ಮೂಲಸೌಕರ್ಯಕ್ಕೆ ಆಗ್ರಹ; ಎತ್ತಿನಗಾಡಿ ಪ್ರತಿಭಟನೆ

ಮೂಲಭೂತ ಸೌಕರ್ಯಗಳಿಲ್ಲದೆ ಪರದಾಟ ಪಡುತ್ತಿರುವ ಜನರು ನಗರಸಭೆ ಅಧಿಕಾರಗಳ ವಿರುದ್ಧ ಧಿಕ್ಕಾರ ಹಾಕಿದರು.

ಮೂಲಸೌಕರ್ಯಕ್ಕೆ ಆಗ್ರಹ; ಎತ್ತಿನಗಾಡಿ ಪ್ರತಿಭಟನೆ
ಎತ್ತಿನ ಬಂಡಿಗಳ ಸಮೇತ ನಗರಸಭೆಗೆ ಮುತ್ತಿಗೆ ಹಾಕಿದ ಜನರು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2021 | 7:46 PM

ಗದಗ: ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಎತ್ತಿನ ಬಂಡಿಗಳ ಸಮೇತ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಜನರು ಪ್ರತಿಭಟನೆ ನಡೆಸಿದ ಘಟನೆಗೆ ನಗರ ಸಾಕ್ಷಿಯಾಯಿತು.

ವೀರನಾರಾಯಣ ಹಾಗೂ ಕೆ.ಎಚ್.ಪಾಟೀಲ್ ಬಡಾವಣೆ ನಿವಾಸಿಗಳು ನಗರಸಭೆ ಕಚೇರಿ ಆವರಣಕ್ಕೆ ನುಗ್ಗಿ ಯುಜಿಡಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಜನರು ನಗರಸಭೆ ಅಧಿಕಾರಗಳ ವಿರುದ್ಧ ಧಿಕ್ಕಾರ ಹಾಕಿದರು.

ಅಪ್ರಾಪ್ತೆ ಮೇಲೆ ಸರಣಿ ಅತ್ಯಾಚಾರ; ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ

Published On - 7:46 pm, Fri, 5 February 21