ರಾಹುಲ್ ನಾಯಕತ್ವದ ಬಗ್ಗೆ ಶರದ್ ಪವಾರ್ ಆಕ್ಷೇಪ: ಟೀಕೆ ಬೇಡ ಎಂದ ಯಶೋಮತಿ ಠಾಕುರ್

ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಮಹಾ ವಿಕಾಸ್ ಅಘಾಡಿ (MVA) ನಾಯಕರ ಬಳಿ ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ಕೇಳಿಕೊಂಡಿದ್ದಾರೆ.

ರಾಹುಲ್ ನಾಯಕತ್ವದ ಬಗ್ಗೆ ಶರದ್ ಪವಾರ್ ಆಕ್ಷೇಪ: ಟೀಕೆ ಬೇಡ ಎಂದ ಯಶೋಮತಿ ಠಾಕುರ್
ಶರದ್ ಪವಾರ್, ರಾಹುಲ್ ಗಾಂಧಿ ಮತ್ತು ಯಶೋಮತಿ ಠಾಕುರ್
Edited By:

Updated on: Apr 07, 2022 | 5:37 PM

ದೆಹಲಿ: ಮಹಾರಾಷ್ಟ್ರ ಕಾಂಗ್ರೆಸ್ ನಾಯಕಿ ಹಾಗೂ ಮಹಿಳಾ ಮತ್ತು ಕಲ್ಯಾಣ ಸಚಿವೆ ಯಶೋಮತಿ ಠಾಕುರ್, ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಆಕ್ಷೇಪಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಮಹಾ ವಿಕಾಸ್ ಅಘಾಡಿ (MVA) ನಾಯಕರ ಬಳಿ ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಸುಸ್ಥಿರ ಆಡಳಿತ ಬೇಕಾದರೆ ಈ ರೀತಿ ನಡೆದುಕೊಳ್ಳಬಾರದು ಎಂದು ಪಕ್ಷದ ಇತರ ನಾಯಕರನ್ನು ಎಚ್ಚರಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕೆಂದು ಹೇಳಿದ್ದಾರೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (MPCC)ಯ ಕಾರ್ಯನಿರ್ವಾಹಕ ಅಧ್ಯಕ್ಷೆಯಾಗಿ ಈ ಮಾತನ್ನು ಹೇಳಿರುವುದಾಗಿ ತಿಳಿಸಿದ್ದಾರೆ.

ಮಹಾ ವಿಕಾಸ್ ಅಘಾಡಿಯ ರಚನೆಯು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಾವು ನಂಬಿಕೆ ಇಟ್ಟಿದ್ದರಿಂದ ಸಾಧ್ಯವಾಗಿದೆ. ನಮ್ಮ ನಾಯಕತ್ವ ಸ್ಥಿರವಾಗಿದೆ ಎಂದೂ ಅವರು ಹೇಳಿದ್ದಾರೆ.

ಈ ಹಿಂದೆ, ಕಾಂಗ್ರೆಸ್​ನಲ್ಲಿ ರಾಹುಲ್ ಗಾಂಧಿ ನಾಯಕತ್ವವನ್ನು ಉದ್ದೇಶಿಸಿ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕೆಲವು ಸಮಸ್ಯೆಗಳಿವೆ. ಅವರು ನಾಯಕರಾಗಿ ಸ್ಥಿರತೆ ಹೊಂದಿಲ್ಲ ಎಂದು ಹೇಳಿದ್ದರು. ನಂತರದಲ್ಲಿ, ಶರದ್ ಪವಾರ್ ಹೇಳಿಕೆಯನ್ನು ರಾಹುಲ್ ಗಾಂಧಿಗೆ ನೀಡಿದ ಸಲಹೆ ಎಂದು ಎನ್​ಸಿಪಿ ಹೇಳಿಕೊಂಡಿತ್ತು.

ಈ ಘಟನೆಯ ಬೆನ್ನಲ್ಲೇ ಯಶೋಮತಿ ಠಾಕೂರ್ ಅವರಿಂದ MVA ನಾಯಕರಿಗೆ ಮೇಲಿನ ಸೂಚನೆ ಸಿಕ್ಕಿದೆ.

Published On - 4:33 pm, Sun, 6 December 20