ಇಮ್ತಿಯಾಜ್ ಖಾತ್ರಿ ಯಾರೆಂಬುದು ಗೊತ್ತಾ? ಬಾಲಿವುಡ್ ನಂಟು ಜಾಲಾಡಿದ ಸಂಬರಗಿ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಕೆಲ ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪದ ಬಗ್ಗೆ ಅನೇಕ ವಿಚಾರಗಳು ಬಹಿರಂಗವಾಗುತ್ತಿದ್ದಂತೆ ಬಾಲಿವುಡ್ನಲ್ಲೂ ಈ ಜಾಲದ ನಶೆ ಪಸರಿಸಿರುವ ಬಗ್ಗೆ ಹಾಗೂ ಅದು ನಮ್ಮ ರಾಜ್ಯದ ಪ್ರಭಾವೀ ರಾಜಕಾರಣಿಯೊಬ್ಬರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವುದನ್ನು ಪ್ರಶಾಂತ್ ಸಂಬರಗಿ ಪ್ರಸ್ತಾಪಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಮರ್ಡರ್ ಕೇಸ್‌ನಲ್ಲಿ […]

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಕೆಲ ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿದೆ ಎಂಬ ಆರೋಪದ ಬಗ್ಗೆ ಅನೇಕ ವಿಚಾರಗಳು ಬಹಿರಂಗವಾಗುತ್ತಿದ್ದಂತೆ ಬಾಲಿವುಡ್ನಲ್ಲೂ ಈ ಜಾಲದ ನಶೆ ಪಸರಿಸಿರುವ ಬಗ್ಗೆ ಹಾಗೂ ಅದು ನಮ್ಮ ರಾಜ್ಯದ ಪ್ರಭಾವೀ ರಾಜಕಾರಣಿಯೊಬ್ಬರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವುದನ್ನು ಪ್ರಶಾಂತ್ ಸಂಬರಗಿ ಪ್ರಸ್ತಾಪಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಮರ್ಡರ್ ಕೇಸ್‌ನಲ್ಲಿ ಮ್ಯಾನೇಜರ್ ಶ್ರುತಿ ಮೋದಿಯವರನ್ನು ಬಂಧಿಸ್ತಾರೆ. ವಿಚಾರಣೆ ವೇಳೆ ಇಮ್ತಿಯಾಜ್ ಖಾತ್ರಿ ಹೆಸರು ಕೇಳಿ ಬರುತ್ತದೆ. ಈ ಇಮ್ತಿಯಾಜ್ ಖಾತ್ರಿ ಯಾರೆಂಬುವುದನ್ನು ನೀವೇ ಹುಡುಕಿ. ಇಮ್ತಿಯಾಜ್‌ಗೂ ಸಲ್ಮಾನ್‌ಗೂ ಏನು ಸಂಬಂಧ ಎಂಬುವುದನ್ನು ಹುಡುಕಿ. 2017ರಲ್ಲಿ ಮುಂಬೈನಲ್ಲಿ ಇಮ್ತಿಯಾಜ್ ಹುಟ್ಟುಹಬ್ಬ ಕಾರ್ಯಕ್ರಮ ನಡೆದಿತ್ತು. ಆ ಪಾರ್ಟಿಗೆ ಕನ್ನಡ ಚಿತ್ರರಂಗದವರು ಯಾರೆಲ್ಲಾ ಹೋಗಿದ್ದರು. ಅದರ ಬಗ್ಗೆ ಮೊದಲು ತನಿಖೆ ಮಾಡಲಿ ಎಂದು ಪ್ರಶಾಂತ್ ಸಂಬರಗಿ ಆಂಗಿಕ ಅಭಿನಯದೊಂದಿಗೆ ಸುದ್ದಿಗಾರರಿಗೆ ತಿಳಿಸಿದರು.
JDSನಲ್ಲಿದ್ದ ನಾಯಕ ಕಾಂಗ್ರೆಸ್‌ಗೆ ಬಂದು ಗೆಲವು: ಇನ್ನು JDS ನಲ್ಲಿದ್ದ ನಾಯಕ, ಕಾಂಗ್ರೆಸ್‌ಗೆ ಬಂದು ಗೆಲವು ಸಾಧಿಸ್ತಾರೆ. ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟರನ್ನು ಕರೆಸುತ್ತಾರೆ. ಹುಟ್ಟುಹಬ್ಬದಲ್ಲಿ ಇಮ್ತಿಯಾಜ್ ಖಾತ್ರಿಯೂ ಭಾಗಿಯಾಗುತ್ತಾನೆ. ಹುಟ್ಟುಹಬ್ಬ ಕಾರ್ಯಕ್ರಮ ಬಳಿಕ ಆತ ಯಾರ ಕಾರಲ್ಲಿ ಓಡಾಡಿದ್ರು ಎಂಬುವುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಮಾಡಲಿ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿಯಲ್ಲಿ ಇಮ್ತಿಯಾಜ್ ಖಾತ್ರಿ ಮತ್ತು ಜಮೀರ್ ಅಹ್ಮದ್ ಬಗ್ಗೆ ಆರೋಪದ ಬಾಣಗಳನ್ನು ಎಸೆದಿದ್ದಾರೆ.
Published On - 11:52 am, Thu, 3 September 20




