ಮಂಗಳೂರು ಫೈರಿಂಗ್: ಮೃತರ ಕುಟುಂಬಕ್ಕೆ ಪರಿಹಾರ ಇಲ್ಲ, ಖಾದರ್ ಕಿಡಿಕಿಡಿ
ಮಂಗಳೂರು: ಮಂಗಳೂರು ಪೊಲೀಸರ ಫೈರಿಂಗ್ನಲ್ಲಿ ಇಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗಿದ್ದ ಪರಿಹಾರವನ್ನ ವಾಪಸ್ ಪಡೆಯಲಾಗಿದೆ. ಅಷ್ಟೇ ಅಲ್ಲ, ಹಿಂಸಾಚಾರದಲ್ಲಿ ಅವರಿಬ್ಬರೂ ಭಾಗಿ ಎಂದು ರುಜುವಾತಾದರೆ ಅವರಿಗೆ ಪರಿಹಾರವನ್ನೇ ನೀಡೋದಿಲ್ಲ ಎಂದೂ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ ಬೆಳಗ್ಗೆಯಷ್ಟೇ ಮಂಗಳೂರಿನಲ್ಲಿ ಹೇಳಿದ್ದಾರೆ. ಈ ಕುರಿತು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಕೊಡಲ್ಲ ಅಂತಾ ಸಿಎಂ ಈಗ ಹೇಳ್ತಿದ್ದಾರೆ. ಫೈರಿಂಗ್ನಲ್ಲಿ ಮೃತಪಟ್ಟವರ ವಿರುದ್ಧ FIR […]
ಮಂಗಳೂರು: ಮಂಗಳೂರು ಪೊಲೀಸರ ಫೈರಿಂಗ್ನಲ್ಲಿ ಇಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗಿದ್ದ ಪರಿಹಾರವನ್ನ ವಾಪಸ್ ಪಡೆಯಲಾಗಿದೆ. ಅಷ್ಟೇ ಅಲ್ಲ, ಹಿಂಸಾಚಾರದಲ್ಲಿ ಅವರಿಬ್ಬರೂ ಭಾಗಿ ಎಂದು ರುಜುವಾತಾದರೆ ಅವರಿಗೆ ಪರಿಹಾರವನ್ನೇ ನೀಡೋದಿಲ್ಲ ಎಂದೂ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ ಬೆಳಗ್ಗೆಯಷ್ಟೇ ಮಂಗಳೂರಿನಲ್ಲಿ ಹೇಳಿದ್ದಾರೆ.
ಈ ಕುರಿತು ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಕೊಡಲ್ಲ ಅಂತಾ ಸಿಎಂ ಈಗ ಹೇಳ್ತಿದ್ದಾರೆ. ಫೈರಿಂಗ್ನಲ್ಲಿ ಮೃತಪಟ್ಟವರ ವಿರುದ್ಧ FIR ಆಗಿದ್ದೇ ತಪ್ಪು. ಮುಲ್ಕಿ ಠಾಣೆಗೆ ಬೆಂಕಿ ಹಚ್ಚಲು ಬಂದಾಗ ಗೋಲಿಬಾರ್ ಆಗಿತ್ತು. ಅಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಲಿಲ್ವಾ? ಈ ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪ ಮಾತು ನಡೆಯಲ್ಲ. ತಮ್ಮ ಮಾತನ್ನೇ ಈಡೇರಿಸದ ಸ್ಥಿತಿ ಸಿಎಂ BSYಗೆ ಬಂದಿದೆ. ಇದು ಮಾನವೀಯತೆ ಇಲ್ಲದ ಸರ್ಕಾರ, ಇದು ಸರಿಯಲ್ಲ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಲಿಬಾರ್ನಲ್ಲಿ ಮೃತರಪಟ್ಟವರ ಮೇಲಿನ ಆರೋಪ ಸಾಬೀತಾಗಬೇಕಲ್ಲವೇ ಎಂದು ಸರ್ಕಾರಕ್ಕೆ ಗಂಭೀರ ಪ್ರಶ್ನೆ ಕೇಳಿರುವ ಮಾಜಿ ಸಚಿವ ಖಾದರ್ ಪರಿಹಾರ ಘೋಷಿಸುವಾಗ ಬಿಎಸ್ವೈಗೆ ಗೊತ್ತಾಗಲಿಲ್ವಾ? B.S.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾ? ಅಥವಾ ಬಿಜೆಪಿ ಕಾರ್ಯಕರ್ತರ ಮುಖ್ಯಮಂತ್ರಿಯಾ? ಎಂದು ಖಾದರ್ ಖಾರವಾಗಿ ಪ್ರಶ್ನಿಸಿದ್ದಾರೆ.