ಕೊರೊನಾ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಯುವ Photographer​ ಸಾವು, ಯಾವೂರು?

ಕೊರೊನಾ ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಯುವ Photographer​ ಸಾವು, ಯಾವೂರು?

ನೆಲಮಂಗಲ: ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವ ಫೋಟೋಗ್ರಾಫರ್​ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಕಳುಹಿಸುವಾಗ ಌಂಬುಲೆನ್ಸ್​ನಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ನಿವಾಸಿ 33 ವರ್ಷದ ಫೋಟೋಗ್ರಾಫರ್​ ರಘು 1 ವಾರದಿಂದ ಎಂ.ಎಸ್. ಪಾಳ್ಯದ ನಾಗಪ್ಪ ಹಗ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿಯೇ ಮತ್ತೊಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಕಳುಹಿಸುವ ನೆಪ ಮಾಡಿ, ಌಂಬುಲೆನ್ಸ್​ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೂರ್ಣ ಪ್ರಮಾಣದ ವೆಂಟಿಲೇಶನ್ ಬಿಲ್ ಪಾವತಿಸಿಕೊಂಡು ಅಂಬ್ಯೂಲನ್ಸ್ ನಲ್ಲಿ ರೋಗಿಯನ್ನು ಹೊರಕ್ಕೆ ಕಳುಹಿಸಿದ್ದಾರೆ. ಆದ್ರೆ ಮಾರ್ಗ ಮಧ್ಯದಲ್ಲಿ ವ್ಯಕ್ತಿ ಸಾವಿಗೀಡಾದರೆಂದು ರಸ್ತೆಯಲ್ಲೆ ಆ್ಯಂಬುಲೆನ್ಸ್ ನಿಂತಿದೆ. ನಾಗಪ್ಪ ಹಗ್ಲಿ ಆಸ್ಪತ್ರೆ ವಿರುದ್ದ ಪೋಷಕರು ಕಿಡಿಕಾರಿದ್ದಾರೆ. ಮೃತ ಪೋಟೋಗ್ರಾಫರ್ ರಘು ಶವವಿರುವ ಆ್ಯಂಬುಲೆನ್ಸ್ ಬಳಿ 30ಕ್ಕೂ ಹೆಚ್ಚು ಪೋಟೋಗ್ರಾಫರ್ ಗಳು ಜಮಾಯಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click on your DTH Provider to Add TV9 Kannada