Petrol Price: ದೂರದ ಪ್ರಯಾಣಕ್ಕೆ ಪ್ಲಾನ್​ ಮಾಡಿದ್ದೀರಾ? ಒಮ್ಮೆ ಗಮನಿಸಿ ಪೆಟ್ರೋಲ್​, ಡೀಸೆಲ್ ದರದ ಮಾಹಿತಿ ಇಲ್ಲಿದೆ

| Updated By: Digi Tech Desk

Updated on: Feb 12, 2021 | 9:14 AM

Petrol Diesel Rate: ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ 70 ಪೈಸೆ ಹೆಚ್ಚಳದ ನಂತರ ಈಗೆ ಪ್ರತಿ ಲೀ.ಗೆ ₹90.53 ಹಾಗೂ ಡೀಸೆಲ್ ಬೆಲೆ ಲೀ.ಗೆ ₹82.40 ಆಗಿದೆ.

Petrol Price: ದೂರದ ಪ್ರಯಾಣಕ್ಕೆ ಪ್ಲಾನ್​ ಮಾಡಿದ್ದೀರಾ? ಒಮ್ಮೆ ಗಮನಿಸಿ  ಪೆಟ್ರೋಲ್​, ಡೀಸೆಲ್ ದರದ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಇಂದು ಪೆಟ್ರೋಲ್​ ಬೆಲೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. ಹಾಗೂ ಡೀಸೆಲ್​ ಬೆಲೆ 27 ಪೈಸೆ ಏರಿಕೆಯಾಗಿದೆ. ಇಂಧನಗಳ ಬೆಲೆ ಪ್ರತಿದಿನ ಸಾಗುತ್ತಿದ್ದಂತೇ ಏರಿಕೆ ಮಟ್ಟವನ್ನು ಕಾಣುತ್ತಿದೆ. ಬೆಂಗಳೂರಿನಲ್ಲಿ 70 ಪೈಸೆ ಹೆಚ್ಚಳದ ನಂತರ ಇದೀಗ ಪ್ರತಿ ಲೀ.ಗೆ ₹90.53 ಹಾಗೂ ಡೀಸೆಲ್ ಬೆಲೆ ಒಂದು ಲೀ.ಗೆ ₹82.40 ಆಗಿದೆ.

ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್​ ಬೆಲೆ ಪ್ರತಿ ಲೀ.ಗೆ ₹87.60 ಹಾಗೂ ಡೀಸೆಲ್​ ಲೀ. ₹77.73 ಆಗಿದೆ. ಹಾಗೂ ಮುಂಬೈನಲ್ಲಿ ಪ್ರತಿ ಲೀ.ಗೆ ಪೆಟ್ರೋಲ್​ ಬೆಲೆ ₹94.12, ಡೀಸೆಲ್​ ಪ್ರತಿ ಲೀ.ಗೆ ₹84.63 ಇದೆ.

ಕಳೆದ ಮೂರು ದಿನಗಳಿಂದ ಸ್ಥಿರವಾಗಿದ್ದ ಪೆಟ್ರೋಲ್​ ಬೆಲೆ ನಿನ್ನೆ ಮಂಗಳವಾರ(ಫೆ.09)ರಂದು 35 ಪೈಸೆ ಏರಿಕೆಯಾಗಿತ್ತು. ಇದೀಗ ಇಂದು(ಫೆ.10) 70 ಪೈಸೆ ಏರಿಕೆ ಕಂಡಿದೆ. ದಿನೇ ದಿನೇ ಸಾಗುತ್ತಲೇ ತೈಲಗಳ ದರ ಏರುತ್ತಲಿದೆ. ದೂರದ ಪ್ರಯಾಣ ಸಾಗುತ್ತಿರುವವರು ಒಮ್ಮೆ ಯೋಚಿಸುವುದು ಅತ್ಯಗತ್ಯ ಎಂಬಂತಾಗಿದೆ.

 

Published On - 8:37 am, Wed, 10 February 21