ನಿಷೇಧಾಜ್ಞೆ ನಡುವೆ ರಿಗಾನ್ ರೆಸ್ಟೋರೆಂಟ್​​ನಲ್ಲಿ ಪಾರ್ಟಿ ಆಯೋಜನೆ; ಕ್ರಮ ಕೈಗೊಳ್ಳದ ಪೊಲೀಸರು

|

Updated on: Dec 31, 2020 | 9:23 PM

ದೇವನಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿರೂ ರಿಗಾನ್ ರೆಸ್ಟೋರೆಂಟ್​ನಲ್ಲಿ ಮಾಲೀಕರು ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆ ಮಾಡಿದ್ದಾರೆ. 10 ಸಾವಿರ ರೂಪಾಯಿ ಬುಕ್ಕಿಂಗ್​ಗೆ ಮ್ಯೂಸಿಕ್ ಜೊತೆಗೆ ಮದ್ಯ ಮತ್ತು ಊಟದ ಪಾರ್ಟಿ ನೀಡಲಾಗುತ್ತಿದೆ.

ನಿಷೇಧಾಜ್ಞೆ ನಡುವೆ ರಿಗಾನ್ ರೆಸ್ಟೋರೆಂಟ್​​ನಲ್ಲಿ ಪಾರ್ಟಿ ಆಯೋಜನೆ; ಕ್ರಮ ಕೈಗೊಳ್ಳದ ಪೊಲೀಸರು
ರಿಗಾನ್ ರೆಸ್ಟೋರೆಂಟ್
Follow us on

ದೇವನಹಳ್ಳಿ: ನಿಷೇದದ ನಡುವೆ‌ ಲೌಡ್ ಸೌಂಡ್​ನಲ್ಲಿ ಮ್ಯೂಸಿಕ್ ಪಾರ್ಟಿಯನ್ನ ದೇವನಹಳ್ಳಿ ಹೊರವಲಯದ ಖಾಸಗಿ ರೆಸ್ಟೋರೆಂಟ್​ನಲ್ಲಿ ಆಯೋಜನೆ ಮಾಡಲಾಗಿದೆ.

ದೇವನಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲಿರುವ ರಿಗಾನ್ ರೆಸ್ಟೋರೆಂಟ್​ನ ಮಾಲೀಕರು ಹೊಸ ವರ್ಷಾಚರಣೆಗಾಗಿ ಪಾರ್ಟಿ ಆಯೋಜನೆ ಮಾಡಿದ್ದಾರೆ. 10 ಸಾವಿರ ರೂಪಾಯಿ ಬುಕ್ಕಿಂಗ್​ಗೆ ಮ್ಯೂಸಿಕ್ ಜೊತೆಗೆ ಮದ್ಯ ಮತ್ತು ಊಟದ ಪಾರ್ಟಿ ನೀಡಲಾಗುತ್ತಿದೆ. ರೆಸ್ಟೋರೆಂಟ್ ಪಕ್ಕದ ಖಾಲಿ‌ ಜಾಗದಲ್ಲಿ ಈ ಪಾರ್ಟಿ ಆಯೋಜನೆ ಮಾಡಿದ್ದಾರೆ. ದೇವನಹಳ್ಳಿ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ನ್ಯೂ ಇಯರ್​ ಸೆಲೆಬ್ರೆಷನ್​ಗೆ ಬ್ರೇಕ್.. ಗೋವಾದತ್ತ ಮುಖಮಾಡಿದ ಪಾರ್ಟಿ ಪ್ರಿಯರು!

Published On - 9:18 pm, Thu, 31 December 20