ತಿನ್ನಲು ಊಟ ಕೊಡಿ ಎಂದು ಗೋಗರೆದ ವೃದ್ಧ.. ಆಗಿದ್ದಾದರೂ ಏನು?

ಬೆಳಗಾವಿ: ದಿನಸಿ ವಸ್ತು ಸೇರಿದಂತೆ ಕುಡಿಯಲು ನೀರು ಸಹ ಪೂರೈಸುತ್ತಿಲ್ಲವೆಂದು ಸೀಲ್‌ಡೌನ್ ಪ್ರದೇಶದಲ್ಲಿರುವ ಜನ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಕಂಡು ಬಂದಿದೆ. ಕಿತ್ತೂರಿನ ರಾವಳ್ ಓಣಿಯ ಮಹಿಳೆಯೋರ್ವಳಿಗೆ ಕೊರೊನಾ ದೃಢವಾಗಿತ್ತು, ಹಾಗಾಗಿ ಕಳೆದ‌ ಸೋಮವಾರದಿಂದ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಸೀಲ್‌ಡೌನ್ ಪ್ರದೇಶದಲ್ಲಿರುವ ಜನರಿಗೆ ಯಾವುದೇ ರೀತಿಯ ಅಗತ್ಯ ವಸ್ತುಗಳನ್ನು ಪೂರೈಸಿಲ್ಲ. ಇದರಿಂದ ದಿನಸಿ ವಸ್ತು ಸೇರಿದಂತೆ ಕುಡಿಯಲು ನೀರು ಸಹ ಸಿಗದ ಕಾರಣ ಅಗತ್ಯ ವಸ್ತುಗಳ ಪೂರೈಸಿ […]

ತಿನ್ನಲು ಊಟ ಕೊಡಿ ಎಂದು ಗೋಗರೆದ ವೃದ್ಧ.. ಆಗಿದ್ದಾದರೂ ಏನು?
Edited By:

Updated on: Jul 22, 2020 | 4:01 PM

ಬೆಳಗಾವಿ: ದಿನಸಿ ವಸ್ತು ಸೇರಿದಂತೆ ಕುಡಿಯಲು ನೀರು ಸಹ ಪೂರೈಸುತ್ತಿಲ್ಲವೆಂದು ಸೀಲ್‌ಡೌನ್ ಪ್ರದೇಶದಲ್ಲಿರುವ ಜನ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಕಂಡು ಬಂದಿದೆ.

ಕಿತ್ತೂರಿನ ರಾವಳ್ ಓಣಿಯ ಮಹಿಳೆಯೋರ್ವಳಿಗೆ ಕೊರೊನಾ ದೃಢವಾಗಿತ್ತು, ಹಾಗಾಗಿ ಕಳೆದ‌ ಸೋಮವಾರದಿಂದ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಸೀಲ್‌ಡೌನ್ ಪ್ರದೇಶದಲ್ಲಿರುವ ಜನರಿಗೆ ಯಾವುದೇ ರೀತಿಯ ಅಗತ್ಯ ವಸ್ತುಗಳನ್ನು ಪೂರೈಸಿಲ್ಲ.

ಇದರಿಂದ ದಿನಸಿ ವಸ್ತು ಸೇರಿದಂತೆ ಕುಡಿಯಲು ನೀರು ಸಹ ಸಿಗದ ಕಾರಣ ಅಗತ್ಯ ವಸ್ತುಗಳ ಪೂರೈಸಿ ಎಂದು ಸ್ಥಳೀಯರು ಬ್ಯಾರಿಕೇಡ್ ಬಳಿ ನಿಂತು ಆಡಳಿತ ಮಂಡಳಿಯನ್ನು ಬೇಡಿಕೊಳ್ಳುತ್ತಿದ್ದಾರೆ.

ತಿನ್ನಲು ಊಟದ ವ್ಯವಸ್ಥೆ ಮಾಡಿ ಸ್ವಾಮಿ ಅಂತಾ ವೃದ್ಧರೊಬ್ಬರು ಗೋಗರೆಯುತ್ತಿದ್ದ ಘಟನೆ ಎಲ್ಲರಲ್ಲು ಕಣ್ಣೀರು ತರಿಸುವಂತಿತ್ತು. ಅಗತ್ಯ ವಸ್ತುಗಳನ್ನು ಪೂರೈಸದ ಕಿತ್ತೂರು ಪಟ್ಟಣ ಪಂಚಾಯತ್ ಹಾಗೂ ತಾಲೂಕು ಆಡಳಿತ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Published On - 4:01 pm, Tue, 21 July 20