ಬೆಳಗಾವಿ: ಕಳ್ಳತನ ಪಾಪ, ಕಳ್ಳತನ ಮಹಾಪರಾಧ ಎಂದು ಜೀವನದ ಪಾಠ ಹೇಳಿಕೊಡುವ ಶಾಲೆಯಲ್ಲಿಯೇ ಕಳ್ಳರು ಭಾರೀ ಕಳ್ಳತನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ರಾತ್ರಿ ಕೊಠಡಿಯೊಂದರ ಬೀಗ ಮುರಿದು ಸಾಮಗ್ರಿ ಕಳವು ಮಾಡಲಾಗಿದೆ.
ಮೂರು ಕಂಪ್ಯೂಟರ್, 1 ಪ್ರೊಜೆಕ್ಟರ್, 1 ಲ್ಯಾಪ್‌ಟಾಪ್ ಕದ್ದಿದ್ದಾರೆ. ಇನ್ನು ಅಡುಗೆ ಕೋಣೆಯ ಕೀಲಿ ಮುರಿದು ಬಿಸಿಯೂಟ ಆಹಾರ ಸಾಮಗ್ರಿ ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲ, ಆಫೀಸ್ ರೂಂ ಕೀಲಿ ಮುರಿದು ದಾಖಲಾತಿಗಳನ್ನ ಹರಿದು ವಿಕೃತಿ ಮೆರೆದಿದ್ದಾರೆ ಕಳ್ಳರು. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.