವಕಾಶವಿರುತ್ತದೆ ಎಂದು ಟಿವಿ9ಗೆ ಜೈಲಿನ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

Published On - 12:48 pm, Fri, 9 October 20