ಆದೇಶ ಉಲ್ಲಂಘಿಸಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ, ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

ಮೈಸೂರು: ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ನಂಜನಗೂಡು ತಹಶೀಲ್ದಾರ್​ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ಮಾಡಲಾಗಿದೆ. ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ ಆಚರಿಸಿದ್ದಾರೆ. ಫೆಬ್ರವರಿಯಲ್ಲಿ ಮಾರಮ್ಮನ ಜಾತ್ರೆ ವೇಳೆ ಎರಡು ಕೊಮಿನ ನಡುವೆ ಗುಂಪುಘರ್ಷಣೆಯಾಗಿತ್ತು. ಈ ವಿಚಾರವಾಗಿ ನಂಜನಗೂಡು ತಹಶೀಲ್ದಾರ್ ಗ್ರಾಮದಲ್ಲಿ ಯಾವುದೇ ಹಬ್ಬ, ಜಾತ್ರೆ ನಡೆಸದಂತೆ ನಿರ್ಬಂಧಿಸಿದ್ದರು. ಆದರೆ ತಹಶೀಲ್ದಾರ್​ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ದೈಹಿಕ ಅಂತರ […]

ಆದೇಶ ಉಲ್ಲಂಘಿಸಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ, ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

Updated on: Sep 03, 2020 | 8:12 AM

ಮೈಸೂರು: ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ನಂಜನಗೂಡು ತಹಶೀಲ್ದಾರ್​ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ಮಾಡಲಾಗಿದೆ.

ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ ಆಚರಿಸಿದ್ದಾರೆ. ಫೆಬ್ರವರಿಯಲ್ಲಿ ಮಾರಮ್ಮನ ಜಾತ್ರೆ ವೇಳೆ ಎರಡು ಕೊಮಿನ ನಡುವೆ ಗುಂಪುಘರ್ಷಣೆಯಾಗಿತ್ತು. ಈ ವಿಚಾರವಾಗಿ ನಂಜನಗೂಡು ತಹಶೀಲ್ದಾರ್ ಗ್ರಾಮದಲ್ಲಿ ಯಾವುದೇ ಹಬ್ಬ, ಜಾತ್ರೆ ನಡೆಸದಂತೆ ನಿರ್ಬಂಧಿಸಿದ್ದರು.

ಆದರೆ ತಹಶೀಲ್ದಾರ್​ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಪೂಜೆ ಪುನಸ್ಕಾರಗಳನ್ನು ಕೈಗೊಂಡಿದ್ದಾರೆ. ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆ ನಡೆದಿದ್ದು, ಜಾತ್ರೆ ಆಯೋಜಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.