ದುಬೈ: ಭಾರತ ಮೂಲದ ಎರಡು ವರ್ಷದ ಬಾಲಕ ಯುಎಇನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಅಷ್ಟೇ ಅಲ್ಲ, ಕ್ಯಾನರ್ ರೋಗಿಗೆ ಕೂದಲು ನೀಡಿದ ಅತಿ ಸಣ್ಣ ವಯಸ್ಸಿನ ಹುಡುಗ ಈತ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.
ಭಾರತ ಮೂಲದ ತಕ್ಷ್ ಜೈನ್ ಕೂದಲು ದಾನ ಮಾಡಿದ ಬಾಲಕ. ಈತನ ವಯಸ್ಸು ಕೇವಲ 2 ವರ್ಷದ ಹತ್ತು ತಿಂಗಳು. ಫ್ರೆಂಡ್ಸ್ ಆಫ್ ಕ್ಯಾನ್ಸರ್ ಪೇಷಂಟ್ ಹೆಸರಿನ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನ ಆರಂಭಿಸಿತ್ತು. ಈ ಆಂದೋಲನಕ್ಕೆ ತಕ್ಷ್ ಕೂಡ ಬೆಂಬಲ ಸೂಚಿಸಿದ್ದಾನೆ.
ನನ್ನ ಮಗಳು 2019ರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ನೀಡಿದ್ದಳು. ಇದನ್ನು ನೋಡಿ ತಕ್ಷ್ ಸ್ಫೂರ್ತಿ ಪಡೆದುಕೊಂಡಿದ್ದ. ಆತ ಸದಾ ಕೂದಲು ದಾನ ನೀಡಬೇಕು ಎಂದು ಹೇಳಿಕೊಳ್ಳುತ್ತಿದ್ದ. ಇದು ನನಗೆ ತುಂಬಾ ಖುಷಿ ನೀಡಿತ್ತು. ಹೀಗಾಗಿ, ಆತನ ತಲೆ ಕೂದಲನ್ನು ಬೆಳೆಯಲು ಬಿಟ್ಟಿದ್ದೆ ಎಂದು ಹೇಳಿದ್ದಾರೆ ತಕ್ಷ್ನ ತಾಯಿ.
ಗುರುವಾರ ಫ್ರೆಂಡ್ಸ್ ಆಫ್ ಕ್ಯಾನ್ಸರ್ ಪೇಷಂಟ್ ಚ್ಯಾರಿಟಿ ಕೂದಲು ದಾನ ಮಾಡಿ ಎನ್ನುವ ಆಂದೋಲನ ಆರಂಭಿಸಿತ್ತು. ಯುಎಇನ ಒಟ್ಟು 7 ಶಾಲೆಗಳು ಇದರ ಭಾಗವಾಗಿದೆ. ತಕ್ಷ್ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಕೆಲಸದಿಂದ ಸ್ಫೂರ್ತಿ ಪಡೆದ ಅನೇಕರು ಕೂದಲು ದಾನ ಮಾಡಲು ಮುಂದೆ ಬಂದಿದ್ದಾರೆ.
World Cancer Day 2021 ‘ಕ್ಯಾನ್ಸರ್ ಬಂದಾಕ್ಷಣ ಹೆದರಬೇಡ್ರಿ’- ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ