ಅಂಕೋಲಾದಲ್ಲಿ ಆಂಬ್ಯುಲೆನ್ಸ್ ಕೊರತೆ: ವೃದ್ಧ ರೋಗಿಯನ್ನ 5 ಕಿ.ಮೀ. ಜೋಲಿಯಲ್ಲೇ ಹೊತ್ತೊಯ್ದ ಕುಟುಂಬಸ್ಥರು

| Updated By: Digi Tech Desk

Updated on: Mar 05, 2021 | 10:12 AM

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಐದು ಕಿಲೋಮೀಟರ್ ದೂರ ಜೋಲಿಯಲ್ಲಿ ರೋಗಿಯೋರ್ವನನ್ನ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಲಬೇಣ ಗ್ರಾಮದಲ್ಲಿ ನಡೆದಿದೆ

ಅಂಕೋಲಾದಲ್ಲಿ ಆಂಬ್ಯುಲೆನ್ಸ್ ಕೊರತೆ: ವೃದ್ಧ ರೋಗಿಯನ್ನ 5 ಕಿ.ಮೀ. ಜೋಲಿಯಲ್ಲೇ ಹೊತ್ತೊಯ್ದ ಕುಟುಂಬಸ್ಥರು
ರೋಗಿಯೋರ್ವನನ್ನ 5 ಕಿ.ಮೀ ಜೋಲಿಯಲ್ಲೇ ಹೊತ್ತೊಯ್ದು ಕುಟುಂಬಸ್ಥರು
Follow us on

ಉತ್ತರ ಕನ್ನಡ: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಐದು ಕಿಲೋಮೀಟರ್ ದೂರ ಜೋಲಿಯಲ್ಲಿ ರೋಗಿಯೋರ್ವನನ್ನ ಹೊತ್ತೊಯ್ದು ಆಸ್ಪತ್ರೆ ಸೇರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವರೀಲಬೇಣ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನೂರಾ ಪೊಕ್ಕ ಗೌಡ(70) ಎಂಬುವವರು ನಿನ್ನೆ ಪಾರ್ಶವಾಯುಗೆ ಒಳಗಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಿತ್ತು. ಆದರೇ ವರೀಲಬೇಣಾದಲ್ಲಿ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಐದು ಕಿಲೋಮೀಟರ್ ದೂರ ಇರುವ ಅಂಕೋಲ ನಗರಕ್ಕೆ ಕುರ್ಚಿಯಲ್ಲಿ ಕೂರಿಸಿ ಕಾಡಿನ ದಟ್ಟ ಹಾದಿಯಲ್ಲಿ ಕುಟುಂಬದವರು ಜೋಲಿ ಮಾಡಿ ಕರೆತಂದಿದ್ದಾರೆ. ಇನ್ನು ಅಂಕೋಲದಲ್ಲಿ ಅಂಬುಲೆನ್ಸ್ ಸಿಗದ ಕಾರಣ ಖಾಸಗಿ ವಾಹನ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಆಂಬ್ಯುಲೆನ್ಸ್ಗಳು ಬರಲು ನಿರಾಕರಿಸುತ್ತಾರೆ. ಇದಲ್ಲದೇ ಜಿಲ್ಲೆಯಲ್ಲಿ ಇರುವ 25 ಆಂಬ್ಯುಲೆನ್ಸ್​ಗಳಲ್ಲಿ ಎಂಟು ಮಾತ್ರ ಕಾರ್ಯನಿರ್ವಹಿಸುತಿದ್ದು ಇದರಿಂದಾಗಿ ಹಳ್ಳಿಯ ರೋಗಿಗಳು ಪರದಾಡುವಂತಾಗಿದೆ ಅಂತಾ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಕಾಲಕ್ಕೆ ಬಾರದ ಆಂಬುಲೆನ್ಸ್: ಟ್ರ್ಯಾಕ್ಟರ್​ನಲ್ಲೇ ಆಕ್ಸಿಡೆಂಟ್ ಗಾಯಾಳುಗಳು ಆಸ್ಪತ್ರೆಗೆ ಶಿಫ್ಟ್

Published On - 9:54 am, Fri, 5 March 21