ಆದೇಶ ಉಲ್ಲಂಘಿಸಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ, ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು: ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ನಂಜನಗೂಡು ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ಮಾಡಲಾಗಿದೆ. ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ ಆಚರಿಸಿದ್ದಾರೆ. ಫೆಬ್ರವರಿಯಲ್ಲಿ ಮಾರಮ್ಮನ ಜಾತ್ರೆ ವೇಳೆ ಎರಡು ಕೊಮಿನ ನಡುವೆ ಗುಂಪುಘರ್ಷಣೆಯಾಗಿತ್ತು. ಈ ವಿಚಾರವಾಗಿ ನಂಜನಗೂಡು ತಹಶೀಲ್ದಾರ್ ಗ್ರಾಮದಲ್ಲಿ ಯಾವುದೇ ಹಬ್ಬ, ಜಾತ್ರೆ ನಡೆಸದಂತೆ ನಿರ್ಬಂಧಿಸಿದ್ದರು. ಆದರೆ ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ದೈಹಿಕ ಅಂತರ […]

ಮೈಸೂರು: ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ನಂಜನಗೂಡು ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ಮಾಡಲಾಗಿದೆ.
ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಮಲ್ಲಾಶ್ರಮ್ಮ ಮಸಣಮ್ಮ ಜಾತ್ರೆ ಆಚರಿಸಿದ್ದಾರೆ. ಫೆಬ್ರವರಿಯಲ್ಲಿ ಮಾರಮ್ಮನ ಜಾತ್ರೆ ವೇಳೆ ಎರಡು ಕೊಮಿನ ನಡುವೆ ಗುಂಪುಘರ್ಷಣೆಯಾಗಿತ್ತು. ಈ ವಿಚಾರವಾಗಿ ನಂಜನಗೂಡು ತಹಶೀಲ್ದಾರ್ ಗ್ರಾಮದಲ್ಲಿ ಯಾವುದೇ ಹಬ್ಬ, ಜಾತ್ರೆ ನಡೆಸದಂತೆ ನಿರ್ಬಂಧಿಸಿದ್ದರು.
ಆದರೆ ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಭರ್ಜರಿ ಜಾತ್ರೆ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಪೂಜೆ ಪುನಸ್ಕಾರಗಳನ್ನು ಕೈಗೊಂಡಿದ್ದಾರೆ. ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾತ್ರೆ ನಡೆದಿದ್ದು, ಜಾತ್ರೆ ಆಯೋಜಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.






