ಮೆಕ್ಕೆ ಜೋಳದ ರಾಶಿಗೆ ಬೆಂಕಿ ಹಾಕಿದ ದುಷ್ಕರ್ಮಿಗಳು; 5 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಗಳು ಭಸ್ಮ

| Updated By: ಸಾಧು ಶ್ರೀನಾಥ್​

Updated on: Jan 29, 2021 | 1:11 PM

ಮಾರುತಿ ಕಾಳಪ್ಪ ಎಂಬ ರೈತರಿಗೆ ಸೇರಿದ ಮೆಕ್ಕೆ ಜೋಳದ ರಾಶಿಗೆ ತಡರಾತ್ರಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.

ಮೆಕ್ಕೆ ಜೋಳದ ರಾಶಿಗೆ ಬೆಂಕಿ ಹಾಕಿದ ದುಷ್ಕರ್ಮಿಗಳು; 5 ಎಕರೆಯಲ್ಲಿ ಬೆಳೆದಿದ್ದ ಜೋಳದ ತೆನೆಗಳು ಭಸ್ಮ
ಸುಟ್ಟು ಕರಕಲಾದ ಮೆಕ್ಕೆ ಜೋಳದ ರಾಶಿ
Follow us on

ಹಾವೇರಿ: ಒಕ್ಕಣೆ ಮಾಡಲು ಹಾಕಿದ್ದ ಮೆಕ್ಕೆ ಜೋಳದ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.

ಮಾರುತಿ ಕಾಳಪ್ಪ ಎಂಬ ರೈತರಿಗೆ ಸೇರಿದ ಮೆಕ್ಕೆ ಜೋಳದ ರಾಶಿಗೆ ತಡರಾತ್ರಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಅವಘಡದಿಂದ 5 ಎಕರೆಯಲ್ಲಿ ಬೆಳೆದಿದ್ದ ಒಂದೂವರೆ ಲಕ್ಷ ರುಪಾಯಿ ಮೌಲ್ಯದ ಮೆಕ್ಕೆ ಜೋಳದ ತೆನೆಗಳು ಸುಟ್ಟು ಭಸ್ಮವಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲಿ ಮೆಕ್ಕೆ ಜೋಳದ ತೆನೆಗಳು ಸುಟ್ಟು ಕರಕಲಾಗಿತ್ತು.

ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆ ಕಾರು ಹತ್ತಿಸಿ.. ಅಮಾನುಷವಾಗಿ ಕೊಂದ ನಿವೃತ್ತ ಪೊಲೀಸ್‌ ಇನ್​ಸ್ಪೆಕ್ಟರ್​