ಒಳ್ಳೆಯದಾಗುತ್ತೇ ಅಂತ ಮಕ್ಕಳನ್ನ ಮಣ್ಣಲ್ಲಿ ಹೂತ ಪೋಷಕರು

|

Updated on: Dec 26, 2019 | 11:20 AM

ಕಲಬುರಗಿ: ಇಂದು ಜಗತ್ತಿನಾದ್ಯಂತ ಕಂಕಣ ಸೂರ್ಯ ಗ್ರಹಣದ ವಿಸ್ಮಯ ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಗ್ರಹಣವಿದೆ ಎಂದರೆ ಜನರು ಅನೇಕ ರೀತಿಯ ಮೂಢ ನಂಬಿಕೆಗಳನ್ನು ಪಾಲಿಸೋಕೆ ನಿಲ್ತಾರೆ. ಅದೇ ರೀತಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನ ರುಂಡ ಬಿಟ್ಟು ದೇಹವನ್ನು ಮಣ್ಣಲ್ಲಿ ಮುಚ್ಚಿರುವ ಘಟನೆ ಕಲಬುರಗಿ ತಾಲೂಕಿನ ತಾಜ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಗ್ರಹಣದ ಸಂದರ್ಭದಲ್ಲಿ ಮಕ್ಕಳನ್ನು ಕುತ್ತಿಗೆವರಗೆ ಮಣ್ಣಿನಲ್ಲಿ ದೇಹ ಹೂತಿಹಾಕಿದ್ದಾರೆ. ಅಲ್ಲದೆ ಈ ರೀತಿ ಮಾಡುವುದರಿಂದ ಅವರ ದೋಷಗಳು ನಿವಾರಣೆಯಾಗುತ್ತವೆ, ಅವರಿಗೆ ಒಳ್ಳೆಯದಾಗುತ್ತೆಂಬ […]

ಒಳ್ಳೆಯದಾಗುತ್ತೇ ಅಂತ ಮಕ್ಕಳನ್ನ ಮಣ್ಣಲ್ಲಿ ಹೂತ ಪೋಷಕರು
Follow us on

ಕಲಬುರಗಿ: ಇಂದು ಜಗತ್ತಿನಾದ್ಯಂತ ಕಂಕಣ ಸೂರ್ಯ ಗ್ರಹಣದ ವಿಸ್ಮಯ ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಗ್ರಹಣವಿದೆ ಎಂದರೆ ಜನರು ಅನೇಕ ರೀತಿಯ ಮೂಢ ನಂಬಿಕೆಗಳನ್ನು ಪಾಲಿಸೋಕೆ ನಿಲ್ತಾರೆ. ಅದೇ ರೀತಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನ ರುಂಡ ಬಿಟ್ಟು ದೇಹವನ್ನು ಮಣ್ಣಲ್ಲಿ ಮುಚ್ಚಿರುವ ಘಟನೆ ಕಲಬುರಗಿ ತಾಲೂಕಿನ ತಾಜ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.

ಗ್ರಹಣದ ಸಂದರ್ಭದಲ್ಲಿ ಮಕ್ಕಳನ್ನು ಕುತ್ತಿಗೆವರಗೆ ಮಣ್ಣಿನಲ್ಲಿ ದೇಹ ಹೂತಿಹಾಕಿದ್ದಾರೆ. ಅಲ್ಲದೆ ಈ ರೀತಿ ಮಾಡುವುದರಿಂದ ಅವರ ದೋಷಗಳು ನಿವಾರಣೆಯಾಗುತ್ತವೆ, ಅವರಿಗೆ ಒಳ್ಳೆಯದಾಗುತ್ತೆಂಬ ನಂಬಿಕೆ ಪೋಷಕರಲ್ಲಿದೆ. ಜೊತೆಗೆ ಅಂಗವಿಕಲತೆ ಇರುವ ಮಕ್ಕಳನ್ನ ಈ ರೀತಿ ಗ್ರಹಣ ಬಿಡುವ ಮರೆಗೆ ಮಣ್ಣಿನಲ್ಲಿ ಹೂತ್ತಿಟ್ಟರೆ ಅವರ ಅಂಗಗಳಿಗೆ ಶಕ್ತಿ ಬರುತ್ತದೆ. ಅಂಗವಿಕಲತೆ ದೂರವಾಗುತ್ತೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

 

Published On - 10:05 am, Thu, 26 December 19