ಬಂದೂಕು ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಫುಲ್ ಡ್ಯಾನ್ಸ್.. ಕೈಲ್ ಪೋಳ್ದ್ ಸಂಭ್ರಮ

ಬಂದೂಕು ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಫುಲ್ ಡ್ಯಾನ್ಸ್.. ಕೈಲ್ ಪೋಳ್ದ್ ಸಂಭ್ರಮ

ಮಡಿಕೇರಿ: ಅದೇನ್ ಖುಷಿ.. ಅದೇನ್ ಸಡಗರ.. ಕೈಯಲ್ಲಿ ಬಂದೂಕು ಹಿಡಿದುಕೊಳ್ಳೋದೇನು.. ಫಳ ಫಳ ಹೊಳೆಯುವ ಆಯುಧಗಳಿಗೆ ಪೂಜೆ ಮಾಡೋದೇನು? ನಿಜಕ್ಕೂ ಇವರದ್ದು ಚರಿತ್ರೆ ಸೃಷ್ಟಿಸೋ ಅವತಾರನೇ ಬಿಡಿ.

ವನಿತೆಯರು ಕೂಡ ಕೈಯಲ್ಲಿ ಬಂದೂಕು ಹಿಡಿದು ಗುರಿ ಇಟ್ಟಿದ್ರು. ದೂರದಲ್ಲಿ ನೇತಾಡ್ತಿರೋ ತೆಂಗಿನ ಕಾಯಿಗೆ ಶೂಟ್ ಮಾಡಿದ್ರು. ಹೀಗೆ ಕೊಡಗಿನಲ್ಲಿ ಫೇಮಸ್ ಆಗಿರೋ ಕೈಲ್ ಪೋದ್ ಸಂಭ್ರಮ ಜೋರಾಗಿತ್ತು. ಕೃಷಿ ಚಟುವಟಿಕೆ ಮುಗಿದ ಬಳಿಕ ಹೀಗೆ ವಿಶಿಷ್ಟವಾಗಿ ಹಬ್ಬ ಆಚರಣೆ ಮಾಡ್ತಾರೆ.

ಕೊಡಗಿನ ಜನರ ಧಾರ್ಮಿಕ ಸಂಕೇತವಾದ ಕೋವಿ ಮತ್ತು ಕತ್ತಿಗಳನ್ನಿಟ್ಟು ಪೂಜಿಸುತ್ತಾರೆ. ಅದ್ರಂತೆ ನಿನ್ನೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಬಳಿ ಕೈಲ್ ಪೋದ್ ಆಚರಿಸಿದ್ರು. ಕೈಯಲ್ಲಿ ಬಂದೂಕು ಹಿಡಿದು ಗುಂಡಾರಿಸುವ ದೃಶ್ಯವಂತೂ ಅದ್ಭುತವಾಗಿತ್ತು.

ಇನ್ನು, ಮಡಿಕೇರಿ ನಗರದ ಹೊರಭಾಗದಲ್ಲಿ ಕೊಡವರು ತಮ್ಮದೇ ಆದ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ರು. ಬಂದೂಕುಧಾರಿಗಳಾಗಿದ್ದವರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದ್ರು. ಸದ್ಯ ವಿಭಿನ್ನ ಆಚರಣೆಗಳ ಮೂಲಕ ರೈತರು ರಿಲ್ಯಾಕ್ಸ್ ಆಗ್ತಿದ್ದಾರೆ. ಕೃಷಿ ಪರಿಕರಗಳಿಗೆ ಪೂಜೆಯ ಜೊತೆಗೆ ಕುಣಿದು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

Click on your DTH Provider to Add TV9 Kannada